ಬೀದರ್ ಕೋವಿಡ್ ಸೋಂಕಿಗೆ 3 ಬಲಿ! 74 ಮಂದಿಗೆ ಸೋಂಕು ದೃಢ
Team Udayavani, Jul 22, 2020, 8:38 PM IST
ಬೀದರ್: ಗಡಿ ನಾಡು ಬೀದರ್ ನಲ್ಲಿ ಸತತ ಐದು ದಿನಗಳಿಂದ ಕೋವಿಡ್ ಸೋಂಕು ಸಾವಿನ ರಣಕೇಕೆ ಹಾಕುತ್ತಿದ್ದು, ಬುಧವಾರ ಮತ್ತೆ ವೈರಸ್‌ನಿಂದ ಮೂವರು ಬಲಿಯಾಗಿದ್ದಾರೆ. ಜತೆಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು 74 ಪಾಸಿಟಿವ್ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಮತ್ತಷ್ಟು ವೇಗ ಪಡೆದುಕೊಂಡು ಜನರನ್ನು ಬೆಚ್ಚಿ ಬಿಳಿಸುತ್ತಿದೆ.
ಸಾರಿ ಲಕ್ಷಣಗಳಿಂದ ಬಳಲುತ್ತಿದ್ದ ಬೀದರ ತಾಲೂಕಿನ 67, 58 ವರ್ಷದ ಪುರುಷರು ಹಾಗೂ 57 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟ ಮತ್ತು ಜ್ವರ ತೊಂದರೆ ಹಿನ್ನಲೆ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಈ ರೋಗಿಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಎಲ್ಲರಲ್ಲೂ ವೈರಾಣು ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಕೇವಲ 5 ದಿನಗಳಲ್ಲಿ 13 ಜನ ಸಾವಿನ ಕದ ತಟ್ಟಿದ್ದು, ಮೃತರ ಸಂಖ್ಯೆ 66ಕ್ಕೆ ಏರಿಕೆ ಕಂಡಿದೆ. ಇನ್ನೊಂದೆಡೆ ಬುಧವಾರ ಒಂದೇ ದಿನ 186 ಜನರು ಗುಣಮುಖರಾಗಿದ್ದು ಕೊಂಚ ನೆಮ್ಮದಿ ತಂದಂತಾಗಿದೆ.
ಒಟ್ಟು 74 ಪಾಸಿಟವ್ ಕೇಸ್‌ಗಳಲ್ಲಿ ಅತಿ ಹೆಚ್ಚು ಬೀದರ್ ತಾಲೂಕಿನಲ್ಲೇ 25 ಪ್ರಕರಣ ಸೇರಿವೆ. ಹುಮನಾಬಾದ 15, ಬಸವಕಲ್ಯಾಣ 13, ಭಾಲ್ಕಿ 9, ಕಮಲನಗರ 5, ಚಿಟಗುಪ್ಪ ಮತ್ತು ಔರಾದ ತಲಾ 3 ಮತ್ತು ಹುಲಸೂರು ತಾಲೂಕಿನಲ್ಲಿ 1 ಪ್ರಕರಣ ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 1542ಕ್ಕೆ ಏರಿಕೆಯಾಗಿದೆ. 63 ಮಂದಿ ಸಾವನ್ನಪ್ಪಿದ್ದರೆ, 1029 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 445 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 47,002 ಜನರ ವರದಿ ತಪಾಸಣೆ ಮಾಡಲಾಗಿದ್ದು, 44,883 ಮಂದಿಯದ್ದು ನೆಗೆಟಿವ್ ಬಂದಿದೆ. ಇನ್ನು 577 ಜನರ ವರದಿ ಬರುವುದು ಬಾಕಿ ಇದೆ.
ಬೀದರ ನಗರ-4, ಗೋಲೇಖಾನಾ, ಮುಲ್ತಾನಿ ಕಾಲೊನಿ, ಪ್ರತಾಪ ನಗರ ತಹಸೀಲ್ ಕಚೇರಿ, ಮಂಗಲಪೇಟ್, ಸಾಯಿ ಕಾಲೋನಿ, ಅಮಲಾಪುರ, ದೀನ್ ದಯಾಳ ನಗರ ಸಿಎಂಸಿ, ಶಕ್ತಿ ನಗರ ಚಿಟ್ಟಾ ಕ್ರಾಸ್ ಮುಸ್ತೈದಪುರ, ಏಡೇನ್ ಕಾಲೊನಿ, ಮುಲ್ತಾನಿ ಕಾಲೋನಿ, , ಮೈಲೂರ, ತಹಸೀಲ್ ಕಚೇರಿ, ಪ್ರಯಾವಿ ಆಸ್ಪತ್ರೆ, ಶಿವನಗರ ಮತ್ತು ಗುಂಪಾದಲ್ಲಿ ತಲಾ 1 ಕೇಸ್, ತಳವಾಡ 2, ಜನವಾಡಾ 3 ಕೇಸ್‌ಗಳು ಪತ್ತೆಯಾಗಿವೆ.
ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) 6, ತಾಳಮಡಗಿ, ಹುಣಸಗೇರಾ, ಕನಕಟ್ಟಾ, ನೂರ್‌ಖಾ ಅಖಾಡಾ, ಭವಾನಿ ಮಂದಿರ ಬಳಿ, ವಾಂಜರಿ ಮತ್ತು ಜಲಸಂಗಿಯಲ್ಲಿ ತಲಾ 1, ಬಸವಕಲ್ಯಾಣ ತಾಲೂಕಿನ ಬೆಟಬಾಲಕುಂದಾ 3, ಧನ್ನೂರಾ (ಎಸ್) 2, ಲಾಡವಂತಿ, ಶಾಪುರಗಲ್ಲಿ ತಲಾ 1, ಬಸವಕಲ್ಯಾಣ 2, ನಾರಾಯಣಪುರ, ತ್ರಿಪುರಾಂತ, ಕಾಂಬಳೇವಾಡಿ, ಗೋರ್ಟಾ ಗ್ರಾಮದಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.