ಬೀದರ್ ಕೋವಿಡ್ ಸೋಂಕಿಗೆ 2 ಸಾವು, 48 ಹೊಸ ಪ್ರಕರಣ ಪತ್ತೆ
Team Udayavani, Jul 30, 2020, 9:16 PM IST
ಬೀದರ್ : ಗಡಿನಾಡು ಬೀದರ್ ನಲ್ಲಿ ಹೆಮ್ಮಾರಿ ಕೋವಿಡ್ ಮತ್ತೆ ಅಬ್ಬರಿಸಿದ್ದು, ಗುರುವಾರ ಮತ್ತಿಬ್ಬರು ಸೋಂಕಿತರನ್ನು ಬಲಿ ಪಡೆದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಈಗ 74ಕ್ಕೆ ಏರಿಕೆ ಕಂಡಿದೆ. ಇನ್ನೊಂದೆಡೆ ಇಂದು 48 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಬೀದರ್ ಹೊರವಲಯದ ಮಾಮನಕೇರಿಯ 85 ವರ್ಷದ ವೃದ್ಧೆ ಹಾಗೂ ಭಾಲ್ಕಿ ಪಟ್ಟಣದ ಹಿರೇಮಠ ಗಲ್ಲಿಯ 75 ವರ್ಷದ ವೃದ್ಧ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಅದಿಕ ರಕ್ತದೊತ್ತಡದಿಂದ ಬಳುತ್ತಿದ್ದ ಅವರಲ್ಲಿ ಕೋವಿಡ್- 19 ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಪಲಿಸದೇ ಜು. 28 ರಂದು ಇಬ್ಬರು ಕೊನೆಯುಸಿರೆಳೆದಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳ ಪೈಕಿ ಬೀದರ್ ನಗರ ಮತ್ತು ತಾಲೂಕಿನಲ್ಲೇ ಅತಿ ಹೆಚ್ಚು 23 ಕೇಸ್‌ಗಳು ಪತ್ತೆಯಾಗಿವೆ. ಇನ್ನುಳಿದಂತೆ ಔರಾದ ತಾಲೂಕು 8, ಭಾಲ್ಕಿ ಮತ್ತು ಹುಮನಾಬಾದ್ ತಾಲೂಕಿನಲ್ಲಿ 7, ಬಸವಕಲ್ಯಾಣ ತಾಲೂಕಿನಲ್ಲಿ 3 ಸೋಂಕಿತರ ಪ್ರಕರಣಗಳು ವರದಿಯಾಗಿವೆ.
ಇಂದಿನ 48 ಪಾಸಿಟಿವ್ ಕೇಸ್‌ಗಳೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2071ಗೆ ಏರಿಕೆಯಾಗಿದೆ. ಗುರುವಾರ 44 ಜನ ಸೇರಿ ಈವರೆಗೆ 1409 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 584 ಸಕ್ರೀಯ ಪ್ರಕರಣಗಳಿವೆ.
ಎಲ್ಲೇಲ್ಲಿ ಪ್ರಕರಣಗಳು:
ಬೀದರ ನಗರದ ಎಸ್‌ಪಿ ಕಚೇರಿ 6, ಬ್ರಿಮ್ಸ್ 4, ನಗರ 3, ಅಬ್ದುಲ್ ಪೈಯಜ್ ದರ್ಗಾ ಕ್ವಾಟರ‍್ಸ್ 2, ನೌಬಾದ್, ಆದರ್ಶ ಕಾಲೋನಿ, ಮೈಲೂರು ಕ್ರಾಸ್, ಚಿಲ್ಲರ್ಗಿ, ಅಲಿಯಂಬರ್, ಆದರ್ಶ ಕಾಲೋನಿ, ಆಣದೂರ, ಲಾಡಗೇರಿ ಎಸ್ಪಿ ಕಚೇರಿಯಲ್ಲಿ ತಲಾ 1 ಕೇಸ್ ಪತ್ತೆಯಾಗಿವೆ. ಔರಾದ ತಾಲೂಕಿನ ಮಸ್ಕಲ್ 2, ಡೋಣಗಾಂವ್, ಸಿದ್ದಾಪುರ, ರಕ್ಷಾಳ, ಚಿಂತಾಕಿ, ನಾಗಮಾರಪಳ್ಳಿ ಮತ್ತು ಸುಂಕನಾಳದಲ್ಲಿ ತಲಾ 1 ಕೇಸ್, ಭಾಲ್ಕಿ ತಾಲೂಕಿನ ಬೀರಿ (ಕೆ) 2, ನಿಟ್ಟೂರು (ಬಿ), ಬರ್ದಾಪುರ, ಆಳಂದಿ, ಪಟ್ಟಣದ ಪೋಸ್ಟ್ ಆಪೀಸ್, ಲೆಕ್ಚರರ್ ಕಾಲೋನಿಯಲ್ಲಿ ತಲಾ 1, ಬಸವಕಲ್ಯಾಣ ನಗರದಲ್ಲಿ 3 ಜನ, ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) 5 ಮತ್ತು ಜನತಾನಗರ ಹುಡಗಿಯಲ್ಲಿ 2 ಸೋಂಕು ಪ್ರಕರಣ ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.