ಕಾಲುವೆಯಲ್ಲಿ ಹರಿದು ಬಂದ ಕಾಡುಕೋಣ..!
Team Udayavani, Feb 9, 2023, 12:11 PM IST
ಶಹಾಪುರ: ಎಸ್‌ಬಿಸಿ ಕಾಲುವೆಯಲ್ಲಿ ಕಾಡುಕೋಣ ಹರಿದು ಹೋಗುತ್ತಿರುವುದನ್ನು ಕಂಡ ಗ್ರಾಮದ ಜನರು ಹಗ್ಗದಿಂದ ಅದನ್ನು ತಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ತಂಡದ ಸಹಾಯದಿಂದ ಹೊರಗಡೆ ತೆಗೆದು ಚಿಕಿತ್ಸೆಗೆಂದು ಪಶು ಆಸ್ಪತ್ರೆಗೆ ತರುವಾಗ ಕಾಡುಕೋಣ ಮಾರ್ಗ ಮಧ್ಯೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ವನದುರ್ಗದಿಂದ ಹೊಸಕೇರಾ ಮಧ್ಯದ ಎಸ್‌ಬಿಸಿ ಕಾಲುವೆಯಲ್ಲಿ ಕಾಡುಕೋಣ ಹರಿದು ಹೋಗುತ್ತಿರುವುದನ್ನು ಕಂಡ ಗ್ರಾಮದ ಶಿವರಾಜ ವನದುರ್ಗ ಹಾಗೂ ಇತರರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಸುರಪುರ ಪ್ರಾದೇಶಿಕ ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿ ಮೌಲಾಲಿಸಾಬ್ ನೇತೃತ್ವದ ತಂಡ ಗ್ರಾಮಸ್ಥರೊಂದಿಗೆ ಹರಸಾಹಸ ಪಟ್ಟು ಕಾಡುಕೋಣವನ್ನು ಮೇಲೆತ್ತಿದ್ದಾರೆ. ನಂತರ ಚಿಕಿತ್ಸೆಗೆಂದು ಸಾಗಿಸುತ್ತಿದ್ದಾಗ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಪವಲಯ ಅರಣ್ಯಾ ಧಿಕಾರಿ ಕಾಶಪ್ಪ, ಸಿದ್ಧಣ್ಣ ಗಸ್ತು ಪಾಲಕ ಹಾಗೂ ಅರಣ್ಯ ವೀಕ್ಷಕರಾದ ದುರ್ಗಣ್ಣ, ಭೀಮರಡ್ಡಿ ಹಾಗೂ ಗ್ರಾಮಸ್ಥರಿದ್ದರು.
ಕಾಡುಕೋಣ ಜನರ ಗದ್ದಲದಿಂದ ಗಾಬರಿಗೊಂಡಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿ ಹೃದಯಾಘಾತದಿಂದ ಮೃತಪಟ್ಟಿದೆ. ಕಾಲುವೆಗೆ ಬಿದ್ದು, ನೀರು ಕುಡಿದು ಮೇಲೆ ಬರಲಾಗದೇ ಪರದಾಡುತ್ತ, ಆಹಾರವಿಲ್ಲದೇ ಹರಿದು ಬಂದಿರಬಹುದು. ಕೊನೆಗೆ ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆಯವರು ಇದನ್ನು ಹೊರ ತೆಗೆದಿದ್ದಾರೆ. ಆದರೆ ದುರಾದೃಷ್ಟವಶಾತ್ ಕಾಡುಕೋಣ ಮೃತಪಟ್ಟಿದೆ.
ಡಾ| ರಾಜೂ ರಾಠೊಡ, ಪಶು ಆಸ್ಪತ್ರೆ ವೈದ್ಯಾಧಿಕಾರಿ
ಕಾಡುಕೋಣ ಈ ಭಾಗದಲ್ಲಿ ಎಲ್ಲೂ ಕಂಡು ಬರುವುದಿಲ್ಲ. ಅಂತಹ ಅರಣ್ಯವು ಇಲ್ಲಿಲ್ಲ. ಇದು ಎಲ್ಲೋ ಬೇರೆ ಕಡೆಯಿಂದ ಕಾಲುವೆಯಲ್ಲಿ ಬಿದ್ದಿದ್ದು, ಮೇಲೇರಲು ಆಗದೆ ಸುಮಾರು ಕಿ.ಮೀ.ನಿಂದ ಹರಿದುಕೊಂಡು ಈಜುತ್ತ ಬಂದಿದೆ. ಇದು ಬಹಳ ಸೂಕ್ಷ ಪ್ರಾಣಿ ಆಗಿದ್ದರಿಂದ ಜನರ ಗದ್ದಲಕ್ಕೆ ಗಾಬರಿಗೊಂಡಿದ್ದು, ಹೃದಯಾಘಾತವಾಗಿ ಮೃತಪಟ್ಟಿದೆ. ದೇಹವನ್ನು ಅರಣ್ಯ ಇಲಾಖೆ ನಿಯಮದಂತೆ ಸುಡಲಾಗುತ್ತದೆ.
ಕಾಶಪ್ಪ, ಉಪ ಅರಣ್ಯ ವಲಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.