Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
ಸಾಮಾಜಿಕ ಜಾಲತಾಣದ ಮೂಲಕ ಪರಿಚಯ
Team Udayavani, Nov 27, 2024, 2:35 AM IST
ಬೆಂಗಳೂರು: ಪ್ರಿಯಕರನೇ ಪ್ರೇಯಸಿಯ ಎದೆಗೆ ಚಾಕು ಇರಿದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಅಸ್ಸಾಂ ಮೂಲದ ಮಾಯಾ ಗೋಗೋಯಿ (19) ಕೊಲೆಯಾದ ಯುವತಿ. ಕೃತ್ಯ ಎಸಗಿದ ಆಕೆಯ ಪ್ರಿಯಕರ ಕೇರಳ ಮೂಲದ ಆರವ್ ಅನಾಯ್ (21) ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ. ಇಂದಿರಾನಗರದ 2ನೇ ಹಂತದಲ್ಲಿರುವ ದಿ ರಾಯಲ್ ಲಿವಿಂಗ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ವರ್ಷದ ಹಿಂದೆ ಬೆಂಗಳೂರಿಗೆ ಬಂದಿರುವ ಮಾಯಾ, ಎಚ್ಎಸ್ಆರ್ ಲೇಔಟ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಮೀಪದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದರು. ಇನ್ನು ಈಕೆಯ ಪ್ರಿಯಕರ ಕೇರಳದ ಕಣ್ಣೂರು ಮೂಲದ ಆರವ್ ಅನಾಯ್ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
ನ. 23ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ ಪ್ರೇಯಸಿಯನ್ನು ಇಂದಿರಾನಗರದ 2ನೇ ಹಂತದಲ್ಲಿರುವ ದಿ ರಾಯಲ್ ಲಿವಿಂಗ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ಗೆ ಕರೆದೊಯ್ದಿದ್ದಾನೆ. ಇಬ್ಬರು ಅಲ್ಲಿಗೇ ಊಟ, ತಿಂಡಿ ತರಿಸಿಕೊಂಡಿದ್ದಾರೆ ನ. 26ರಂದು (ಮಂಗಳವಾರ) ಬೆಳಗ್ಗೆ 8.20ರ ಸುಮಾರಿಗೆ ಆರೋಪಿ ಆರವ್
ಅನಾಯ್ ಕೋಣೆಯಿಂದ ಹೊರಬಂದು, ಕ್ಯಾಬ್ ಬುಕ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಮಧ್ಯಾಹ್ನವಾದರೂ ಕೊಠಡಿಯಿಂದ ಮಾಯಾ ಹೊರ ಬಂದಿಲ್ಲ. ಊಟ, ತಿಂಡಿ ಸಹ ತರಿಸಿಕೊಂಡಿಲ್ಲ. ಅದರಿಂದ ಅನುಮಾನಗೊಂಡ ಅಪಾರ್ಟ್ಮೆಂಟ್ ಕೆಲಸಗಾರರು ಕೊಲೆಯಾಗಿರುವುದು ಗೊತ್ತಾಗಿದೆ.
2 ದಿನ ಶವದ ಜತೆಗಿದ್ದ:
2 ದಿನಗಳ ಹಿಂದೆಯೇ ಮಾಯಾಳನ್ನು ಆರವ್ ಹತ್ಯೆಗೈದಿದ್ದು, 2 ದಿನಗಳ ಕಾಲ ಮೃತದೇಹದ ಜತೆ ಇದ್ದು, ಅಲ್ಲಿಯೇ ಕೂತು ಸಿಗರೆಟ್ ಸೇದಿದ್ದಾನೆ. ಅದಕ್ಕೆ ಪೂರಕವಾಗಿ ಸ್ಥಳದಲ್ಲಿ ಸಿಗರೆಟ್ ತುಂಡುಗಳು, ಹಳೇಯ ಚಾಕು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.