Bengaluru South; ನಾನು ಅಧಿಕಾರಕ್ಕೆ ಬಂದಾಗ ಇವರಿಟ್ಟ ಹೆಸರು ಕಿತ್ತೆಸೆಯುವೆ: ಎಚ್‌ಡಿಕೆ
ರಾಮನಗರ ಜಿಲ್ಲೆ ಮಾಡಿದ್ದ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ?
Team Udayavani, Jul 10, 2024, 7:50 AM IST
![HD-Kumaraswamy](https://www.udayavani.com/wp-content/uploads/2024/07/HD-Kumaraswamy-3-620x372.jpg)
![HD-Kumaraswamy](https://www.udayavani.com/wp-content/uploads/2024/07/HD-Kumaraswamy-3-620x372.jpg)
ರಾಮನಗರ: ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಇವರು ಈಗ ಜಿಲ್ಲೆಯ ಹೆಸರು ಬದಲಾವಣೆ ಮಾಡಬಹುದು, ಮತ್ತೆ ನಾನು ರಾಜ್ಯದಲ್ಲಿ ಅಧಿ ಕಾರಕ್ಕೆ ಬಂದೇ ಬರುತ್ತೇನೆ. ಆಗ ಇವರು ಇಟ್ಟಿರುವ ಹೆಸರನ್ನು ಕಿತ್ತೆಸೆಯುತ್ತೇನೆಂದು ತಿಳಿಸಿದ್ದಾರೆ.
ರಾಮನಗರ ಜಿಲ್ಲೆ ಮಾಡಿದ್ದ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ? ರಾಮನ ಹೆಸರು ಇರುವುದು ಒಂದು ಭಾಗ. ಈ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ. ಪುರಾಣ ಐತಿಹ್ಯವಿದೆ. ಈ ಹೆಸರಲ್ಲಿ ರಾಮನ ಹೆಸರು ಇದೆ. ರಾಮದೇವರಿಗೆ ಇವರು ಅಪಚಾರ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಏನಾಯ್ತು: ನಿಖಿಲ್ ಪ್ರಶ್ನೆ
ಗ್ರೇಟರ್ ಬೆಂಗಳೂರು ಮಾಡುತ್ತೇವೆ, ಬೆಂಗಳೂರನ್ನು ಆ ರೀತಿ ಮಾಡುತ್ತೇವೆ. ಈ ರೀತಿ ಮಾಡುತ್ತೇವೆ ಎಂದರಲ್ಲ, ಅದು ಏನಾಯ್ತು ಎಂದು ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಹೆಸರಿಡುವ ಡಿ.ಕೆ. ಶಿವಕುಮಾರ್ ಕ್ರಮದ ಬಗ್ಗೆ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು. ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಹಣ ದೋಚುತ್ತಿದ್ದಾರೆ. ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ ಎಂದರು.
ರಾಮನ ಹೆಸರೇ ಇವರಿಗಾಗದು: ಡಾ. ಅಶ್ವತ್ಥನಾರಾಯಣ
ರಾಮನಗರ ಜಿಲ್ಲೆಯಲ್ಲಿ ರಾಮ ಇದ್ದಾನೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನವರು ಹೆಸರು ಬದಲಾಯಿಸುತ್ತಿದ್ದಾರೆ. ಇವರದು ತುಷ್ಟೀಕರಣ ರಾಜಕಾರಣ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಕಾರಣಕ್ಕೂ ಇವರು ರಾಮನ ಹೆಸರು ಸಹಿಸಿಕೊಳ್ಳುವುದಿಲ್ಲ. ಅದೇ ಕಾರಣಕ್ಕೆ ಜಿಲ್ಲೆಯ ಹೆಸರು ಬದಲಿಸಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ನಿಮ್ಮ ತುಷ್ಟೀಕರಣ ರಾಜಕಾರಣವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ](https://www.udayavani.com/wp-content/uploads/2025/02/car-3-150x82.jpg)
![Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ](https://www.udayavani.com/wp-content/uploads/2025/02/car-3-150x82.jpg)
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
![Instagram provides clues to finding suspect who had been on the run for 9 years](https://www.udayavani.com/wp-content/uploads/2025/02/inst-150x82.jpg)
![Instagram provides clues to finding suspect who had been on the run for 9 years](https://www.udayavani.com/wp-content/uploads/2025/02/inst-150x82.jpg)
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
![Devegowda](https://www.udayavani.com/wp-content/uploads/2025/02/Devegowda-150x90.jpg)
![Devegowda](https://www.udayavani.com/wp-content/uploads/2025/02/Devegowda-150x90.jpg)
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
![Sathish-rajanna-mahadevappa](https://www.udayavani.com/wp-content/uploads/2025/02/Sathish-rajanna-mahadevappa-150x90.jpg)
![Sathish-rajanna-mahadevappa](https://www.udayavani.com/wp-content/uploads/2025/02/Sathish-rajanna-mahadevappa-150x90.jpg)
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
![Jayalalittha-Golds](https://www.udayavani.com/wp-content/uploads/2025/02/Jayalalittha-Golds-150x90.jpg)
![Jayalalittha-Golds](https://www.udayavani.com/wp-content/uploads/2025/02/Jayalalittha-Golds-150x90.jpg)
Jayalalithaa Assets: ಮಾಜಿ ಸಿಎಂ ಜಯಲಲಿತಾ 27 ಕೆ.ಜಿ. ಚಿನ್ನಾಭರಣ ತಮಿಳುನಾಡು ವಶಕ್ಕೆ