BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
ಡಿಸೆಂಬರ್‌ನಲ್ಲಿ ಹಲವು ಬಾಗಿಲು ಮುಚ್ಚಿ ಒಂದೇ ಬಾಗಿಲು ಮುಕ್ತ: ವಿಜಯೇಂದ್ರ, ಮುಂದಿನ ತಿಂಗಳು ವಿಜಯೇಂದ್ರ ವಿರುದ್ಧ ನಿರ್ಧಾರ: ಯತ್ನಾಳ್ ಗುಂಪಿನ ವಿಶ್ವಾಸ?
Team Udayavani, Nov 23, 2024, 7:50 AM IST
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ “ಡಿಸೆಂಬರ್’ ಬಗ್ಗೆಯೇ ಚರ್ಚೆ. ಬಿಜೆಪಿಯ ಎರಡೂ ಬಣಗಳ ನಾಯಕರು ತಮ್ಮ ಮೇಲುಗೈ ಸಾಧನೆಗಾಗಿ ಡಿಸೆಂಬರ್ ತಿಂಗಳ ಗಡುವು ವಿಧಿಸಿಕೊಂಡಿರುವುದೇ ಈ ಚರ್ಚೆಗೆ ಕಾರಣವಾಗಿದ್ದು, ಯಾರು, ಯಾರನ್ನು ಮಣಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.
ದಿಲ್ಲಿಯಲ್ಲಿ ಪತ್ರಕರ್ತರ ಜತೆ ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಡಿಸೆಂಬರ್ ಇತ್ಯರ್ಥ’ದ ಬಗ್ಗೆ ಹೇಳಿಕೆ ನೀಡಿದ್ದರೆ, ಎರಡು ದಿನಗಳ ಹಿಂದೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿ ಯಾಗಿದ್ದ ಬಸನ ಗೌಡ ಯತ್ನಾಳ್ ಕೂಡ ಇದೇ ಧ್ವನಿಯಲ್ಲಿ ಮಾತ ನಾಡಿ ದ್ದಾರೆ. ಕುತೂಹಲಕಾರಿ ಸಂಗತಿ ಯೆಂದರೆ ಇವರಿಬ್ಬರೂ ನೀಡಿದ ಅನೌಪಚಾರಿಕ ಹೇಳಿಕೆಗೆ ಮುನ್ನವೇ ಬಿಜೆಪಿಯಲ್ಲಿ “ಡಿಸೆಂಬರ್ ಚಳಿ’ ಪ್ರಾರಂಭವಾಗಿ ವಾರಗಳು ಕಳೆದಿವೆ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಪತ್ರಕರ್ತರು, “ಬಿಜೆಪಿಯಲ್ಲಿ ಮನೆಯೊಂದು, ಮೂರು ಬಾಗಿಲು’ ಎಂದು ವಿಜಯೇಂದ್ರ ಅವರ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಇಲ್ಲ, ಡಿಸೆಂಬರ್‌ನಲ್ಲಿ ಎಲ್ಲ ಬಾಗಿಲು ಮುಚ್ಚಿಸುತ್ತೇನೆ, ನೋಡುತ್ತಿರಿ’ ಎಂದಿದ್ದಾರೆ. ಈ ಮೂಲಕ ಪಕ್ಷದೊಳಗಿನ ಎಲ್ಲ ಬಂಡಾಯಗಳನ್ನು ಸ್ತಬ್ದಗೊಳಿಸಲಾಗುವುದು ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.
ಯತ್ನಾಳ್ ಕೂಡ ಇದೇ ದಾಟಿಯಲ್ಲಿ ಮಾತ ನಾಡಿ ದ್ದಾರೆ. “ಏನ್ ಸರ್ ಕತೆ, ಬರೀ ಮಾತು ಮಾತ್ರವೋ, ಪರಿಣಾಮವಾಗುತ್ತದೆಯೋ’ ಎಂದು ಪತ್ರಕರ್ತರು ಕಾಲೆಳೆದಾಗ, “ಡಿಸೆಂಬರ್‌ನಲ್ಲಿ ರಿಸಲ್ಟ್ ಕೊಡುತ್ತೇವೆ’ ಎಂದಿ ದ್ದಾರೆ. ಆ ಮೂಲಕ ತಮ್ಮ ಬಣ ಮೇಲುಗೈ ಸಾಧಿಸುತ್ತದೆ ಎಂಬ ಅರ್ಥವನ್ನು ಧ್ವನಿಸಿದ್ದಾರೆ.
ಒಡಕು ಒಪ್ಪಿದ ವಿಜಯೇಂದ್ರ
ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿ ಪ್ರಾಯ ಇರುವ ಬಗ್ಗೆ ಹಾಗೂ ತಮ್ಮ ನಾಯಕತ್ವದ ವಿರುದ್ಧ ಅಲೆ ಇರುವುದನ್ನು ಒಪ್ಪಿಕೊಂಡಿದ್ದಾರೆ. “ಕೆಲವು ಹಿರಿಯ ನಾಯಕರಿಗೆ ನನ್ನ ನಾಯಕತ್ವ ಒಪ್ಪಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಇಂದಲ್ಲ ನಾಳೆ ಪಕ್ಷದ ಹಿತಾಸಕ್ತಿಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳು ವಲ್ಲಿ ನಾನು ಯಶಸ್ವಿಯಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಸದ್ಯ ಹೈದರಾ ಬಾದ್ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗ ದಲ್ಲಿ ಪಕ್ಷವನ್ನು ಬಲಪಡಿಸುವುದು ನಮ್ಮ ಆದ್ಯತೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಈ ಸರಕಾರವು ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಕೇಂದ್ರ ಸರಕಾರದ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಇದು ಸಾಲದೆಂಬಂತೆ ರೈತರ ಜಮೀನಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಸರಕಾರದಲ್ಲಿ ಅನುದಾನವೇ ಇಲ್ಲ. ಇದರ ಬಗ್ಗೆ ಸ್ವತಃ ಆ ಪಕ್ಷದ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ, ಇನ್ನೊಂದೆಡೆ ಅಭಿವೃದ್ಧಿ ಚಟುವಟಿಕೆಗೆ ಹಣವೂ ಇಲ್ಲದಂತಾಗಿದೆ. ಹೀಗಾಗಿ 224 ಕ್ಷೇತ್ರಗಳ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಸ್ಥಳೀಯ ಕಾಮಗಾರಿಗಳಿಗೆ ಅನುದಾನ ಪಡೆಯಲು ಸಾಧ್ಯವಾಗುತ್ತಿಲ್ಲ.
ಹಾಲು ಮತ್ತು ಇಂಧನ ದರ ಏರಿಕೆ, ಮುದ್ರಾಂಕ ತೆರಿಗೆ ಏರಿಕೆ ಸಹಿತ ಈ ಸರಕಾರದ ಇತ್ತೀಚೆಗಿನ ಕೆಲವು ನೀತಿಗಳು ನೇರವಾಗಿ ಬಡವರ ಹಾಗೂ ರೈತರ ಮೇಲೆ ದುಷ್ಪರಿಣಾಮ ಬೀರಿವೆ ಎಂದು ಕಿಡಿಕಾರಿದರು. ಇದೇ ವೇಳೆ ಅಕ್ರಮ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದರ ಬಗ್ಗೆ ನಮಗೆ ವಿರೋಧ ಇಲ್ಲ. ಆದರೆ ಪಾನ್ ಕಾರ್ಡ್ ಹೊಂದಿದ್ದಾರೆಂಬ ಕಾರಣಕ್ಕೆ 12 ಲಕ್ಷ ಕಾರ್ಡ್‌ಗಳನ್ನು ರದ್ದು ಮಾಡಿರುವುದು ಅವೈಜ್ಞಾನಿಕ ಎಂದು ಕಿಡಿಕಾರಿದರು.
ಯಾಕೆ ಈ ಡಿಸೆಂಬರ್ ಚರ್ಚೆ?
1. ಡಿಸೆಂಬರ್ ತಿಂಗಳಿನಲ್ಲಿ ಬಿಜೆಪಿಯ ಸದಸ್ಯತ್ವ ಅಭಿಯಾನ ಹಾಗೂ ಸಂಘಟನ ಪರ್ವ ಅಂತ್ಯ
2. ಈ ವೇಳೆ ಖಾಲಿ ಇರುವ ಬೂತ್, ಮಂಡಲ, ವಿವಿಧ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಪೂರ್ಣ
3. ಕ್ರಿಯಾಶೀಲರಲ್ಲದವರ ಬದಲಾವಣೆ, ಇದಕ್ಕೆ ಚುನಾವಣ ಪ್ರಕ್ರಿಯೆ ನಡೆಯಲಿದೆ
4. ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯೂ ಇದೇ ಸಂದರ್ಭ ನಡೆಯುವ ಬಗ್ಗೆ ಚರ್ಚೆ ಸಾಧ್ಯತೆ
5 . ಈ ಸಂದರ್ಭದಲ್ಲಿ ಪಕ್ಷದ ಬಣ ರಾಜಕಾರಣಕ್ಕೆ ಅಂತ್ಯ ಸಿಗುವ ನಿರೀಕ್ಷೆ
“ನಮ್ಮಲ್ಲಿ ಎಷ್ಟು ಬಾಗಿಲುಗಳಿವೆ ಎಂಬುದು ಮುಖ್ಯವಲ್ಲ. ಮಾಧ್ಯಮದವರು ಹೇಳುವಂತೆ ಐದಾರು ಬಾಗಿಲುಗಳಿದ್ದರೂ ಡಿಸೆಂಬರ್‌ನಲ್ಲಿ ಒಂದೇ ಬಾಗಿಲು ಕಾರ್ಯನಿರ್ವಹಣೆ ಮಾಡಲಿದೆ. ಉಳಿದ ಬಾಗಿಲುಗಳು ಬಂದ್ ಆಗಲಿವೆ.” – ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.