ಬಿಜೆಪಿ ಶಾಸಕನಿಂದ ಲೈಂಗಿಕ ದೌರ್ಜನ್ಯ: ಮಹಿಳೆ  ದೂರು

 ಮಹಿಳೆಯಿಂದ ಬ್ಲ್ಯಾಕ್‌ಮೇಲ್: ಶಾಸಕ ರಾಜ್‌ಕುಮಾರ್‌ ಆರೋಪ

Team Udayavani, Feb 8, 2022, 6:45 AM IST

ಬಿಜೆಪಿ ಶಾಸಕನಿಂದ ಲೈಂಗಿಕ ದೌರ್ಜನ್ಯ: ಮಹಿಳೆ  ದೂರು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ಸುಳ್ಳುಸುದ್ದಿ ಹರಿಬಿಟ್ಟು 2 ಕೋಟಿ ರೂ.ಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಲಬುರಗಿಯ ಸೇಡಂ ವಿಧಾನಸಭಾ ಕ್ಷೇತ್ರದ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಮಹಿಳೆ ಸಹಿತ ನಾಲ್ವರನ್ನು ಪೊಲೀಸರು  ವಿಚಾರಣೆ ನಡೆಸಿದ್ದಾರೆ.

ಮತ್ತೂಂದೆಡೆ ಮಹಿಳೆಯು ಸೋಮವಾರ ತಮ್ಮ ಪರ ವಕೀಲ ಕೆ.ಎನ್‌. ಜಗದೀಶ್‌ ಜತೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಸುಬ್ರಹ್ಮಣೇಶ್ವರ್‌ ರಾವ್‌ ಅವರಿಗೆ ದೂರು ನೀಡಿದ್ದು, ಶಾಸಕರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ  ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಅದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳೆ, ಶಾಸಕ ರಾಜಕುಮಾರ್‌ ಪಾಟೀಲ್‌ ತನ್ನ ಜತೆ ದೈಹಿಕ ಸಂಬಂಧ ಬೆಳೆಸಿದ ಪರಿಣಾಮ ನನಗೆ 14 ವರ್ಷದ ಮಗನಿದ್ದಾನೆ. ಆತನಿಗೆ  ಅವರು ತಂದೆಯ ಸ್ಥಾನ ಕೊಟ್ಟು ಜೀವನಾಂಶ  ನೀಡಬೇಕೆಂದು ಆಗ್ರಹಿಸಿದ್ದಾರೆ.

ರವಿವಾರ ಬೆಳಗ್ಗೆ 7 ಗಂಟೆಗೆ 8ರಿಂದ 10 ಮಂದಿ ಪೊಲೀಸರು ಬಂದು ನನ್ನನ್ನು ವಿಧಾನಸೌಧ ಪೊಲೀಸ್‌ ಠಾಣೆಗೆ ಕರೆದೊಯ್ದರು. ಬಳಿಕ ವಿಜಯಕುಮಾರ್‌ ಎಂಬವರು ಹಾಗೂ ಪೊಲೀಸರು, ಕಾಂಗ್ರೆಸ್‌ ಪಕ್ಷದವರು ರಾಜಕುಮಾರ್‌ ಪಾಟೀಲ್‌ ವಿರುದ್ಧ ಆರೋಪ ಮಾಡುವಂತೆ  ಪ್ರಚೋದನೆ ನೀಡಿ ಈ ರೀತಿ ಆರೋಪ ಮಾಡಿಸುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದು ಸಹಿ ಹಾಕಿಕೊಡಿ. ಈ ರೀತಿ ಪತ್ರದಲ್ಲಿ ಬರೆದು ಸಹಿ ಮಾಡಿಕೊಟ್ಟರೇ ನಿನಗೂ ಅನ್ಯಾಯವಾಗದಂತೆ ಸೆಟ್ಲಮೆಂಟ್‌ ಮಾಡಿಸಿಕೊಡಿಸುತ್ತೇವೆ’ ಎಂದು ಹಿಂಸೆ ನೀಡಿದ್ದರು. ನನ್ನ ಮೊಬೈಲನ್ನೂ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಜೆಎನ್‌ಯುಗೆ ಶಾಂತಿ ಪಂಡಿತ್‌ ಕುಲಪತಿ; ಇದೇ ಮೊದಲ ಬಾರಿಗೆ ಮಹಿಳಾ ಕುಲಪತಿ ನೇಮಕ

