ಭಾರತದ ಪಂದ್ಯಗಳು ಫಿಕ್ಸ್ ಆಗಿಲ್ಲ: ಐಸಿಸಿ ಸ್ಪಷ್ಟನೆ
Team Udayavani, May 18, 2021, 6:30 AM IST
ದುಬಾೖ : ಭಾರತ ಪಾಲ್ಗೊಂಡ ಎರಡು ಅಂತಾರಾಷ್ಟ್ರೀಯ ಪಂದ್ಯಗಳು ಫಿಕ್ಸ್ ಆಗಿವೆ ಎಂಬ ರೀತಿಯಲ್ಲಿ “ಅಲ್ ಜಜೀರಾ’ ವಾಹಿನಿ ಪ್ರಸಾರ ಮಾಡಿದ ಡಾಕ್ಯುಮೆಂಟರಿ ಕೇವಲ ಕಾಲ್ಪನಿಕ ರೀತಿಯಲ್ಲಿದೆ ಎಂದು ಐಸಿಸಿ ತೀರ್ಮಾನಕ್ಕೆ ಬಂದಿದೆ. ಈ ಪಂದ್ಯಗಳು ಫಿಕ್ಸ್ ಆಗಿವೆ ಎಂಬುದರಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ ಎಂದಿದೆ.
“ಅಲ್ ಜಜೀರಾ’ ಅರೆಬಿಕ್ ಚಾನೆಲ್‌ನಲ್ಲಿ 2018ರಂದು “ಕ್ರಿಕೆಟ್ಸ್ ಮ್ಯಾಚ್ ಫಿಕ್ಸರ್’ ಎಂಬ ಸಾಕ್ಷ್ಯಚಿತ್ರವೊಂದು ಪ್ರಸಾರವಾಗಿತ್ತು. ಇದರಲ್ಲಿ ಭಾರತ ಪಾಲ್ಗೊಂಡ ಎರಡು ಪಂದ್ಯಗಳ ಉಲ್ಲೇಖವಿತ್ತು. ಇವುಗಳೆಂದರೆ, ಇಂಗ್ಲೆಂಡ್ ಎದುರಿನ 2016ರ ಚೆನ್ನೈ ಟೆಸ್ಟ್ ಹಾಗೂ ಆಸ್ಟ್ರೇಲಿಯ ವಿರುದ್ಧ ಆಡಲಾದ 2017ರ ರಾಂಚಿ ಟೆಸ್ಟ್ ಪಂದ್ಯ. ಇವೆರಡೂ ಫಿಕ್ಸ್ ಆಗಿದ್ದವು ಎಂದು ಇದರಲ್ಲಿ ಆರೋಪಿಸಲಾಗಿತ್ತು.
ತನಿಖೆ ನಡೆಸಿದ ಐಸಿಸಿ
ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಕೂಡಲೇ ತನಿಖೆ ಆರಂಭಿಸಿತ್ತು. ಇದಕ್ಕಾಗಿ ನಾಲ್ವರು ಸ್ವತಂತ್ರ ಸದಸ್ಯರನ್ನೊಳಗೊಂಡ “ಬೆಟ್ಟಿಂಗ್ ಮತ್ತು ಕ್ರಿಕೆಟಿಂಗ್ ಸ್ಪೆಷಲಿಸ್ಟ್’ಗಳ ತನಿಖಾ ದಳವನ್ನು ನೇಮಿಸಿತು. ಆ ಇಡೀ ಕಾರ್ಯಕ್ರಮ ಕೇವಲ ಕಪೋಲಕಲ್ಪಿತ ರೀತಿಯಲ್ಲಿದೆಯೇ ಹೊರತು ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಯಾವುದೇ ನಿಖರ ಸಾಕ್ಷ್ಯಾಧಾರಗಳನ್ನು ಹೊಂದಿಲ್ಲ ಎಂದು ತನಿಖಾ ತಂಡ ವರದಿ ಸಲ್ಲಿಸಿದೆ. ಹೀಗಾಗಿ ಈ ಪಂದ್ಯಗಳು ಫಿಕ್ಸ್ ಆಗಿವೆ ಎಂಬ ತೀರ್ಮಾನಕ್ಕೆ ಬರಲಾಗದು ಎಂಬುದಾಗಿ ಐಸಿಸಿ ತಿಳಿಸಿದೆ. ಜತೆಗೆ ಈ ಸಾಕ್ಷ್ಯಚಿತ್ರ ನಿರ್ಮಿಸಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರಲು ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.