BBK11: ಮೋಕ್ಷಿತಾ To ಚೈತ್ರಾ.. ಬಿಗ್ ಬಾಸ್ ಮನೆಯಿಂದ ಈ ವಾರ ಆಚೆ ಬರುವುದು ಯಾರು?
, Dec 8, 2024, 7:40 AM IST
ಬೆಂಗಳೂರು: ಬಿಗ್ ಬಾಸ್ ಕಿಚ್ಚನ (Kiccha Sudeep) ಪಂಚಾಯ್ತಿನಲ್ಲಿ ಸ್ಪರ್ಧಿಗಳಿಗೆ ವಾರದಲ್ಲಿ ನಡೆದ ಸರಿ – ತಪ್ಪುಗಳ ಬಗ್ಗೆ ಸುದೀಪ್ ಪಾಠ ಮಾಡಿದ್ದಾರೆ.
ತ್ರಿವಿಕ್ರಮ್, ಗೌತಮಿ ಹಾಗೂ ಮೋಕ್ಷಿತಾ ಅವರು ಆಟದಲ್ಲಿ ಎಲ್ಲಿ ಎಡವಿದ್ದಾರೆ. ಏನಾಯಿತು, ಯಾಕಾಯಿತು ಎಲ್ಲದರ ಬಗ್ಗೆಯೂ ಖಡಕ್ ಆಗಿ ವಾರ್ನ್ ಮಾಡುತ್ತಲೇ ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ.
ಸ್ಪರ್ಧಿಗಳು ಗುಟ್ಟಾಗಿ ಮಾತನಾಡಿದ ಸಂಗತಿಗಳನ್ನು ವಿಡಿಯೋ ಮೂಲಕ ಪ್ಲೇ ಮಾಡಿ ಬಹಿರಂಗವಾಗಿ ಯಾವುದು ಇಷ್ಟವಾಗಿಲ್ಲ, ಯಾಕೆ ಇಷ್ಟ ಆಗಿಲ್ಲ ಎನ್ನುವುದರ ಬಗ್ಗೆ ಪ್ರಶ್ನೆ ಮಾಡಿ ಸ್ಪರ್ಧಿಗಳಿಂದಲೇ ಉತ್ತರವನ್ನು ಕೇಳಿದ್ದಾರೆ.
ಸ್ಪರ್ಧಿಗಳಿಗೆ ಎಲಿಮಿನೇಷನ್ ಢವ ಢವ:
ಇನ್ನೊಂದು ಕಡೆ ಮನೆಮಂದಿಗೆ ಈ ವಾರ ಯಾರು ಮನೆಯಿಂದ ಆಚೆ ಹೋಗುತ್ತಾರೆ ಎನ್ನುವುದರ ಬಗ್ಗೆ ಚಿಂತೆ ಶುರುವಾಗಿದೆ. ಸೇಫ್ ಆದವರು ಅಬ್ಬಾ ಎಂದು ನಿಟ್ಟುಸಿರು ಬಿಟ್ಟರೆ ಉಳಿದವರು ಕೈಕಟ್ಟಿಕೊಂಡು ತಾನು ಉಳಿಯಬೇಕೆಂದು ಮನಸ್ಸಲ್ಲೇ ಪ್ರಾರ್ಥಿಸುತ್ತಿದ್ದಾರೆ.
ಈ ವಾರ ಬೆನ್ನಿಗೆ ಚೂರಿ ಹಾಕಿ ಎಲಿಮಿನೇಷನ್ ಮಾಡುವ ಪ್ರಕ್ರಿಯೆ ಇತ್ತು. ಸ್ಪರ್ಧಿಗಳು ನಾಮಿನೇಷನ್ ವಿಚಾರವಾಗಿ ವಾಗ್ವಾದ ನಡೆಸಿದ್ದಾರೆ.
ಈ ವಾರ ಉಗ್ರಂ ಮಂಜು (Ugram Manju), ಗೌತಮಿ ಜಾಧವ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ (Chaithra Kundapura), ಭವ್ಯ ಗೌಡ, ಗೋಲ್ಡ್ ಸುರೇಶ್, ಐಶ್ವರ್ಯಾ ಶಿಂಧೋಗಿ, ರಜತ್ ಕಿಶನ್ ನಾಮಿನೇಟ್ ಆಗಿದ್ದಾರೆ.
