Benami Property: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಈಗ ದೋಷಮುಕ್ತ
Team Udayavani, Dec 8, 2024, 3:37 AM IST
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಈಗ ಕಳಂಕಮುಕ್ತರಾಗಿದ್ದಾರೆ. ಅಜಿತ್ ಮತ್ತವರ ಕುಟುಂಬದ ಮೇಲೆ 2021ರಲ್ಲಿ ದಾಖಲಾಗಿದ್ದ 1 ಸಾವಿರ ಕೋಟಿ ರೂ. ಮೊತ್ತದ ಬೇನಾಮಿ ಆಸ್ತಿ ಪ್ರಕರಣದಲ್ಲಿ ಬೇನಾಮಿ ಆಸ್ತಿ ವಹಿವಾಟು ತಡೆ ಮೇಲ್ಮನವಿ ನ್ಯಾಯಾಧಿಕರಣ ಕ್ಲೀನ್ಚಿಟ್ ನೀಡಿದೆ.
ಅಜಿತ್ ಪವಾರ್, ಸುನೇತ್ರಾ ಪವಾರ್ ಹಾಗೂ ಪಾರ್ಥ ಪವಾರ್ ಬೇನಾಮಿ ಆಸ್ತಿಗಳನ್ನು ಹೊಂದಿದ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿದ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಸಂಬಂಧಪಟ್ಟ ಆಸ್ತಿ ಖರೀದಿ ಪ್ರಕ್ರಿಯೆಯನ್ನು ಕಾನೂನಾತ್ಮಕ ಮಾರ್ಗಗಳ ಮೂಲಕವೇ ಮಾಡಲಾಗಿದೆ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
ಹೀಗಾಗಿ 2021ರಲ್ಲಿ ಜಪ್ತಿ ಮಾಡಲಾಗಿದ್ದ 1,000 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯು ವಾರಸುದಾರರಿಗೆ ಹಿಂದಿರುಗಿಸಿದೆ. ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮಾರನೇ ದಿನವೇ ಈ ಆದೇಶ ಹೊರಬಿದ್ದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.