2019ರಿಂದಲೇ ಬಿಲ್ ಗೇಟ್ಸ್ ದಂಪತಿ ವಿಚ್ಛೇದನ ಪ್ರಕ್ರಿಯೆ ಶುರು
Team Udayavani, May 11, 2021, 7:00 AM IST
ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಮಿಲಿಂಡಾ ಫ್ರೆಂಚ್ ಗೇಟ್ಸ್ ನಡುವಿನ ವಿಚ್ಛೇದನಕ್ಕೆ ಸಂಬಂಧಿಸಿ, ಅಮೆರಿಕದ “ವಾಲ್ ಸ್ಟ್ರೀಟ್ ಜರ್ನಲ್’ ಎರಡು ಕುತೂಹಲಕಾರಿ ವಿಚಾರಗಳನ್ನು ಪ್ರಕಟಿಸಿದೆ. “ಬಿಲ್‌ಗೆ ವಿಚ್ಛೇದನ ನೀಡಲು ಮಿಲಿಂಡಾ 2019ರಲ್ಲೇ ಪ್ರಕ್ರಿಯೆ ಶುರು ಮಾಡಿದ್ದರು’ ಹಾಗೂ “ಬಿಲ್ ಗೇಟ್ಸ್ ಹಾಗೂ ಅಮೆರಿಕದ ಲೈಂಗಿಕ ಅಪರಾಧಿ (ವಿಕೃತಕಾಮಿ) ಜೆಫ್ರಿ ಎಪ್ಸೆನ್ ನಡುವಿನ ಗಾಢ ಅನ್ಯೋನ್ಯತೆಯೇ ಮಿಲಿಂಡಾ, ಗೇಟ್ಸ್ ಅವರನ್ನು ತೊರೆಯಲು ಕಾರಣ’ ಎಂದು ವರದಿ ಹೇಳಿದೆ.
“2019ರ ಅಕ್ಟೋಬರ್‌ನಲ್ಲೇ ಬಿಲ್‌ರಿಂದ ವಿಚ್ಛೇದನಕ್ಕೆ ಮಿಲಿಂಡಾ ತಯಾರಿ ಆರಂಭಿಸಿದ್ದರು. 2013ರಿಂದಲೇ ಶುರುವಾಗಿದ್ದ ಬಿಲ್ ಹಾಗೂ ಜೆಫ್ರಿ ನಡುವಿನ ಗಾಢ ಸ್ನೇಹದಿಂದ ನೊಂದು ಈ ನಿರ್ಧಾರಕ್ಕೆ ಬಂದಿರುವುದಾಗಿ ಖುದ್ದು ಮಿಲಿಂಡಾ ಅವರೇ ತಮ್ಮ ವಕೀಲರ ಮುಂದೆ ಹೇಳಿದ್ದರು’ ಎಂದು ಪತ್ರಿಕೆ ವಿವರಿಸಿದೆ. ಜೆಫ್ರಿ ಎಪ್ಸೆನ್ 2019ರ ಆ.10ರಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ.
ಎನ್‌ವೈಟಿ ವರದಿಗೆ ಪುಷ್ಟಿ?: “ವಾಲ್ ಸ್ಟ್ರೀಟ್ ಜರ್ನಲ್’ನ ವರದಿ, 2019ರಲ್ಲಿ “ದ ನ್ಯೂಯಾರ್ಕ್ ಟೈಮ್ಸ್’ ವರದಿಯೊಂದಕ್ಕೆ ಪುಷ್ಠಿ ನೀಡುತ್ತದೆ. ಅದರಲ್ಲಿ “ಬಿಲ್ ಗೇಟ್ಸ್ ಹಾಗೂ ಜೆಫ್ರಿ ಆಗಾಗ್ಗೆ ಭೇಟಿ ಆಗುತ್ತಿದ್ದು, ಜೆಫ್ರಿ ನಿವಾಸದಲ್ಲಿ ಬಿಲ್ ಹಲವು ಬಾರಿ ತಂಗುತ್ತಿದ್ದಾರೆ’ ಎಂದು ಹೇಳಿತ್ತು. ವರದಿ ಬಗ್ಗೆ ಪ್ರತೀಕ್ರಿಯಿಸಿದ್ದ ಬಿಲ್, ಸಮಾಜ ಸೇವಾ ಕಾರ್ಯಗಳ ಹಿನ್ನೆಲೆ ಅವರನ್ನು ಭೇಟಿಯಾಗಿದ್ದಾಗಿ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.