Doctor’s opinion; ಹೃದಯದ ಆರೈಕೆ ಬಗ್ಗೆ ಇರಲಿ ಅತೀವ ಕಾಳಜಿ
Team Udayavani, Aug 8, 2023, 8:00 AM IST
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ದಿಢೀರನೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಜನರೇ ಹೆಚ್ಚು ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ಆತಂಕಕಾರಿ ವಿಚಾರ. ಅಲ್ಲದೆ ಪುರುಷರಲ್ಲಷ್ಟೇ ಹೃದಯಾಘಾತ ಹೆಚ್ಚಳ ಎಂಬ ಮಾತು ಸುಳ್ಳಾಗಿ, ಮಹಿಳೆಯರಲ್ಲೂ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿವೆ. ಹಾಗಾದರೆ, ಕೊರೊನಾ ಅನಂತರದಲ್ಲಿ ಮನುಷ್ಯರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದೆಯೇ? ಹೃದಯಾಘಾತಗಳಿಗೆ ಏನು ಕಾರಣ? ಇಲ್ಲಿದೆ ತಜ್ಞ ವೈದ್ಯರ ಅಭಿಪ್ರಾಯ.
ಕೋವಿಡ್ ಅನಂತರದ ಈ ಯುಗದಲ್ಲಿ ಮಹಿಳೆಯರಲ್ಲಿ ಹೃದಯ ಆರೋಗ್ಯವನ್ನು ಕಾಯ್ದುಕೊಳ್ಳಲು ಪೂರ್ವಭಾವಿ ಮತ್ತು ರೋಗ ತಡೆಗಟ್ಟುವಂತಹ ಹೃದಯ ಆರೈಕೆ ಅತ್ಯಂತ ಮುಖ್ಯ.
ಭಾರತದಲ್ಲಿ ಮಹಿಳೆಯರಿಗೆ ಹೃದಯ ರೋಗದ ಗಮನಾರ್ಹ ಅಪಾಯಗಳು ಕಾಣಿಸುತ್ತಿವೆ ಎಂಬ ವಾಸ್ತವತೆಯನ್ನು ಇತ್ತೀಚಿನ ಅಧ್ಯಯನಗಳು ಬೆಳಕಿಗೆ ತಂದಿವೆ. ಅಚ್ಚರಿಯ ವಿಷಯವೆಂದರೆ ದೇಶದಲ್ಲಿ ಮಹಿಳೆಯರ ಸಾವಿಗೆ ಹೃದಯರೋಗ ಮುಂಚೂಣಿಯ ಕಾರಣವಾಗಿ ಹೊರಹೊಮ್ಮಿದೆಯಲ್ಲದೆ, ಒಟ್ಟಾರೆ ಸಾವುಗಳಲ್ಲಿ ಸುಮಾರು ಶೇ.25ರಷ್ಟು ಪಾಲು ಹೊಂದಿರುತ್ತದೆ. ಕೋವಿಡ್ ಅನಂತರದ ದಿನಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಹೃದಯಾಘಾತಗಳನ್ನು ವೈದ್ಯರು ಕಾಣುತ್ತಿದ್ದಾರೆ. ವಾಸ್ತವವಾಗಿ ಹೃದಯಾಘಾತ ಮಹಿಳೆಯರಲ್ಲಿ ಸಾವಿನ ಪ್ರಾಥಮಿಕ ಕಾರಣವಾಗಿದೆ. ಭಾರತದಲ್ಲಿ ಎಲ್ಲ ಮಹಿಳೆಯರ ಸಾವುಗಳಲ್ಲಿ ಶೇ.18ರಷ್ಟು ಮರಣಗಳಿಗೆ ಇದು ಕಾರಣವಾಗಿರುತ್ತದೆ. ಆಘಾತಕಾರಿ ವಿಷಯವೆಂದರೆ, ಭಾರತೀಯ ಮಹಿಳೆಯರಲ್ಲಿ ಹೃದಯರೋಗದಿಂದ ಸಾವಿನ ದರವು ಸ್ತನ ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್‌ಗಳಿಂದ ಸಂಭವಿಸುವ ಒಟ್ಟಾರೆ ಸಾವುಗಳ ದರವನ್ನು ದಾಟಿದೆ. ಭಾರತದ ಮಹಿಳೆಯರಲ್ಲಿ ಹೃದಯ ರೋಗದ ಬೆಳೆಯುತ್ತಿರುವಂತಹ ಸಮಸ್ಯೆಯನ್ನು ಗಮನಿಸಬೇಕಾದ ತುರ್ತು ಅಗತ್ಯವನ್ನು ಈ ಎಚ್ಚರಿಕೆ ನೀಡುವಂತಹ ಅಂಕಿಅಂಶಗಳು ಒತ್ತಿ ಹೇಳುತ್ತವೆ.