ಈ ಪೈಕಿ ಶನಿವಾರದ ಸಂಚಿಕೆಯಲ್ಲಿ ರಜತ್, ಗೌತಮಿ ಅವರು ಎಲಿಮಿನೇಷನ್ ತೂಗುಗತ್ತಿಯಿಂದ ಪಾರಾಗಿದ್ದಾರೆ.
ಈ ವಾರ ಎಲಿಮಿನೇಷನ್ ಇಲ್ಲ; ಆದರೆ..
ನಾಮಿನೇಷನ್ ಪ್ರಕ್ರಿಯೆ ನಡೆದರೂ ಈ ವಾರ ವೋಟಿಂಗ್ ಓಪನ್ ಆಗಿಲ್ಲ. ಮೂಲಗಳ ಪ್ರಕಾರ ಈ ವೀಕ್ ಯಾವುದೇ ಎಲಿಮಿನೇಷನ್ ಇರಲ್ಲವೆನ್ನಲಾಗುತ್ತಿದೆ.
ಎಲಿಮಿನೇಷನ್ ಇಲ್ಲದೆ ಇರುವುದು ಈ ಸೀಸನ್ ನಲ್ಲಿ ಮೊದಲಲ್ಲ. ಈ ಹಿಂದೆ ಭವ್ಯ, ತ್ರಿವಿಕ್ರಮ್- ರಂಜಿತ್ ಅವರಿಗೂ ಎಲಿಮಿನೇಷನ್ ಚಮಕ್ ಕೊಟ್ಟು ಆ ಬಳಿಕ ಎಲಿಮಿನೇಷನ್ ಮಾಡಿರಲಿಲ್ಲ. ಬಹುಶಃ ಈ ವಾರವೂ ಅದೇ ರೀತಿಯ ಚಮಕ್ ಕೊಟ್ಟು ಸ್ಪರ್ಧಿಗಳ ಎದೆ ಬಡಿತವನ್ನು ಬಿಗ್ ಬಾಸ್ ಹೆಚ್ಚಿಸಲಿದ್ದಾರೆ ಎನ್ನಲಾಗುತ್ತಿದೆ.
ಸೀಕ್ರೆಟ್ ರೂಮ್‌ನಲ್ಲಿ ಒಬ್ಬರನ್ನು ಹಾಕಿ ಎಲಿಮಿನೇಷನ್ ಆಟಕ್ಕೆ ಟ್ವಿಸ್ಟ್ ತರಲಿದ್ದಾರೆ ಎನ್ನುವ ಮಾತು ಕೂಡ ವೀಕ್ಷಕರ ವಲಯದಲ್ಲಿ ಹರಿದಾಡುತ್ತಿದೆ.
ಇದುವರೆಗೆ ಎಲಿಮಿನೇಟ್ ಆದವರು:
ಯಮುನಾ ಶ್ರೀನಿಧಿ, ಹಂಸ, ಮಾನಸಾ, ಅನುಷಾ ರೈ, ಧರ್ಮ ಕೀರ್ತಿರಾಜ್ ಔಟ್ ಆಗಿದ್ದು, ಜಗದೀಶ್, ರಂಜಿತ್ ಅವರು ಮೊದಲೇ ಆಚೆ ಹೋಗಿದ್ದರು. ಇನ್ನು ಶೋಭಾ ಶೆಟ್ಟಿ ಅನಾರೋಗ್ಯದ ಕಾರಣದಿಂದ ಆಚೆ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ
BBK11: ಸತ್ಯಕ್ಕೆ ಸೋಲಿಲ್ಲ.. ರಜತ್ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
BBK11: ಮಂಜು ನೋಡಿ ʼಥೂ..ʼ ಎಂದ ತ್ರಿವಿಕ್ರಮ್; ದೊಡ್ಮನೆಯಲ್ಲಿ ಮತ್ತೆ ಹೋಗೋ ಬಾರೋ ಗಲಾಟೆ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.