ಚರ್ಮಕ್ಕೆ ಪ್ರಯೋಜನಕಾರಿ…ಸೌಂದರ್ಯದ ಪ್ರತೀಕ ರೋಸ್ ವಾಟರ್ ನಿಂದ ಹಲವು ಪ್ರಯೋಜನಗಳಿವೆ…
ರೋಸ್ ವಾಟರ್ ಹೆಚ್ಚಿನ ಎಲ್ಲಾ ಮಹಿಳೆಯರ ಸೌಂದರ್ಯದ ಗುಟ್ಟು ಎಂದರೆ ತಪ್ಪಲ್ಲ.
Team Udayavani, Jan 3, 2023, 5:45 PM IST
ರೋಸ್ ವಾಟರ್ (ಗುಲಾಬಿ ದಳ)… ಪ್ರಾಚೀನ ಕಾಲ ಎಂದರೆ ರಾಜ ರಾಣಿಯವರ ಕಾಲದಿಂದಲೂ ಉಪಯೋಗಿಸಿಕೊಂಡು ಬಂದಿರುವ ಸೌಂದರ್ಯ ವರ್ಧಕವಾಗಿದೆ. ಇದರ ಬಳಕೆಯಿಂದ ಅನೇಕ ಸೌಂದರ್ಯವರ್ಧಕ ಗುಣಗಳನ್ನು ಪಡೆಯಬಹುದು.
ರೋಸ್ ವಾಟರ್ ಹೆಚ್ಚಿನ ಎಲ್ಲಾ ಮಹಿಳೆಯರ ಸೌಂದರ್ಯದ ಗುಟ್ಟು ಎಂದರೆ ತಪ್ಪಲ್ಲ. ಇಂದಿನ ಮಹಿಳೆಯರು ರೋಸ್ ವಾಟರ್ ಹೆಚ್ಚಾಗಿ ಬಳಸುತ್ತಾರೆ. ಎಣ್ಣೆ ತ್ವಚೆ, ಒಣ ತ್ವಚೆ, ಸೆನ್ಸಿಟಿವ್ ಸ್ಕಿನ್ ಹೀಗೆ ಯಾವ ರೀತಿಯ ಚರ್ಮ ಹೊಂದಿರುವವರು ಕೂಡಾ ರೋಸ್ ವಾಟರ್ ಬಳಸಬಹುದು. ರೋಸ್ ವಾಟರ್ ಚರ್ಮವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ. ಬ್ಯಾಕ್ಟೀರಿಯ ಸೋಂಕಿನಿಅದ ರಕ್ಷಿಸುತ್ತದೆ. ಗಾಯಗಳು, ಸುಟ್ಟ ಗಾಯಗಳನ್ನು ಗುಣಪಡಿಸುತ್ತದೆ. ಮುಖ, ತ್ವಚೆ, ಕೂದಲು, ಆರೋಗ್ಯ ಹೀಗೆ ವಿವಿಧ ರೀತಿಯ ಸಮಸ್ಯೆಗಳಿಗೂ ರೊಸ್ ವಾಟರ್ ಉತ್ತಮ ಪರಿಹಾರ. ಇದರ ಉಪಯೋಗ ಹಾಗೂ ಮನೆಯಲ್ಲೇ ತಯಾರಿಸುವ ವಿಧಾನವನ್ನೂ ತಿಳಿದುಕೊಳ್ಳೋಣ.
ಕ್ಲೆನ್ಸಿಂಗ್ ಮಿಲ್ಕ್ ನಂತೆ ಕಾರ್ಯ ನಿರ್ವಹಿಸುವ ರೋಸ್ ವಾಟರ್‌ನಿಂದ ಚರ್ಮಕ್ಕೆ ಹಲವು ರೀತಿಯ ಉಪಯೋಗಗಳಿವೆ. ಅವುಗಳೆಂದರೆ:
ರೋಸ್ ವಾಟರ್ ಕಣ್ಣಿಗೆ ಒಳ್ಳೆಯದು. ಕಣ್ಣನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಡಾರ್ಕ್ ಸರ್ಕಲ್ಸ್ ತೆಗೆದುಹಾಕುತ್ತದೆ. ಇಡೀ ದಿನ ಕಂಪ್ಯೂಟರ್, ಮೊಬೈಲ್ ನೋಡಿ ಕಣ್ಣುಗಳಿಗೆ ಸುಸ್ತಾಗಿದ್ದರೆ ಕಣ್ಣುರಿ ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಿಸಲು ರೋಸ್ ವಾಟರ್ ಸಹಾಯ ಮಾಡುತ್ತದೆ.