ಹೆಚ್ಚು ರಕ್ತದೊತ್ತಡ, ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಮತ್ತು ಮಧುಮೇಹಗಳಂತಹ ಅಪಾಯದ ಅಂಶಗಳು ಹೆಚ್ಚಾಗಿ ರುವುದು ಭಾರತೀಯ ಮಹಿಳೆಯರಲ್ಲಿ ಹೃದಯ ರೋಗದ ಅಪಾಯ ಹೆಚ್ಚಾಗಲು ಕೊಡುಗೆ ನೀಡುತ್ತಿದೆ. ದೈಹಿಕ ಚಟುವಟಿಕೆ ಇಲ್ಲದಿರುವುದು, ಕುಟುಂಬ ಪೋಷಣೆ ಮತ್ತು ಹೆಚ್ಚಾದ ಒತ್ತಡಗಳು ಈ ಅಪಾಯಗಳು ಕಾಣಿಸಿಕೊಳ್ಳುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತವೆ. ಋತುಬಂಧದ ಸಮಯದಲ್ಲಿ ಕಾಣಿಸಿಕೊಳ್ಳುವ ಹಾರ್ಮೋನ್ ಬದಲಾವಣೆಗಳು ಕೂಡ ಹೃದಯ ರಕ್ತನಾಳಗಳ ಆರೋಗ್ಯದ ಮೇಲೆ ಪರಿಣಾಮ ಬೀರ ಬಹುದಲ್ಲದೆ, ಹೃದಯ ರೋಗಕ್ಕೆ ಹೆಚ್ಚಿನ ಅಪಾಯ ಗಳನ್ನು ಉಂಟು ಮಾಡುತ್ತದೆ. ಭಾರತೀಯ ಮಹಿಳೆಯರಲ್ಲಿ ಹೃದಯ ರೋಗಗಳನ್ನು ನಿಭಾಯಿಸುವಲ್ಲಿ ಇರುವ ಪ್ರಮುಖ ಸವಾಲುಗಳೆಂದರೆ ಜಾಗೃತಿಯ ಕೊರತೆ ಮತ್ತು ಪರಿಸ್ಥಿತಿ ಕುರಿತು ಜ್ಞಾನ ಇಲ್ಲದಿರುವುದು ಮುಖ್ಯವಾಗಿರುತ್ತದೆ. ಮಹಿಳೆಯರಲ್ಲಿ ಹೃದಯ ರೋಗದ ಲಕ್ಷಣಗಳು ಪುರುಷರಿಗಿಂತ ವಿಭಿನ್ನವಾಗಿರಬಹುದು. ಸೂಕ್ಷ್ಮವಾದ ಅಥವಾ ವಿಲಕ್ಷಣ ರೀತಿಯ ಲಕ್ಷಣಗಳು ಇರುತ್ತವೆಯಲ್ಲದೆ, ಇವುಗಳನ್ನು ಸಾಮಾನ್ಯ ವಾಗಿ ನಿರ್ಲಕ್ಷಿಸಬಹುದಲ್ಲದೆ, ಇತರ ಕಾರಣಗಳಿರಬಹುದೆಂದು ಊಹಿಸಬ ಹುದು. ಇದರಿಂದ ರೋಗನಿರ್ಣಯ ಮತ್ತು ಚಿಕಿತ್ಸೆ ವಿಳಂಬವಾಗು ವುದಲ್ಲದೆ, ರೋಗಿಯನ್ನು ಗುಣಪಡಿಸು ವಲ್ಲಿ ಕಳಪೆ ಫಲಿತಾಂಶಗಳು ಇರುತ್ತವೆ.
