ಬೆಂಗಳೂರು ಸಿನಿಮೋತ್ಸವ : ಇಲ್ಲಿವೆ ನಾಳೆಯ ಸಿನಿಮಾಗಳು
Team Udayavani, Mar 4, 2022, 7:32 PM IST
ಬೆಂಗಳೂರು : ಮಾರ್ಚ್ 5 ಶನಿವಾರ ವಾರಾಂತ್ಯ. ಸಾಮಾನ್ಯವಾಗಿ ಹೆಚ್ಚು ಜನಸಂದಣಿ ಇರುವ ದಿನ. ಹಾಗಾಗಿ ಆಯ್ದ ಸಿನಿಮಾಗಳಿಗೆ ಟಿಕೇಟುಗಳೂ ಸಿಗುವುದು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಆರು ವಿಭಿನ್ನ ನಿರ್ವಹಣೆ, ಕಥಾವಸ್ತುವಿನ ಚಿತ್ರಗಳನ್ನು ಪಟ್ಟಿ ಮಾಡಲಾಗಿದೆ. ಟಿಕೇಟು ಕಾದರಿಸಿ ವೀಕ್ಷಿಸಿ.
ಎ ಹೀರೋ (A Hero)- ಇರಾನ್ – 2021- ಅಸ್ಘರ್ ಫಹ್ರಾದಿ
ಅಸ್ಘರ್ ಫಹ್ರಾದಿ ಇರಾನಿನ ಆಧುನಿಕ ಸಂದರ್ಭದ ಕಥಾನಕಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾದವ. ಈಗಾಗಲೇ ಎರಡು ಚಿತ್ರಗಳಿಗೆ [ಎ ಸಪರೇಶನ್ ಮತ್ತು ಸೇಲ್ಸ್ ಮ್ಯಾನ್] ಆಸ್ಕರ್ ಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕ. ಕಾನ್ ಸಿನಿಮಾದಲ್ಲಿ ಗ್ರ್ಯಾಂಡ್ ಫಿಕ್ಸ್ ಪ್ರಶಸ್ತಿ ಪಡೆದ ಚಿತ್ರವಿದು. ಈ ಬಾರಿಯ ಆಸ್ಕರ್ ನಲ್ಲಿ ಪ್ರಶಸ್ತಿಗೆ ಸೆಣಸುತ್ತಿರುವ ಚಿತ್ರ. ಬದುಕಿನ ಸಂಕಷ್ಟಗಳು, ಅನಿವಾರ್ಯತೆ, ಪ್ರಾಮಾಣಿಕತೆ, ಮೌಲ್ಯಗಳು ಇತ್ಯಾದಿಯ ಸುತ್ತ ಕಥೆ ಹರಡಿಕೊಳ್ಳುತ್ತಾ ಪ್ರೇಕ್ಷಕನನ್ನೂ ಒಳಗೊಳ್ಳುವ ಚಿತ್ರ.
ಡ್ರೈವ್ ಮೈ ಕಾರ್ (Drive My Car)- 2021- ಜಪಾನ್- Doraibu Maika
ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಸೆಣಸುತ್ತಿರುವ ಪ್ರಮುಖ ಚಲನಚಿತ್ರಗಳಲ್ಲಿ ಇದೂ ಒಂದು. ಅಷ್ಟೇ ಅಲ್ಲ, ಪ್ರಮುಖವಾದುದು. ಹತ್ತಾರು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತು ಪ್ರಶಂಸೆಯನ್ನು ಪಡೆದಿರುವ ಚಿತ್ರ. 2021 ರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪಟ್ಟಿಯಾಗಿರುವ ಚಿತ್ರವಿದು. ಕಾನ್ ಚಿತ್ರೋತ್ಸವದಲ್ಲೂ ಪಾಲ್ಗೊಂಡು ಅತ್ಯುತ್ತಮ ಚಿತ್ರ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಸೆಣಸಿತ್ತು. ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿತು. ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಅತ್ಯುತ್ತಮ ಚಿತ್ರಕ್ಕಾಗಿ ಪಡೆದಿದೆ.
