Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Team Udayavani, Jan 13, 2025, 3:27 AM IST
ಮಣಿಪಾಲ: ಬಹುನಿರೀಕ್ಷಿತ 7ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರು ರವಿವಾರ ಬೆಂಗಳೂರಿನ ಮಾಹೆ ಕ್ಯಾಂಪಸ್‌ನಲ್ಲಿ ಚಾಲನೆ ನೀಡಿದರು.
ಕ್ರೀಡಾಪಟುಗಳು ಆರೋಗ್ಯ ಯುತವಾಗಿರಲು ಇಂತಹ ಸ್ಪರ್ಧೆಗಳು ಅಗತ್ಯ. ಕ್ಷೇಮ ಹಾಗೂ ತಂತ್ರಜ್ಞಾನ ಕೌಶಲಕ್ಕೆ ಇಂತಹ ಕಾರ್ಯಕ್ರಮಗಳು ಅತಿ ಅಗತ್ಯವಾಗಿವೆ ಎಂದರು.
ಮಾಹೆ ಬೆಂಗಳೂರು ಕ್ಯಾಂಪಸ್‌ನ ಡೆಪ್ಯೂಟಿ ರಿಜಿಸ್ಟ್ರಾರ್ ಡಾ| ರಾಘವೇಂದ್ರ ಪ್ರಭು ಪಿ. ಮಾತನಾಡಿ, ಮಣಿಪಾಲ್ ಮ್ಯಾರಥಾನ್ ಆರೋಗ್ಯ, ಸದೃಢತೆ ಮತ್ತು ಸಮುದಾಯ ಮನೋಭಾವದ ಶಕ್ತಿಗೆ ಸಾಕ್ಷಿಯಾಗಿದೆ. ಭಾರತದ ಮ್ಯಾರಥಾನ್ ಸರ್ಕ್ನೂಟ್‌ನಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮವಾಗಿ ಬೆಳೆದಿದೆ. ಉತ್ತಮ ಆರೋಗ್ಯ ಮತ್ತು ಸದೃಢತೆ ಕಡೆಗೆ ಜನರನ್ನು ಪ್ರೇರೇಪಿಸುವ ಒಂದು ಮಾರ್ಗ ಮ್ಯಾರಥಾನ್ ಆಗಿದೆ ಎಂದರು.
ಬಾಬ್ ಕಾರ್ಡ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರವೀಂದ್ರ ರೈ ಎಂ., ದೃಷ್ಟಿ ವೈಕಲ್ಯ ಹೊಂದಿರುವ ಪಟುಗಳ ಭಾರತೀಯ ಕ್ರಿಕೆಟ್ ತಂಡದ ವ್ಯವಸ್ಥಾಪಕಿ ಶೀಕಾ ಶೆಟ್ಟಿ, ಯುನೆಕ್ಸ್ಟ್ ಲರ್ನಿಂಗ್ ಪ್ರೈ.ಲಿ.ನ ಮಾರ್ಕೆಟಿಂಗ್‌ನ ಹಿರಿಯ ಉಪಾಧ್ಯಕ್ಷ ಕಿರಣ್ ಕುಮಾರ್, ಮಾಹೆ ಕ್ರೀಡಾ ಮಂಡಳಿ ಕಾರ್ಯದರ್ಶಿ ಡಾ| ವಿನೋದ್ ಸಿ. ನಾಯಕ್, ಮಣಿಪಾಲ ಹೆಲ್ತ ಎಂಟರ್‌ಪ್ರೈಸಸ್ ಪ್ರೈ.ಲಿ.ನ ಅಸೋಸಿಯೇಟ್ ನಿರ್ದೇಶಕಿ ಅಂಜನಾ ಚಂದ್ರನ್, ಮಾಹೆ ಬೆಂಗಳೂರು ಕ್ಯಾಂಪಸ್‌ನ ಅಧಿಕಾರಿ ಗಳು ಭಾಗವಹಿಸಿದ್ದರು. 50ಕ್ಕೂ ಹೆಚ್ಚು ದೃಷ್ಟಿ ದೋಷವಿರುವ ವ್ಯಕ್ತಿ ಗಳು ಈ ಓಟದ ವಿಶೇಷ ವಿಭಾಗದಲ್ಲಿ ಭಾಗವಹಿಸಿದರು. 1,500 ವಿದ್ಯಾರ್ಥಿಗಳು ಮತ್ತು ಇತರ ಮ್ಯಾರಥಾನ್ ಉತ್ಸಾಹಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Chamarajapete: ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕಠಿನ ಕ್ರಮ: ಸಿಎಂ ಸಿದ್ದರಾಮಯ್ಯ
ಹಸುವಿನ ಕೆಚ್ಚಲು ಕೊಯ್ದು ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ: ಆರ್.ಅಶೋಕ್
Bengaluru: ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು!; ಭುಗಿಲೆದ್ದ ಆಕ್ರೋಶ
Bengaluru: ಅಡಮಾನ ಆಸ್ತಿ ಮಾರಾಟ ಮಾಡಲು ಶೀಘ್ರದಲ್ಲೇ ಇ-ಖಾತೆ
MUST WATCH
ಹೊಸ ಸೇರ್ಪಡೆ
Cast Census: ಜಾತಿಗಳ ಸಮಸ್ಯೆಗೆ ಸಿಎಂ ಪರಿಹಾರವೇನು?: ಎಚ್.ಡಿ.ಕುಮಾರಸ್ವಾಮಿ
ಇಂದು ಕಾಶ್ಮೀರದ ಜೆಡ್-ಮೋರ್ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ
Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ
Wankhede Stadium-50: ಗಾವಸ್ಕರ್, ವಿನೋದ್ ಕಾಂಬ್ಳಿಗೆ ಸಮ್ಮಾನ
Ramanagara: ಡ್ರೋನ್ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.