ಈ ಬೆಳೆಯುತ್ತಿರುವ ಸಮಸ್ಯೆಯ ವಿರುದ್ಧ ಹೋರಾಡಲು ಬಹುಮುಖೀ ಮಾರ್ಗದ ಅಗತ್ಯವಿರುತ್ತದೆ. ಪ್ರಥಮ ವಾಗಿ ಮತ್ತು ಅತ್ಯಂತ ಮುಖ್ಯವಾಗಿ ಹೃದಯ ರೋಗ ಮತ್ತು ಅದರ ಅಪಾಯದ ಅಂಶಗಳ ಕುರಿತು ಮಹಿಳೆ ಯರು, ಕುಟುಂಬಗಳು ಮತ್ತು ಆರೋಗ್ಯ ಸೇವೆ ಪೂರೈಕೆದಾರರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಆವಶ್ಯಕವಾಗಿರುತ್ತದೆ. ಮಹಿಳೆಯರಲ್ಲಿ ಹೃದಯರೋಗಕ್ಕೆ ನಿರ್ದಿಷ್ಟವಾದ ಮಾಹಿತಿಯನ್ನು ಹರಡುವಲ್ಲಿ ಶೈಕ್ಷಣಿಕ ಅಭಿಯಾನಗಳು, ಸಮುದಾಯ ಕಾರ್ಯಕ್ರಮಗಳು ಮತ್ತು ಮಾಧ್ಯಮ ಅಭಿಯಾನಗಳು ಪರಿಣಾಮಕಾರಿ ಉಪಕರಣಗಳಾಗಬಹುದು. ಆರೋಗ್ಯಕರ ಜೀವನಶೈಲಿ, ನಿಗದಿತ ದೈಹಿಕ ಚಟುವಟಿಕೆ, ಹೆಚ್ಚಿನ ಕಾಬೋìಹೈಡ್ರೇಟ್ ಒಳಗೊಂಡ ಆಹಾರಗಳನ್ನು ಕಡಿಮೆ ಮಾಡುವುದು, ತಂಬಾಕು ಬಳಕೆ ತಪ್ಪಿಸುವುದು ಸೇರಿದಂತೆ ಆರೋಗ್ಯಕರ ಆಹಾರ ಸೇವನೆಯ ಅಭ್ಯಾಸಗಳಿಗೆ ಒತ್ತು ನೀಡಬೇಕು. ಜತೆಗೆ ಒತ್ತಡದ ನಿರ್ವಹಣೆಯು ಆವಶ್ಯಕವಾಗಿರುತ್ತದೆ.
ಇಸಿಜಿ ಮತ್ತು ಎಕೋನಂತಹ ಸರಳ ಪರೀಕ್ಷೆಗಳು ಹೃದಯದ ಸಮಸ್ಯೆಗಳನ್ನು ತಡೆಯಬಹುದು. ದೈಹಿಕ ಚಟುವಟಿಕೆಗಳ ಮಿತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ನೀವು ಕಂಡಲ್ಲಿ ವೈದ್ಯರ ಮಾರ್ಗದರ್ಶನದ ಅಡಿಯಲ್ಲಿ ರೋಗನಿರ್ಣಯ ಕೈಗೊಳ್ಳಲು ಮತ್ತು ವೈದ್ಯರೊಂದಿಗೆ ಸಮಾಲೋಚನೆ ಕೈಗೊಳ್ಳಲು ಮುಂದಾಗುವುದು ಮುಖ್ಯವಾಗಿರುತ್ತದೆ.
ಆರೋಗ್ಯಕರ ಮತ್ತು ಕೈಗೆಟಕುವ ಪೋಷಣೆ ಪೂರೈಸುವುದು ಮತ್ತು ಧ್ಯಾನ ಹಾಗೂ ಸಾಮಾಜಿಕ ಬೆಂಬಲದಂತಹ ಒತ್ತಡ ನಿರ್ವಹಣೆ ಕಾರ್ಯತಂತ್ರಗಳನ್ನು ಜಾರಿಗೆ ತರುವುದು ಜತೆಗೆ ಮಹಿಳಾ ಸಮೂಹಗಳನ್ನು ಈ ಕಾರ್ಯಗಳಲ್ಲಿ ಸೇರಿಸಿಕೊಂಡು ಮಹಿಳಾ ಸಮೂಹಗಳು ಪರಸ್ಪರ ಸಾಮಾನ್ಯ ತೊಂದರೆಗಳನ್ನು ಚರ್ಚಿಸಲು ಅವಕಾಶ ಮಾಡಿಕೊಡುವುದು ಕೂಡ ಪ್ರಮುಖ ಆದ್ಯತೆ ಹೊಂದಿರುತ್ತದೆ. ತಮ್ಮ ತಮ್ಮ ಹೃದಯ ರಕ್ತನಾಳಗಳ ಆರೋಗ್ಯದ ಜವಾಬ್ದಾರಿಯನ್ನು ತಾವೇ ಕೈಗೆತ್ತಿಕೊಳ್ಳಲು ಮಹಿಳೆಯರನ್ನು ಸಶಕ್ತೀಕರಿಸುವುದು ಪ್ರಮುಖ ಅಗತ್ಯವಾಗಿದೆ. ಇದರಲ್ಲಿ ಲಿಂಗ ಸೂಕ್ಷ್ಮತೆಯ ಆರೋಗ್ಯ ಸೇವೆಯನ್ನು ಪ್ರೋತ್ಸಾಹಿಸುವುದು, ತಮ್ಮ ಆರೋಗ್ಯ ಕುರಿತಂತೆ ಮಹಿಳೆಯರು ಸಕ್ರಿಯವಾಗಿರುವುದನ್ನು ಪ್ರೋತ್ಸಾಹಿಸುವುದು ಅಲ್ಲದೆ, ಈ ವಿಷಯಗಳಲ್ಲಿ ಸ್ವಯಂ ವಕಾಲತ್ತು ವಹಿಸುವುದನ್ನು ಪ್ರೋತ್ಸಾಹಿ ಸುವುದು ಕೂಡ ಮುಖ್ಯವಾಗಿರುತ್ತದೆ. ಕಾಳಜಿ ಮೂಡಿ ಸುವಂತಹ ಲಕ್ಷಣಗಳು ಕಾಣಿಸಿ ಕೊಂಡಲ್ಲಿ ತತ್‌ಕ್ಷಣ ಸೂಕ್ತ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳುವಂತೆ ಮಹಿಳೆಯರನ್ನು ಪ್ರೋತ್ಸಾಹಿಸಬೇಕು.