ಯೂನಿ (YUNI)- ಇಂಡೋನೇಶಿಯಾ- 2021- Arawinda Kirana
ಸಂಪ್ರದಾಯ ಮತ್ತು ಸ್ವಾತಂತ್ರ್ಯ ನಡುವಿನ ಅರ್ಥ ವಿಸ್ತಾರತೆಯ ಸಿನಿಮಾವಿದು. ಕಥಾನಾಯಕಿ ಉನ್ನತ ವಿದ್ಯಾಭ್ಯಾಸಕ್ಕೆ ಅಣಿಯಾಗುತ್ತಾಳೆ. ಆ ಸಂದರ್ಭದಲ್ಲಿ ಒಬ್ಬ ವರನನ್ನು ಹುಡುಕಲಾಗುತ್ತದೆ. ಆದರೆ ಉನ್ನತ ವಿದ್ಯಾಭ್ಯಾಸ ಕಾರಣಕ್ಕೆ ಕಥಾ ನಾಯಕಿ ತಿರಸ್ಕರಿಸುತ್ತಾಳೆ. ಆ ಬಳಿಕ ಮತ್ತೊಂದು ವರ ನೋಡಿದಾಗಲೂ ಒಪ್ಪುವುದಿಲ್ಲ. ಅಲ್ಲಿನ ಸಂಪ್ರದಾಯದ ಪ್ರಕಾರ ಎರಡು ಬಾರಿ ತಿರಸ್ಕಾರ ಮಾಡಿದವರನ್ಯಾರೂ ಮದುವೆಯಾಗುವುದಿಲ್ಲ. ಕಥಾ ನಾಯಕಿ ಕಾವ್ಯವನ್ನು ಪ್ರೀತಿಸುತ್ತಾ, ತನ್ನ ದುಗುಡವನ್ನು ಮರೆಯಲು ಯತ್ನಿಸುತ್ತಾಳೆ. ಆ ಸಂದರ್ಭದಲ್ಲಿ ಅವಳ ಕಾವ್ಯದ ಉಪನ್ಯಾಸಕನೇ ಮೂರನೆಯವನಾಗಿ ವಿವಾಹದ ಪ್ರಸ್ತಾವ ಮುಂದಿಡುತ್ತಾನೆ. ಕೆಲವು ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿರುವ ಸಿನಿಮಾವಿದು.
ವೋರ್ಟೆಕ್ಸ್ (Vortex)- ಫ್ರೆಂಚ್- 2021- Gaspar Noe
ಕಾನ್ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಕಂಡ ಚಲನಚಿತ್ರಗಳಲ್ಲಿ ಇದೂ ಒಂದು. ತನ್ನ ಎಂದಿನ ಜಾಡಿನಿಂದ ಹೊರಬಂದು ಈ ಸಿನಿಮಾ ನಿರ್ದೇಶಿಸಿರುವ ನಿರ್ದೇಶಕ ಗಾಸ್ಪರ್, ಇಳಿವಯಸ್ಸಿನ ದಂಪತಿಯ ಬದುಕಿನ ಹೋರಾಟವನ್ನು ಅವರ ಮಗನ ಸುತ್ತ ಹೆಣೆಯುತ್ತಾ ಕಥೆ ವಿವರಿಸಲು ಪ್ರಯತ್ನಿಸುತ್ತಾನೆ. ಕಥೆ ಹೇಳಿರುವ ಕ್ರಮಕ್ಕೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಪಾತ್ರಗಳಲ್ಲಿನ ನಟನೆ [ಡೇರಿಯೊ ಅರ್ಜೆಂಟೊ, ಫ್ರಾಂಕೊಯಿಸ್ ಲೆಬ್ರುನ್] ಗೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಅಹದ್ಸ್ ನೀ (Ahed’s Knee) –2021- ಇಸ್ರೇಲ್- Nadav Lapid
