ನನ್ನ ಹಣೆಬರಹದಲ್ಲಿ ಸಿಎಂ ಆಗೋದು ಬರೆದಿದ್ರೆ 2024 ರಲ್ಲಿ ಸಿಎಂ ಆಗೋದು ಖಚಿತ
Team Udayavani, Dec 31, 2019, 4:18 PM IST
ವಿಜಯಪುರ : ಯಾರ ಹಣೆ ಬರಹದಲ್ಲಿ ಏನಿದೆ ಯಾರಿಗೆ ಗೊತ್ತು, ಲಕ್ಷ್ಮಣ ಸವದಿ ಹಣೆ ಬರಹದಲ್ಲಿ ಡಿಸಿಎಂ ಬರೆದಿದೆ ಆಗಿದ್ದಾರೆ. 2024 ರಲ್ಲಿ ನಾನು ಸಿಎಂ ಆಗೋದಿದ್ರೆ ಯಾರು ಕಸಿದುಕೊಳ್ತಾರಾ. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೀಗೆ ಹೇಳುವ ಮೂಲಕ ಹಳೆ ವರ್ಷ ಕೊನೆಯಲ್ಲಿ, ಹೊಸ ವರ್ಷದ ಹೊಸ್ತಿಲಲ್ಲಿ ಮುಖ್ಯಮಂತ್ರಿ ಕನಸು ಬಿತ್ತಿದ್ದಾರೆ.
ಮಂಗಳವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಭವಿಷ್ಯದಲ್ಲಿ ತಾವು ಕೇವಲ ಮಂತ್ರಿ ಆಕಾಂಕ್ಷಿಯಲ್ಲ ಸಿಎಂ ಅಭ್ಯರ್ಥಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಯತ್ನಾಳ, ನನ್ನ ಹಣೆಬರಹದಲ್ಲಿ ಸಿಎಂ ಆಗೋದು ಬರೆದಿದ್ರೆ ನಾನು 2024 ರಲ್ಲಿ ಸಿಎಂ ಆಗೋದು ಖಚಿತ ಎಂದರು.
ಸಚಿವ ಸ್ಥಾನಕ್ಕಾಗಿ ಉಮೇಶ ಕತ್ತಿ ಲಾಭಿ ಮಾಡಲು ಸಿಎಂ ಸುತ್ತ ಗಿರಕಿ ಹೊಡೆಯುವ ಅವಶ್ಯಕತೆ ಇಲ್ಲ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ, ಅವರು ಸಚಿವ ಸ್ಥಾನ ಖಚಿತ.
ಅಥಣಿ, ಕಾಗವಾಡ ಗೆಲ್ಲಿಸಿದ್ರೆ ಸಚಿವ ಸ್ಥಾನ ಸಿಗುತ್ತೆ ಅಂತ ನಾಯಕರು, ನಾವೆಲ್ಲ ಹೇಳಿದ್ದೆವು. ಹಾಗಾಗಿ ಕತ್ತಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಇನ್ನು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮರಾಠರ ಪರವಾದ ಹೆಳಿಕೆ ರಾಜಕೀಯ ಅನಿವಾರ್ಯತೆ ಯಿಂದ ಕೂಡಿದೆ. ಇತರೆ ಕಡೆಗಿಂತ ಬೆಳಗಾವಿ ರಾಜಕಾರಣ ಬೇರೆ ಇದೆ.
ಚುನಾವಣೆಯಲ್ಲಿ ಮರಾಠ ಮತ ಸೆಳೆಯಲು ಅವರ ಪರವಾದ ಮಾತನಾಡುತ್ತಾರೆ. ಮರಾಠರ ಪರ ಮಾತಾಡದಿದ್ದರೆ ಎಲೆಕ್ಷನ್ ಸೋಲುತ್ತಾರೆ. ಹೀಗಾಗಿ ಮನಸ್ಸಿನಿಂದ ಅಲ್ಲದಿದ್ದರೂ ಮತಕ್ಕಾಗಿ ಮಾತನಾಡುತ್ತಾರೆ ಎಂದರು.
ಮಹಾರಾಷ್ಟ್ರ ರಾಜ್ಯ ಗಡಿ ಕ್ಯಾತೆ ವಿಚಾರವನ್ನು ವಿವಾದ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಆದ್ಯತೆ ನೀಡಬೇಕು.
ಮರಾಠರು ಬೆಳಗಾವಿ ತಮ್ಮದು ಎಂದ ಮಾತ್ರಕ್ಕೆ ಕನ್ನಡಿಗರಾದ ನಾವು ಬಿಡೋಕಾಗುತ್ತ. ಕನ್ನಡಿಗರೇನು ಕೈಯಲ್ಲಿ ಬಳೆ ತೊಟ್ಟುಕೊಂಡಿಲ್ಲ, ತಾಕತ್ತಿದ್ದರೆ ಬೆಳಗಾವಿಯನ್ನು ಪಡೆಯಲಿ ನೋಡೋಣ ಎಂದು ತಿರುಗೇಟು ನೀಡಿದರು.
ಇನ್ನು ಐದು ವರ್ಷ ಮಾತ್ರವಲ್ಲ ಯಾರೇ ಹುಟ್ಟಿದರೂ ಬೆಳಗಾವಿಯನ್ನು ಕರ್ನಾಟಕ ದಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.