ಭೀಮಾ ತೀರದ ಭೈರಗೊಂಡ ಮೇಲಿನ ದಾಳಿ ಪ್ರಕರಣ :ಪೊಲೀಸರಿಂದ ಮತ್ತೆ ನಾಲ್ವರ ಬಂಧನ
Team Udayavani, Nov 8, 2020, 5:50 PM IST
ವಿಜಯಪುರ : ನವೆಂಬರ್ 2 ರಂದು ನಡೆದಿದ್ದ ಭೀಮಾ ತೀರದ ಮಹಾದೇವ ಭೈರಗೊಂಡ ಮೇಲಿನ ಗುಂಡಿನ ದಾಳಿ ಹಾಗೂ ಇಬ್ಬರ ಹತ್ಯೆ ಪ್ರಕರಣದಲ್ಲಿ ವಿಜಯಪುರ ಪೊಲೀಸರು ಮತ್ತೆ ನಾಲ್ವರು ಆರೋಪಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಸದರಿ ಪ್ರಕರಣದಲ್ಲಿ ಬಂಧಿತರ ಸಂಖ್ಯೆ11 ಕ್ಕೆ ಏರಿಕೆಯಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಎಸ್ಪಿ ಅನುಪಮ್ ಅಗರ್ ವಾಲ್ , ನಗರದ ಹೊರ ವಲಯದ ಕನ್ನಾಳ ಬಳಿ ಮಹಾದೇವ ಭೈರಗೊಂಡ ಹಾಗೂ ಸಹಚರರ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಮಹಾದೇವ ಭೈರಗೊಂಡ ತೀವ್ರವಾಗಿ ಗಾಯಗೊಂಡು, ಆತನ ಇಬ್ಬರು ಸಹಚರರು ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿ ರಚನೆಯಾಗಿರುವ ವಿವಿಧ ಅಧಿಕಾರಿಗಳ ತಂಡ ಮತ್ತೆ ನಾಲ್ವರು ಆರೋಪಗಳನ್ನು ಬಂಧಿಸಿದೆ.
ಇದನ್ನೂ ಓದಿ:ಪತ್ನಿಯನ್ನು ತೊರೆದ ಪತಿ! ತಿಂಗಳಿಗೆ 1.5 ಲಕ್ಷ ರೂ. ಪರಿಹಾರ ನೀಡಲು ಪತಿಗೆ ಕೋರ್ಟ್ ಆದೇಶ!
ಬಂಧಿತರನ್ನು ವಿಜಯಪುರ ನಗರದ ರಾಜರತ್ನ ಕಾಲೋನಿಯ ಕಾಶಿನಾಥ ತಾಳೀಕೋಟೆ (23), ಬಬಲೇಶ್ವರ ತಾಲೂಕ ಸಾರವಾಡ ಗ್ರಾಮದ ಯುನೀಸ್ ಅಲಿ ಮುಜಾವರ್ (24), ವಿಜಯಪುರ ನಗರದ ಕುಂಬಾರ ಗಲ್ಲಿ ನಿವಾಸಿ ರಾಜು ಗುನ್ನಾಪುರ (27), ವಿಜಯಪುರ ತಾಲೂಕಿನ ಯೋಗಾಪುರ ನಿವಾಸಿ ಸಿದ್ದು ಮೂಡಲಗಿ (24 ) ಎಂದು ಗುರುತಿಲಾಗಿದೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 1 ಮಚ್ಚು, 2 ಮೊಬೈಲ್, 2 ಬೈಕ್ ವಶಕ್ಕೆ ಪಡೆದಿರುವುದಾಗಿ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ.
ನವೆಂಬರ್ 2 ರಂದು ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್ ಬಳಿ ಎನ್ ಎಚ್ 50 ರಲ್ಲಿ ಘಟನೆ ನಡೆದಿತ್ತು. ಮಹಾದೇವ ಭೈರಗೊಂಡ ಪ್ರಯಾಣಿಸುತ್ತಿದ್ದ ಕಾರಿಗೆ ಆರೋಪಿಗಳು ಟಿಪ್ಪರ್ ಮೂಲಕ ಡಿಕ್ಕಿ ಮಾಡಿ, ಬಳಿಕ ಗುಂಡಿನ ದಾಳಿ, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಬಳಸಿದ್ದರು. ಮಹಾದೇವ ಭೈರಗೊಂಡ ದೆಹಕ್ಕೆ ಮೂರು ಗುಂಡು ಹೊಕ್ಕಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.