![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 9, 2022, 11:09 PM IST
ಬೆಂಗಳೂರು: ಬುಧವಾರ ಬೆಂಗಳೂರು ಓಪನ್ ಟೆನಿಸ್‌ನಲ್ಲಿ ದಾಖಲಾಗಿದ್ದು ಬಹುತೇಕ ಆಘಾತಕಾರಿ ಫಲಿತಾಂಶಗಳೇ!
ಮೆಚ್ಚಿನ ತಾರೆಯರೆಲ್ಲ ಸೋತು ಗಂಟುಮೂಟೆ ಕಟ್ಟಿದರು. ಮೊದಲು ತೈಪೆಯ ಯುವ ಆಟಗಾರ ಚುನ್ ಹ್ಸಿನ್ ಆಘಾತ ನೀಡಿದರು. ಅವರು ನಾಲ್ಕನೇ ಶ್ರೇಯಾಂಕಿತ, ಫ್ರಾನ್ಸ್‌ನ ಹ್ಯುಗೊ ಗ್ರೆನಿಯರ್‌ರನ್ನು 6-1, 6-4ರಿಂದ ಸೋಲಿಸಿದರು. ಈ ಪಂದ್ಯ ಕೇಂದ್ರ ಅಂಕಣದಲ್ಲಿ ನಡೆದಿತ್ತು. ಚುನ್ ಹ್ಸಿನ್ ಅವರು ಫ್ರೆಂಚ್ ಓಪನ್, ವಿಂಬಲ್ಡನ್ ಕಿರಿಯರ ಕಿರೀಟವನ್ನು 2018ರಲ್ಲಿ ಗೆದ್ದಿದ್ದರು!
ಇದಾದ ಕೆಲವೇ ನಿಮಿಷಗಳಲ್ಲಿ ಅರ್ಹತಾಸುತ್ತಿನ ಆಟಗಾರ, ಕ್ರೊವೇಷ್ಯಾದ ಬೊರ್ನಾ ಗೊಜೊ ಅವರು 7-5, 6-3ರಿಂದ ಆಸ್ಟ್ರೇಲಿಯದ 3ನೇ ಶ್ರೇಯಾಂಕಿತ ಅಲೆಕ್ಸಾಂಡರ್ ವುಕಿಕ್‌ರನ್ನು ಮಣಿಸಿದರು. ರೋಚಕತೆಯ ಮಟ್ಟಿಗೆ ಈ ಎಲ್ಲ ಪಂದ್ಯಗಳನ್ನು ಮೀರಿಸಿದ್ದು ಬೆಲ್ಜಿಯಂನ ಕಿಮ್ಮರ್ ಕೊಪ್ಪೆಜಾನ್ಸ್ ಮತ್ತು ಟರ್ಕಿಯ ಆಟ್ಲಗ್ ಸೆಲಿಕ್‌ಬಿಲೆಕ್ ನಡುವಿನ ಪಂದ್ಯ. ಇಬ್ಬರ ನಡುವಿನ ಹೋರಾಟ ದೀರ್ಘಕಾಲ ನಡೆಯಿತು.
ಇದನ್ನೂ ಓದಿ:ಪ್ರೊ ಕಬಡ್ಡಿ: ನಿಕಟ ಕಾದಾಟದಲ್ಲಿ ಗೆದ್ದ ಯುಪಿ ಯೋಧಾ
ಮೊದಲ ಸೆಟ್‌ನಲ್ಲಿ ಕಿಮ್ಮರ್ 7-6ರಿಂದ ಕೂಟದ ಐದನೇ ಶ್ರೇಯಾಂಕಿತ ಸೆಲಿಕ್‌ಬಿಲೆಕ್‌ರನ್ನು ಸೋಲಿಸಿದರು. ಇದು ಟೈಬ್ರೇಕರ್‌ಗೆ ಹೋಗಿ ಅಲ್ಲಿ 14-12ರಿಂದ ಕಿಮ್ಮರ್ ಗೆದ್ದರು. ಎರಡನೇ ಸೆಟ್ ನಲ್ಲಿ ಕಿಮ್ಮರ್ 6-3ರಿಂದ ಗೆದ್ದರು.
ಇನ್ನೊಂದು ಪಂದ್ಯದಲ್ಲಿ ಅರ್ಹತಾಸುತ್ತಿನಿಂದ ಬಂದಿದ್ದ ಬ್ರೆಝಿಲ್‌ನ ಗೇಬ್ರಿಯೆಲ್ ಡೀಕ್ಯಾಂಪ್ಸ್ 6-2, 5-7, 7-6ರಿಂದ ಇಟಲಿಯ ಗಿಯಾನಿ ಮೊರೊನಿಯನ್ನು ಮಣಿಸಿದರು. ಗುರುವಾರ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಅವರು ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಚೆಕ್ ಗಣರಾಜ್ಯದ ಜಿರಿ ವೆಸೆಲಿಯನ್ನು ಎದುರಿಸಲಿದ್ದಾರೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.