ಶೀಘ್ರ ರೈತರಿಗೆ ಬೆಳೆ ವಿಮೆ ಮಂಜೂರು: ಸಚಿವ ಬಿ.ಸಿ.ಪಾಟೀಲ್
Team Udayavani, Sep 16, 2020, 6:03 PM IST
ಕಲಬುರಗಿ: ಕಳೆದ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆಯನ್ನು ಶೀಘ್ರದಲ್ಲೇ ಮಂಜೂರಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಮಂಗಳವಾರ ಇಲ್ಲಿನ ಕೃಷಿ ಮಹಾವಿದ್ಯಾಲಯದಲ್ಲಿ ಬೆಳೆ ಸಮೀಕ್ಷೆ ಹಾಗೂ ಇಲಾಖೆಯ ವಿಭಾಗ ಮಟ್ಟದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟೋತ್ತಿಗೆ ಬೆಳೆ ವಿಮೆ ಮಂಜೂರಾಗಿ ರೈತರ ಖಾತೆಗೆ ಪರಿಹಾರ ಮೊತ್ತ ಜಮಾವಾಗಬೇಕಿತ್ತು.ಆದರೆ ಬೆಳೆ ಹಾನಿಯ ಪ್ರಮಾಣ ವರದಿ ರೂಪಿಸುವಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ಕೆಲವು ತಿಂಗಳು ಹಿಡಿದಿದೆ. ಈಗ ಎಲ್ಲ ಕಾರ್ಯ ಮುಗಿದಿದೆ. ಹೀಗಾಗಿ ವಾರ ಇಲ್ಲವೇ 15 ದಿನದಲ್ಲಿ ಬೆಳೆ ವಿಮೆ ಮಂಜೂರಾಗಲಿದೆ ಎಂದರು.
ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಹೀಗಾಗಿ ರಾಜ್ಯಕ್ಕೆ ಅಂದಾಜು ಸಾವಿರ ಕೋ.ರೂ ಬೆಳೆ ವಿಮ ಹಣ ಮಂಜೂರಾಗುವ ವಿಶ್ವಾಸ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಬೆಳೆ ಇಳುವರಿ ಪ್ರಮಾಣ ನಿಗದಿ ಮಾಡುವ ವರದಿಗಳು ಸಮರ್ಪಕವಾಗಿ ನಡೆಯಿತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಹೀಗಾಗಿ ಬೆಳೆವಿಮೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳೊಂದಿ ಸಭೆ ನಡೆಸಲಾಗುವುದು. ಈಗಿನ ಬೆಳೆವಿಮೆ ಪದ್ದತಿ ಕೈ ಬಿಟ್ಟು ಹವಾಮಾನ ಆಧಾರಿತ ಬೆಳೆವಿಮೆ ಜಾರಿಗೆ ತರಲು ಮುಂದಾಗುವುದಾಗಿ ಸಚಿವ ಪಾಟೀಲ್ ತಿಳಿಸಿದರು.
ಬೆಳೆವಿಮೆ ಮಂಜೂರಾತಿಯಲ್ಲಿ ರೈತರಿಗೆ ಶೋಷಣೆ ಯಾಗುತ್ತಿದೆ. ಒಂದು ತಾಲೂಕಿಗೆ ಪರಿಹಾರ ಬಂದರೆ ಪಕ್ಕದ ತಾಲೂಕಿಗೆ ನಯಾ ಪೈಸೆ ಬರೋದಿಲ್ಲ. ಇದರ ಬಗ್ಗೆ ಸ್ವತಃ: ಅರಿತುಕೊಳ್ಳಲಾಗುವುದು ಎಂದರು.
ಬಿಎಸ್ಸಿ ಕೃಷಿ, ಪಶು ಸಂಗೋಪನಾ, ತೋಟಗಾರಿಕೆ ಸೇರಿ ಇತರ ವೃತ್ತಿಪರ ಕೋರ್ಸುಗಳ ರೈತರ ಮಕ್ಕಳು ಶೇ. 40ರಷ್ಟು ಸೀಟುಗಳ ಮೀಸಲಾತಿಗೆ ಯಾವುದೇ ಧಕ್ಕೆ ಬಾರದಂತೆ ನಿಗಾ ವಹಿಸಲಾಗುವುದು. ಕೊವಿಡ್- ೧೯ ಹಿನ್ನಲೆ ಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಿಕ್ಕಾಗಿಲ್ಲ. ಸಿಇಟಿ ಫಲಿತಾಂಶ ಹಾಗೂ ರೈತ ಮಕ್ಕಳ ಸರ್ಟಿಫಿಕೇಟ್ ಆಧಾರದ ಮೇಲೆ ಪ್ರವೇಶಾತಿ ಕಲ್ಪಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಶಾಸಕ ಬಿ.ಜಿ.ಪಾಟೀಲ್, ಮಾಜಿ ಶಾಸಕ ದೊಡ್ಡ ಪ್ಪಗೌಡ ಪಾಟೀಲ್ ನರಿಬೋಳ, ಜಿ.ಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತಗೌಡ ಪಾಟೀಲ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.