ತಲೆಹೊಟ್ಟು ನಿವಾರಿಸಲು ರೋಸ್ ವಾಟರ್ ತಲೆ ಬುಡಕ್ಕೆ ಹಚ್ಚಿದರೆ ಉತ್ತಮ ಕಂಡೀಷನರ್‌ನಅತೆ ಕೆಲಸ ಮಾಡುತ್ತದೆ. ಎರಡು ಚಮಚ ಗ್ಲಿಸರಿನ್ ಮತ್ತು ಎರಡು ಚಮಚ ರೋಸ್ ವಾಟರ್ ಬೆರೆಸಿ ತಲೆಗೆ ಹಚ್ಚಿ ಐದು ನಿಮಿಷ ಚೆನ್ನಾಗಿ ಮಸಾಜ್ ಮಾಡಿದರೆ ಇಣ ಕೂದಲು ಮೃದುವಾಗುತ್ತದೆ. ಕೂದಲು ಬೆಳವಣಿಗೆಗೆ ಹಾಗೂ ಉದುರಿದ ಕೂದಲಿನ ಜಾಗದಲ್ಲಿ ಮತ್ತೆ ಕುದಲು ಬೆಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಮೊಡವೆ ಸಮಸ್ಯೆ ನಿವಾರಣೆಗೆ:
1) ಒಂದು ಚಮಚ ಗುಲಾಬಿ ದಳಕ್ಕೆ ನಿಂಬೆರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಕಲೆಯೂ ಉಳಿಯುವುದಿಲ್ಲ.
2) ಒಂದು ಚಮಚ ಲವಂಗ ಪುಡಿಯನ್ನು ಒಂದು ಚಮಚ ಗುಲಾಬಿ ದಳ ಚೆನ್ನಾಗಿ ಮಿಶ್ರಣ ಮಾಡಿ, ಆ ಮಿಶ್ರಣವನ್ನು ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಹಚ್ಚಿ, ಇಣಗಿದ ಬಳಿಕ ತೊಳೆಯಿರಿ. ಇದರಿಂದ ಮೊಡವರಗಳು ನಿವಾರಣೆಯಾಗುತ್ತದೆ. ಗುಲಾಬಿ ದಳದೊಂದಿಗೆ ಜೇನುತುಪ್ಪ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದಲೂ ಮುಖದ ಕಾಂತಿ ಹೆಚ್ಚಾಗುತ್ತದೆ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆರಡು ಬಾರಿ ರೋಸ್ ವಾಟರ್ ಬಳಸುವುದು ಸಹಕರಿಯಾಗಲಿದೆ.
ರೋಸ್ ವಾಟರ್ ತಯಾರಿಸುವ ವಿಧಾನ 1:
ತಾಜಾ ಗುಲಾಬಿಗಳನ್ನು ಆರಿಸಿಕೊಳ್ಳಿ. ರಾಸಾಯನಿಕ ಪದಾರ್ಥಗಳನ್ನು ಸಿಂಪಡನೆ ಮಾಡದ ಗುಲಾಬಿ ಸಿಕ್ಕಿದರೆ ಇನ್ನೂ ಒಳ್ಳೆಯದು. ಮೊದಲಿಗೆ ಗುಲಾಬಿ ಎಸಳುಗಳನ್ನು ಬಿಡಿಸಿಕೊಂಡು, ಅದನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಗುಲಾಬಿ ಎಸಳುಗಳನ್ನು ಆ ನೀರಿಗೆ ಹಾಕಿ ನೀರು ಕುದಿಯಲು ಬಿಡಿ. ಕಡಿಮೆ ಉರಿಯಲ್ಲಿ ಸುಮಾರು 10- 15 ನಿಮಿಷ ಕಾಲ ನೀರು ಕುದಿಯುತ್ತಿದ್ದಂತೆ ಗುಲಾಬಿ ದಳಗಳು ಬಣ್ಣ ಕಳೆದುಕೊಳ್ಳುತ್ತಿರುತ್ತದೆ. ದಳಗಳು ರಸ ಬಿಟ್ಟ ನಂತರ ನೀರು ಸೋಸಿಕೊಳ್ಳಿ. ನಂತರ ಅದನ್ನು ತಣ್ಣಗಾದ ಮೇಲೆ ಫ್ರಿಡ್ಜ್ ನಲ್ಲಿ ಇಟ್ಟರೆ ಹಲವು ದಿನಗಳವರೆಗೆ ಉಪಯೋಗಿಸಿಕೊಳ್ಳಬಹುದು.
ರೋಸ್ ವಾಟರ್ ತಯಾರಿಸುವ ವಿಧಾನ 2:
ನೈಸರ್ಗಿಕ ಗುಲಾಬಿ ದಳ ಆರಿಸಿಕೊಂಡು ಶುದ್ಧವಾಗಿ ತೊಳೆದು ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ನೀರು ಚೆನ್ನಾಗಿ ಕುದಿಸಿ, ಆರಿಸಿ ನಂತರ ತೊಳೆದಿಟ್ಟಿದ್ದ ಗುಲಾಬಿ ದಳಗಳನ್ನು ಹಾಕಿ ಮುಚ್ಚಳ ಮುಚ್ಚಿ ಅರ್ಧ ಗಂಟೆ ಹಾಗೆ ಬಿಡಿ. ಅರ್ಧ ಗಂಟೆಯ ಬಳಿಕ ನೀರನ್ನು ಸೋಸಿ ಒಂದು ಬಾಟಲಿಯಲ್ಲಿ ಶೇಖರಿಸಿಡಿ.
*ಕಾವ್ಯಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.