ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್ ಕೊಲೆಗೆ ಯತ್ನ : ನಾಲ್ವರ ಬಂಧನ
Team Udayavani, Dec 6, 2021, 10:00 PM IST
ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ವೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವರಜೀವನಹಳ್ಳಿ ಮತ್ತು ಶಿವಾಜಿನಗರ ನಿವಾಸಿಗಳಾದ ಸೈಯದ್ ಮೊಯಿನುದ್ದಿನ್(21), ಅರ್ಬಾಜ್(24), ಅದ್ನಾನ್(23) ಹಾಗೂ ಅಫìತ್(21) ಬಂಧಿತರು.
ಆರೋಪಿಗಳು ನ.28ರಂದು ಶಿವಾಜಿನಗರದ ರೌಡಿಶೀಟರ್ ಮನ್ಸೂರ್ ಅಲಿಯಾಸ್ ದೂನ್‌ಗೆ ಪತ್ನಿ ಎದುರೇ ಮಾರಕಾಸ್ತ್ರಗಳಿಂದ ಇರಿದು ಕೊಲೆಗೈಯಲು ಯತ್ನಿಸಿದ್ದರು. ಸದ್ಯ ಮನ್ಸೂರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆಗೊಳಗಾಗಿರುವ ರೌಡಿಶೀಟರ್ ಮನ್ಸೂರ್ ವಿರುದ್ಧ ಶಿವಾಜಿನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಮನ್ಸೂರ್ ರಂಜಾನ್ ಸಂದರ್ಭದಲ್ಲಿ ಸೈಯದ್ ಮೊಯಿನುದ್ದೀನ್ ಹಾಗೂ ಅಫìತ್‌ಗೆ ಹಲ್ಲೆ ನಡೆಸಿದ್ದ. ಅನಂತರ ಸೈಯದ್ ಹಾಗೂ ಇತರೆ ಆರೋಪಿಗಳು ಮನ್ಸೂರ್ ಮೇಲೆ ಹಲ್ಲೆ ಸಂಚು ರೂಪಿಸಿದ್ದರು. ಅಷ್ಟರಲ್ಲಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಮನ್ಸೂರ್ ಜೈಲು ಸೇರಿದ್ದ. ಹೀಗಾಗಿ ಸಂಚು ವಿಫಲಗೊಂಡಿತ್ತು.
ಇದನ್ನೂ ಓದಿ : ಬಿಳಿಗಿರಿರಂಗನಾಥ ಅರಣ್ಯದಲ್ಲಿ ನೀಲ ಕುರಂಜಿ ಹೂವುಗಳ ಸೊಬಗು
ಈ ಮಧ್ಯೆನ.25ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಮನ್ಸೂರ್ ನ.27ರಂದು ಸೈಯದ್ ಮೊಹಿನುದ್ದೀನ್ ಕೆಲಸ ಮಾಡುವ ಗ್ಯಾರೆಜ್‌ಗೆ ಬೈಕ್ ರಿಪೇರಿಗೆ ಬಿಟ್ಟಿದ್ದ. ಈ ವೇಳೆ ಮನ್ಸೂರ್‌ನನ್ನು ಗುರುತಿಸಿದ ಸೈಯದ್, ತನ್ನ ಇತರೆ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಆದರೆ, ಮನ್ಸೂರ್ ಸೈಯದ್‌ನನ್ನು ಗುರುತಿಸಿರಲಿಲ್ಲ. ನ.28ರಂದು ಗ್ಯಾರೆಜ್‌ನಿಂದ ಬೈಕ್ ಬಿಡಿಸಿಕೊಂಡು ಪತ್ನಿ ಜತೆ ಹೋಗುತ್ತಿದ್ದ ಮನ್ಸೂರ್ ಮೇಲೆ ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸಿದ್ದರು. ಆಗ ಪತ್ನಿ ಸಹಾಯಕ್ಕೆ ಬಂದರೂ ಆಕೆಗೆ ಬೆದರಿಸಿ ಮನ್ಸೂರ್‌ಗೆ ಮನಸೋಇಚ್ಚೆ ಹಲ್ಲೆ ನಡೆಸಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಮನ್ಸೂರ್‌ನನ್ನು ಆರೋಪಿಗಳು ಬಿಟ್ಟು ಪರಾರಿಯಾಗಿದ್ದರು. ಬಳಿಕ ಪತ್ನಿ ಆತನನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
Karkala: ಲೈಸೆನ್ಸ್ ಇಲ್ಲದ ವ್ಯಾಪಾರಕ್ಕೆ ಕಡಿವಾಣ
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.