ಸಿನಿಮಾ ನಿರ್ದೇಶಕನೊಬ್ಬ ತನ್ನ ಸಿನಿವೊಂದರ ಪ್ರದರ್ಶನಕ್ಕಾಗಿ ತನ್ನ ದೇಶಕ್ಕೆ ಬರುತ್ತಾನೆ. ಅಲ್ಲಿ ಆ ದೇಶದ ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬಳು ಈ ಪ್ರದರ್ಶನವನ್ನು ವ್ಯವಸ್ಥೆ ಮಾಡಿರುತ್ತಾಳೆ. ಅಲ್ಲಿ ಎದುರಾಗುವ ಸನ್ನಿವೇಶಗಳು ಅವನಿಗೆ ವಾಸ್ತವವನ್ನು ಅರಿವಿಗೆ ತರುತ್ತವೆ. ಒಂದೆಡೆ ತನ್ನ ದೇಶದಲ್ಲಿ ಸಾಯುತ್ತಿರುವ ಸ್ವಾತಂತ್ರ್ಯ ಮತ್ತು ತನ್ನ ಮನೆಯಲ್ಲಿ ಸಾವಿನ ಅಂಚಿನಲ್ಲಿರುವ ತಾಯಿಯ ಹೋರಾಟ- ಎರಡೂ ವಿಭಿನ್ನವಾದ ಅನುಭವವನ್ನು ಕಟ್ಟಿಕೊಡುತ್ತವೆ.
ಬರ್ಗ್‌ಮನ್ ಐಲ್ಯಾಂಡ್ (Bergman Island)- ಫ್ರಾನ್ಸ್- Mia Hansen Love
ಈ ಚಲನಚಿತ್ರವೂ ಬಹಳ ಸರಳವಾದ ಕಥಾ ಹಂದರವನ್ನು ಹೊಂದಿರುವಂಥದ್ದು. ಸಿನಿಮಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ದಂಪತಿಯೊಂದು ಸಿನಿಮಾ ನಿರ್ದೇಶಕ ಬರ್ಗ್ ಮನ್ ಹೆಚ್ಚು ಸಿನಿಮಾಗಳನ್ನು ಚಿತ್ರೀಕರಿಸಿರುವ ದ್ವೀಪಕ್ಕೆ ವಿಹಾರಕ್ಕೆಂದು ಹೋಗುತ್ತಾರೆ. ಅಲ್ಲಿ ಒಂದಿಷ್ಟು ದಿನವಿದ್ದು ಮನಸ್ಸಿಗೆ ಉಲ್ಲಾಸ ತುಂಬಿಕೊಂಡು ಬರುವುದು ಉದ್ದೇಶ. ಹಾಗೆ ದಿನ ಕಳೆಯುತ್ತಿದ್ದ ದಂಪತಿಯ ನಡುವೆ ಕಲ್ಪನಾ ಲೋಕ ಮತ್ತು ವಾಸ್ತವದ ನಡುವಿನ ಪ್ರತ್ಯೇಕತೆಯ ಗೆರೆ ಅಳಿಸಿ ಹೋಗುತ್ತಾ, ಬೇರೆಯದೇ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇವೆಲ್ಲವನ್ನೂ ಬಹಳ ಸುಂದರವಾಗಿ ಹೆಣೆದಿರುವುದಕ್ಕೇ ಈ ಚಿತ್ರ ಪ್ರಶಂಸೆಗೆ ಒಳಗಾಗಿರುವುದು. ನವಿರಾದ ನೆಲೆಯಲ್ಲೇ ಸಾಗುತ್ತಾ, ಬದುಕಿನ ವಾಸ್ತವದ ಕಠೋರತೆಯನ್ನು ಹೇಳಲು ಪ್ರಯತ್ನಿಸುವುದು ಈ ಚಿತ್ರದ ವಿಶೇಷ. ಇದೂ ಸಹ ಕಾನ್ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.