ಆರೋಗ್ಯ ಟಿಪ್ಸ್: ಅಜೀರ್ಣ ಸಮಸ್ಯೆ ಕಾಡುತ್ತಿದೆಯೇ? ಇಲ್ಲಿದೆ..ಮನೆಮದ್ದು ಪರಿಹಾರ
Team Udayavani, Mar 29, 2023, 3:11 PM IST
ಜೀವನ ವಿಧಾನದ ಬದಲಾವಣೆಯಿಂದ ಅಕಾಲಿಕವಾದ ಆಹಾರಕ್ರಮ, ಅಹಿತವಾದ ಆಹಾರ ಸೇವನೆ, ಮಲ ಮೂತ್ರ ತಡೆಗಟ್ಟುವಿಕೆ, ನಿಯಮಿತ ಪ್ರಮಾಣದ ಆಹಾರಕ್ಕಿಂತ ಅಧಿಕವಾದ ಆಹಾರವನ್ನು ಸೇವನೆ ಮಾಡುವುದು, ರಾತ್ರಿ ವೇಳೆ ನಿದ್ರೆ ಮಾಡದಿರುವುದು, ಅತ್ಯಂತ ಕಡಿಮೆ ಸಮಯ ನಿದ್ರೆ ಮಾಡುವುದು, ದುಷ್ಚಟಗಳನ್ನು ಹೊಂದುವುದರಿಂದ ಅಜೀರ್ಣದ ಸಮಸ್ಯೆ ಕಂಡುಬರುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹಲವರನ್ನು ಬಾಧಿಸುತ್ತಿದ್ದು, ಈ ಸಮಸ್ಯೆಯಿಂದ ಮುಕ್ತವಾಗಲು ಹಲವಾರು ಔಷಧಿಗಳ ಮೊರೆ ಮೋಗಬೇಕಾಗಿದೆ.
ಅಸಿಡಿಟಿ ಸಮಸ್ಯೆಗೆ ಮೂಲ ಕಾರಣವೇ ಇದಾಗಿದ್ದು, ಹೊಟ್ಟೆಯಲ್ಲಿ ಉರಿಯ ಅನುಭವ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಇದು ಎಡೆ ಮಾಡಿಕೊಡುತ್ತದೆ. ತಾತ್ಕಾಲಿಕವಾದ ಅಜೀರ್ಣದ ಸಮಸ್ಯೆಗೆ ಉಪವಾಸ ಮಾಡುವುದು ಹಾಗೂ ಸೀಮಿತ ಚಿಕಿತ್ಸಾ ವಿಧಾನಗಳಿಂದ ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಒಂದು ವೇಳೆ ಈ ಸಮಸ್ಯೆ ದೀರ್ಘ ಕಾಲದ್ದಾಗಿದ್ದರೆ, ವಾರಕ್ಕೆ ಒಂದು ಬಾರಿ ಉಪವಾಸ ಮಾಡುವುದು, ಆಹಾರ ಕ್ರಮಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವುದರಿಂದ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ ಪ್ರತಿನಿತ್ಯ, ಯೋಗಾಸನ, ಪ್ರಾಣಾಯಾಮ, ಸೂರ್ಯನಮಸ್ಕಾರವನ್ನು ಮಾಡುವುದರಿಂದ ಸಮಸ್ಯೆಯಿಂದ ದೂರವಿರಬಹುದಾಗಿದೆ.
ಇದನ್ನೂ ಓದಿ:ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ
ಅಜೀರ್ಣದ ಸಮಸ್ಯೆಗೆ ಸಾಮಾನ್ಯ ಚಿಕಿತ್ಸೆಗಳು
ನಮ್ಮನ್ನು ಬಾಧಿಸುವ ಅಜೀರ್ಣದ ಸಮಸ್ಯೆಗೆ ನಮ್ಮ ಸುತ್ತಮುತ್ತಲಿನ ವಸ್ತುಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ನುಣ್ಣಗೆ ಪುಡಿ ಮಾಡಿ ಶುಭ್ರವಾದ ಬಟ್ಟೆಯಿಂದ ಗಾಳಿಸಿದ ಅಜವಾನದ ಪುಡಿ( ಓಂಕಾಳು) ಅನ್ನು ಒಂದು ವಾರ ಪ್ರತಿನಿತ್ಯ ಬಿಸಿನೀರಿನಲ್ಲಿ 1 ಗ್ರಾಂ ಬೆರೆಸಿ ಸೇವಿಸಿದರೆ ಅಜೀರ್ಣದ ಸಮಸ್ಯೆಯಿಂದ ಮುಕ್ತವಾಗಬಹುದಾಗಿದೆ. ಆದರೆ ಓಂಕಾಳು ಸೇವನೆ ದೇಹದಲ್ಲಿ ಉಷ್ಣದ ಅಂಶವನ್ನು ಹೆಚ್ಚಿಸುವುದರಿಂದ ಹೆಚ್ಚು ನೀರನ್ನು ಸೇವಿಸಬೇಕು.
ಹುಳಿಯಾಗದ ಮಜ್ಜಿಗೆಯನ್ನು ಸೇವಿಸುವುದರಿಂದ ಹಾಗೂ ಸೊಪ್ಪು ತರಕಾರಿಗಳನ್ನು ಸೇವನೆ ಮಾಡುವುದು ಮತ್ತು ಕಡಿಮೆ ಖಾರವನ್ನು ಸೇವನೆ ಮಾಡುವುದು ಉತ್ತಮ. ಇನ್ನು ಜೀರಿಗೆ ದನಿಯಾ ಕಷಾಯ, ಲಿಂಬೆರಸ ,ಸೇವನೆಯನ್ನು ಮಾಡುವುದರಿಂದಲೂ ಅಜೀರ್ಣದ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.