ಮುಂಬಯಿಯಲ್ಲಿ ದೇಶದ ಅತೀದೊಡ್ಡ ಚಾರ್ಜಿಂಗ್ ಲಾಟ್!
Team Udayavani, Jul 19, 2021, 6:40 AM IST
ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ವಿದ್ಯುತ್ ವಾಹನಗಳ ಹೊಸ ಶಕೆ ಆರಂಭ ಗೊಳ್ಳಲಿದೆ. ಇದನ್ನು ಮನಗಂಡು, ಮುಂಬಯಿ ಮೂಲದ ಮಂಗೇತಾ ಕಂಪೆನಿ, ನವೀ ಮುಂಬಯಿಯಲ್ಲಿ ದೇಶದಲ್ಲೇ ಅತೀ ದೊಡ್ಡದಾದ, ಎಲೆಕ್ಟ್ರಿಕ್ ವಾಹನಗಳ ವಿದ್ಯುತ್ ಚಾರ್ಜಿಂಗ್ ಕೇಂದ್ರವನ್ನು ತೆರೆದಿದೆ. ಪಾರ್ಕಿಂಗ್ ಲಾಟ್ ಮಾದರಿಯಲ್ಲಿರುವ “ಚಾರ್ಜಿಂಗ್ ಲಾಟ್’ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಆ್ಯಪ್ ಸೌಲಭ್ಯ
ಗ್ರಾಹಕರಿಗಾಗಿ “ಚಾರ್ಜ್ ಗ್ರಿಡ್’ ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಚಾರ್ಜಿಂಗ್ ಸೌಲಭ್ಯ ಪಡೆಯುವ ಗ್ರಾಹಕರು, ಅದನ್ನು ಡೌನ್ಲೋಡ್ ಮಾಡಿಕೊಂಡು, ತಮ್ಮ ವಾಹನಗಳ ಚಾರ್ಜಿಂಗ್ ಬಗ್ಗೆ ಮಾಹಿತಿ ಪಡೆಯಬಹುದು.
ಸೌಲಭ್ಯಗಳೇನು?
21 ಚಾರ್ಜಿಂಗ್ ಪಾಯಿಂಟ್ಗಳು ಇಲ್ಲಿದ್ದು, ಇದರಲ್ಲಿ 4 ಡಿ.ಸಿ. ಚಾರ್ಜರ್ಗಳಾಗಿದ್ದು ಪ್ರತಿಯೊಂದು 5 ಕಿಲೋ ವ್ಯಾಟ್ನಿಂದ 50 ಕಿ.ವ್ಯಾ. ಸಾಮರ್ಥ್ಯ ವುಳ್ಳವು. ಪೂರ್ತಿ ಡಿಸಾcರ್ಜ್ ಆಗಿದ್ದ ಬ್ಯಾಟರಿಯನ್ನು ಶೂನ್ಯದಿಂದ ಶೇ.100 ರಷ್ಟು ಚಾರ್ಜ್ ಮಾಡಲು ಕೇವಲ 45 ನಿಮಿಷಗಳು ಸಾಕು. ಉಳಿದವು ಎ.ಸಿ. (ಅಲ್ಟರ್ನೆàಟ್ ಕರೆಂಟ್) ಚಾರ್ಜರ್ಗಳಾಗಿದ್ದು ಪ್ರತೀ ಚಾರ್ಜರ್ 3.5 ಕಿ.ವ್ಯಾಟ್ನಿಂದ 7.5 ಕಿ.ವ್ಯಾಟ್ವರೆಗಿನವು. ಒಂದು ಕಾರಿನ ಬ್ಯಾಟರಿ ಚಾರ್ಜ್ಗೆ ಒಂದು ರಾತ್ರಿ ಪೂರ್ತಿ ಬೇಕಾಗುತ್ತದೆ.
ಯಾವ ವಾಹನಗಳಿಗೆ ಸೂಕ್ತ?
– ದ್ವಿಚಕ್ರ ವಾಹನಗಳು
– ತ್ರಿಚಕ್ರ ವಾಹನಗಳು
– ನಾಲ್ಕು ಚಕ್ರಗಳ ವಾಹನಗಳು
ಬದಲಿ ಸೌಕರ್ಯ
ಸರಕಾರದಿಂದ ವಿತರಿಸಲಾಗುವ ವಿದ್ಯುತ್ನಿಂದಲೇ ಈ ಚಾರ್ಜಿಂಗ್ ಲಾಟ್ ಕಾರ್ಯ ನಿರ್ವಹಿಸುತ್ತದೆ. ವಿದ್ಯುತ್ ನಿಲುಗಡೆ ಮುಂತಾದ ಸಮಸ್ಯೆ ಗಳಾದ ಪವರ್ ಬ್ಯಾಕ್ಅಪ್ಗಾಗಿ 40 ಕಿಲೋ ವ್ಯಾಟ್ ವಿದ್ಯುತ್ ಔಟ್ಪುಟ್ ನೀಡುವ ಡೀಸೆಲ್ ಜನರೇಟರ್ ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.