ಅಂತಿಮವಾಗಿ, ಭಾರತದಲ್ಲಿ ಮಹಿಳೆಯರಲ್ಲಿನ ಹೃದಯ ರೋಗ ಕುರಿತು ಗಮನಿಸುವಲ್ಲಿ, ಜಾಗೃತಿ ಮೂಡಿಸುವುದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು, ಅಪಾಯದ ಅಂಶಗಳ ನಿರ್ವಹಣೆ, ಅನನ್ಯ ಸವಾಲುಗಳು, ಆರೋಗ್ಯ ಸೇವೆಯ ಲಭ್ಯತೆ, ಸಶಕ್ತೀಕರಣ ಮತ್ತು ಸಂಶೋಧನೆಗಳನ್ನು ಒಳಗೊಂಡ ಸಮಗ್ರ ಮಾರ್ಗದ ಅಗತ್ಯ ಇರುತ್ತದೆ. ನೀವು ಹೆಚ್ಚಿನ ಹೃದಯ ಸಂಬಂಧಿ ಅಪಾಯದ ವರ್ಗದಲ್ಲಿದ್ದೀರಾ ಎಂಬುದನ್ನು ಪರೀಕ್ಷಿಸಿಕೊಳ್ಳಲು ವೈದ್ಯರ ಸಲಹೆ ಪಡೆಯುವುದು ಮುಖ್ಯ ವಾಗಿರುತ್ತದೆಯಲ್ಲದೆ, ಪೂರ್ವಭಾವಿ ಹೃದಯ ಪರೀಕ್ಷೆಗಳಿಗೆ ಒಳ ಗಾಗುವುದು ಪ್ರಮುಖವಾಗಿರುತ್ತದೆ. ಈ ಕಾರ್ಯತಂತ್ರಗಳನ್ನು ಜಾರಿಗೆ ತರುವುದರಿಂದ ಮಹಿಳೆಯರು ತಮ್ಮ ಹೃದಯ ರಕ್ತನಾಳಗಳ ಆರೋಗ್ಯವನ್ನು ನಿಯಂತ್ರಿಸಿಕೊಳ್ಳಲು ಅವರನ್ನು ಸಶಕ್ತೀಕರಿಸಬಹುದು. ಜತೆಗೆ ಹೃದಯದ ರೋಗದ ಹೊರೆಯನ್ನು ಕಡಿಮೆ ಮಾಡಿ ಭಾರತದಲ್ಲಿನ ಒಟ್ಟಾರೆ ಮಹಿಳೆಯರ ಯೋಗಕ್ಷೇಮವನ್ನು ಹೆಚ್ಚಿಸಬಹುದು. ಎಲ್ಲರಿಗೂ ಹೆಚ್ಚು ಆರೋಗ್ಯಕರವಾದ ಭವಿಷ್ಯವನ್ನು ಸೃಷ್ಟಿಸುವುದಕ್ಕೆ ಮಹಿಳೆಯರಲ್ಲಿ ಹೃದಯ ರೋಗದ ಸದ್ದಿಲ್ಲದ ಬೆದರಿಕೆಯನ್ನು ಗುರುತಿಸಿ ಗಮನಿಸುವುದು ಆವಶ್ಯಕವಾಗಿರುತ್ತದೆ.
– ಡಾ| ತಮೀಮ್ ಅಹ್ಮದ್, ಹೃದಯ ತಜ್ಞರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.