ಶಾಸಕರ ದೂರಿನಲ್ಲಿ ಏನಿದೆ?
ಕಲುಬುರಗಿಯ ಮಹಿಳೆ ಹಾಗೂ ಆಕೆಯ ಪತಿ 2009 ರಲ್ಲಿ ಮೊದಲಿಗೆ ಪರಿಚಯವಾಗಿದ್ದು, 2013ರಲ್ಲಿ ಜಮೀನು ವ್ಯಾಜ್ಯದ ಇತ್ಯರ್ಥಕ್ಕೆ ದಂಪತಿ ನನ್ನ ಸಹಾಯ ಪಡೆದುಕೊಂಡಿದ್ದರು. ಅನಂತರ ಅವರ ಪುತ್ರನನ್ನು ಶಾಲೆಗೆ ದಾಖಲಿಸಲು ಸಹಾಯ ಪಡೆದಿದ್ದರು. ಆದರೆ, ಮಹಿಳೆಯು 2018ರಲ್ಲಿ ಏಕಾಏಕಿ ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಮೊದಲ ಬಾರಿಗೆ ಸುಳ್ಳು ಆರೋಪ ಮಾಡಿ ಸಂದೇಶ ಕಳುಹಿಸಿದ್ದರು.

ಅದೇ ವರ್ಷ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನನ್ನ ವಿರುದ್ಧ ದೂರು ನೀಡುವುದಾಗಿ ಬೆದರಿಕೆ ಹಾಕಿ, ಯಾವುದೇ ದೂರನ್ನು  ನೀಡದೆ ಹಣಕ್ಕೆ ಬೇಡಿಕೆಯಿಟ್ಟಿದ್ದರು. 2021ರ ಮಾರ್ಚ್‌ನಿಂದಲೂ ಸುಮಾರು 6 ತಿಂಗಳ ಕಾಲ ತನ್ನನ್ನು ಭೇಟಿಯಾಗುವಂತೆ ಆಕೆ ನನ್ನನ್ನು ಒತ್ತಾಯಿಸುತ್ತಿದ್ದಾರೆ. ಕೋರಿಕೆಯಂತೆ ಶಾಂಗ್ರಿಲಾ ಹೊಟೇಲ್‌ನಲ್ಲಿ ನನ್ನ ಪತ್ನಿಯ ಜತೆ ತೆರಳಿ ಆಕೆಯನ್ನು ಭೇಟಿಯಾಗಿದ್ದೆ.

ಈ ವೇಳೆ ನನ್ನನಿಂದಲೇ ಮಗುವಾಗಿದ್ದು, ಅದನ್ನು ನೋಡಿಕೊಳ್ಳಲು 2 ಕೋಟಿ ರೂ. ನೀಡಬೇಕು ಎಂದು ಒತ್ತಾಯಿಸಿದ್ದಳು. ಅದನ್ನು ನಾನು ಹಾಗೂ  ಪತ್ನಿ ವಿರೋಧಿಸಿದ್ದೆವು. ಅನಂತರ ಮತ್ತೂಮ್ಮೆ ಸಂದೇಶ ಕಳುಹಿಸಿ ಸರಕಾರದ ಮುಖ್ಯ ಹುದ್ದೆಯಲ್ಲಿರುವವರ ಗಮನ ಸೆಳೆದು ನನ್ನ ಗೌರವಕ್ಕೆ ಧಕ್ಕೆ  ತರುವುದಾಗಿ ಬೆದರಿಸಿದ್ದಳು. ಆಕೆಯ ಪರಿಚಯಸ್ಥರಿಂದ ಕರೆ ಮಾಡಿಸಿ 2 ಕೋಟಿ ರೂ. ನೀಡುವಂತೆ ಒತ್ತಾಯಿಸಿದ್ದಳು. ನೀಡದಿದ್ದರೆ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಳು. ಅಲ್ಲದೇ, ನನ್ನ ಮೇಲೆ ಸುಳ್ಳು ಆರೋಪಗಳನ್ನು ಟ್ವೀಟ್‌ ಮಾಡಿ ಅದನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಟ್ಯಾಗ್‌ ಮಾಡಿದ್ದಳು. ಈ ಸಂಬಂಧ ಕಾನೂನು ಕ್ರಮಕೈಗೊಳ್ಳುವಂತೆ ಶಾಸಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ. ಜನರಿಗಾಗಿ, ದೇಶಕ್ಕಾಗಿ ದುಡಿಯುವ ನನ್ನಂಥವರ ಮೇಲೆ ಆರೋಪ ಸರಿಯಲ್ಲ.
-ರಾಜಕುಮಾರ ಪಾಟೀಲ್‌ ತೇಲ್ಕೂರ್‌ ,
ಸೇಡಂ ಶಾಸಕ

ಟಾಪ್ ನ್ಯೂಸ್

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…

jairam ramesh

Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

siddaramaiah

MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು

Ashok-Sha

Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

4

Kasaragod: ಸ್ಕೂಟರ್‌ ಅಪಘಾತ; ಸವಾರನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.