Belthangady: 2019ರ ಮಹಾಪ್ರವಾಹ ನೆನಪಿಗೆ ತಂದ ನೆರೆ
ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಕಾಂಕ್ರೀಟ್ ತಡೆಗೋಡೆ ಕುಸಿತ
Team Udayavani, Jul 31, 2024, 1:54 AM IST
ಬೆಳ್ತಂಗಡಿ: ಸೋಮವಾರ ಸುರಿದ ಭಾರೀ ಮಳೆಯಿಂದ ಉಂಟಾದ ಹಾನಿ ಮತ್ತು ನೆರೆಯು ಬೆಳ್ತಂಗಡಿ ತಾಲೂಕಿನಲ್ಲಿ 2019ರ ಆಗಸ್ಟ್ 9ರಂದು ಸಂಭವಿಸಿದ ಭೀಕರ ಪ್ರವಾಹದ ನೆನಪು ಕಾಡುವಂತಿತ್ತು.
ಈ ಬಾರಿ ಪಶ್ಚಿಮಘಟ್ಟ ಸುರಕ್ಷಿತವಾಗಿದ್ದ ಪರಿಣಾಮ ಸಂಭವನೀಯ ಅಪಾಯ ತಗ್ಗಿದೆ. ಇಲ್ಲದೇ ಹೋದಲ್ಲಿ ದೊಡ್ಡ ದುರಂತ ಮತ್ತೆ ಮರುಕಳಿಸುವ ಸಾಧ್ಯತೆ ಎದುರಾಗಿತ್ತು. 2019ರ ಬಳಿಕ ಇದೇ ಮೊದಲ ಬಾರಿಗೆ ನೇತ್ರಾವತಿ, ಮೃತ್ಯುಂಜಯ, ಸೋಮಾವತಿ ನದಿ ಉಕ್ಕಿ ಈ ಮಟ್ಟದ ನೆರೆ ಹಾಗೂ ಹಾನಿ ಎದುರಾಗಿತ್ತು.
ಕಾಳಜಿ ಕೇಂದ್ರ ಸ್ಥಾಪನೆ
ಲಾೖಲ ಗ್ರಾಮದ ಪುತ್ರಬೈಲು ಮತ್ತು ಗುರಿಂಗಾನ ಎಂಬಲ್ಲಿ ವಿಪರೀತ ಮಳೆಯಿಂದಾಗಿ ಹತ್ತಾರು ವಾಸ್ತವ್ಯದ ಮನೆಯೊಳಗೆ ನೀರು ನುಗ್ಗಿದ್ದರಿಂದ ಇಲ್ಲಿನ ಕರ್ನೋಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಮನೆಮಂದಿಯನ್ನು ಇರಿಸಲು ತಾಲೂಕು ಆಡಳಿತ ಸೂಚಿಸಿದೆ.
ಎಸ್‌ಡಿಎಂ ಆಸ್ಪತ್ರೆ ತಡೆಗೋಡೆ ಕುಸಿತ
ತೀವ್ರ ಮಳೆಯಿಂದಾಗಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಕಾಂಕ್ರೀಟ್ ತಡೆಗೋಡೆ ಕುಸಿದಿದ್ದು, ಕೆಳಭಾಗದಲ್ಲಿ ನಿಲ್ಲಿಸಿದ್ದ ಸಿಬಂದಿಗಳ ಸುಮಾರು 20ಕ್ಕೂ ಅಧಿಕ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ. ತಡೆಗೋಡೆ ಹಿಂಬದಿ ಮಹಮ್ಮದ್ ಇಜಾಜ್ ಅವರ ಮನೆಯಿದ್ದು, ಮನೆ ಸಮೀಪದವರೆಗೆ ಮಣ್ಣು ಕುಸಿದಿದ್ದು ಮನೆ ಕುಸಿಯವ ಭೀತಿ ಎದುರಾಗಿದೆ. ಇದರಿಂದ ಮನೆಮಂದಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಉಜಿರೆ ರಾ. ಹೆದ್ದಾರಿ ಜಲಾವೃತ
ಬೆಳ್ತಂಗಡಿ -ಉಜಿರೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕೆಳಗಿನ ಪೇಟೆ ಪೆಟ್ರೋಲ್ ಬಂಕ್‌ನಿಂದ ಬೆನಕ ಆಸ್ಪತ್ರೆವರೆಗೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಮುಳುಗಡೆಯಾಗುವಷ್ಟು ಮಟ್ಟಿಗೆ ರಸ್ತೆಯಲ್ಲಿ ಹೊಳೆಯಂತೆ ತುಂಬಿತ್ತು. ಪರಿಣಾಮ ಹೆದ್ದಾರಿ ಸಂಚಾರ ತಾಸುಗಟ್ಟಲೆ ತಡೆಯಾಯಿತು.
50 ಮನೆಗಳಿಗೆ ಸಮಸ್ಯೆ
ಕಲ್ಮಂಜ ಗ್ರಾಮದ ಗುತ್ತುಬೈಲು ಸಂಪರ್ಕ ರಸ್ತೆಯ ಕಿರು ಸೇತುವೆ ತೀವ್ರ ಮಳೆಗೆ ಮುರಿದು ಸಂಪರ್ಕ ಕಡಿತಗೊಂಡಿದೆ. ಇದರಿಂದ 50 ಮನೆಗಳಿಗೆ ಸಂಪರ್ಕಕ್ಕೆ ತೊಂದರೆ ಆದ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.