Bizarre; ಇದು…ಊರ್ಫಿ ಜಾವೇದ್ ಅಲ್ಲ…ಈ ವ್ಯಕ್ತಿಯ ಚಮತ್ಕಾರಿ ವೇಷಭೂಷಣ ವಿಡಿಯೋ ವೈರಲ್!
ವಿಲಕ್ಷಣ ವಸ್ತುಗಳ ಫ್ಯಾಶನ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
Team Udayavani, Mar 20, 2023, 12:31 PM IST
ನವದೆಹಲಿ: ರೂಪದರ್ಶಿ, ಟಿವಿ ಸೀರಿಯಲ್ ನಟಿ ಊರ್ಫಿ ಜಾವೇದ್ ವಿಚಿತ್ರ ಫ್ಯಾಶನ್ ಮೂಲಕ ಸದಾ ಪ್ರಚಾರದಲ್ಲಿರುವುದನ್ನು ಕಾಣುತ್ತೇವೆ. ಆದರೆ ಟಿಕ್ ಟಾಕರ್ ತರುಣ್(tik toker tharun) ಎಂಬ ವ್ಯಕ್ತಿ ವಿಲಕ್ಷಣ ವೇಷಭೂಷಣದ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ʼಉರಿಗೌಡ ಮತ್ತು ನಂಜೇಗೌಡʼ ಸಿನಿಮಾ ನಿರ್ಮಾಣ ಕೈಬಿಟ್ಟ ಸಚಿವ ಮುನಿರತ್ನ
ವಿಭಿನ್ನ ವಸ್ತು, ಬಟ್ಟೆಗಳ ವೇಷಭೂಷಣಗಳಿಂದ ಊರ್ಫಿ ಜಾವೇದ್ ವಿಡಿಯೋ ವೈರಲ್ ಆಗುತ್ತಿರುವ ನಡುವೆಯೇ ತರುಣ್ ಅವರ ವಿಲಕ್ಷಣ ವಸ್ತುಗಳ ಫ್ಯಾಶನ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ತರುಣ್ ಎಂಬಾತ ಪ್ಲ್ಯಾಸ್ಟಿಕ್ ಚಮಚ, ಶ್ಯಾಂಪೋ ಪ್ಯಾಕೆಟ್ಸ್, ಬಳೆ, ಪಾತ್ರೆ ಕ್ಲೀನ್ ಮಾಡಲು ಉಪಯೋಗಿಸುವ ಬ್ರಷ್, ಹತ್ತಿ, ಪಟಾಕಿ ಸರಮಾಲೆ, ಪ್ಲ್ಯಾಸ್ಟಿಕ್ ಕವರ್, ಅಲ್ಯೂಮಿನಿಯಮ್, ಸ್ಟೀಲ್ ಪಾತ್ರೆಗಳನ್ನು ತಮ್ಮ ವೇಷಭೂಷಣಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ತಮ್ಮ ವಿಲಕ್ಷಣ ವೇಷಭೂಷಣಗಳ ವಿಡಿಯೋವನ್ನು Instagramನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಳೆಗಳನ್ನೇ ಬಿಕಿನಿಯನ್ನಾಗಿ ಮಾಡಿಕೊಂಡಿರುವ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಕೆಲವೊಂದು ಫೋಟೋಗಳನ್ನು ಕೂಡಾ ಸಾಮಾಜಿಕ ಜಾಲತಾಣದಲ್ಲಿ ತರುಣ್ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.