ಉತ್ತರ ಪ್ರದೇಶದಲ್ಲಿ ಜಾತಿವಾರು ಪ್ರಚಾರಕ್ಕೆ ಬಿಜೆಪಿ ಸಿದ್ಧತೆ
Team Udayavani, Oct 4, 2021, 6:30 AM IST
ಲಕ್ನೋ: ಉತ್ತರ ಪ್ರದೇಶ ಚುನಾವಣೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಿಜೆಪಿ, ಜಾತಿವಾರು ