Congress ಸರಕಾರದ ವಿರುದ್ಧ ಬಿಜೆಪಿ ಮಾಸ್ಟರ್ ಪ್ಲಾನ್?
ಅಶೋಕ್ ಮತ್ತು ತಂಡಕ್ಕೆ ದಿಲ್ಲಿಯಿಂದ ವರಿಷ್ಠರ ಕರೆ
Team Udayavani, Aug 28, 2024, 12:11 AM IST
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಲ್ಲಿ ಪ್ರವಾಸದ ಬೆನ್ನಲ್ಲೇ ವಿಪಕ್ಷ ನಾಯಕ ಆರ್. ಅಶೋಕ್ ಬಣವೂ ದಿಲ್ಲಿಗೆ ದೌಡಾಯಿಸಲಿದ್ದು, ಬಿಜೆಪಿ ಯಲ್ಲಿ ಸದ್ದಿಲ್ಲದೇ ಬೆಳವಣಿಗೆಗಳು ಪ್ರಾರಂಭವಾಗಿವೆ.
ಬುಧವಾರ ಮಧ್ಯಾಹ್ನ ಅಶೋಕ್ ದಿಲ್ಲಿಗೆ ತೆರಳಲಿದ್ದು, ಅವರ ಜತೆಗೆ ಮಾಜಿ ಡಿಸಿಎಂ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಕೂಡ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಾಧ್ಯಕ್ಷರ ಭೇಟಿ ಬೆನ್ನಲ್ಲೇ ವಿಪಕ್ಷ ನಾಯಕರಿಗೂ ಆಹ್ವಾನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಸರಕಾರದ ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುವುದಕ್ಕೆ ರಾಜ್ಯ ನಾಯಕರಿಗೆ ವರಿಷ್ಠರೇ ಬುಲಾವ್ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಟಿಕೆಟ್ ಚರ್ಚೆ
ಇನ್ನೊಂದು ಮೂಲಗಳ ಪ್ರಕಾರ ಚನ್ನಪಟ್ಟಣ ಸೇರಿ 3 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯ ತಿಳಿಸಲು ಅವರು ದಿಲ್ಲಿಗೆ ತೆರಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅಶ್ವತ್ಥನಾರಾಯಣ ಕೂಡ ಜತೆಗೆ ಪ್ರಯಾಣಿಸುತ್ತಿದ್ದು, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವಂತೆ ಅಶೋಕ್ ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಡಾ| ಅಶ್ವತ್ಥ ನಾರಾಯಣ ಈ ಹಿಂದೆಯೇ ಯೋಗೇಶ್ವರ್‌ಗೆ ಚನ್ನಪಟ್ಟಣ ಟಿಕೆಟ್ ನೀಡುವಂತೆ ಪಕ್ಷಕ್ಕೆ ಶಿಫಾರಸು ಮಾಡಿದ್ದಾರೆಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.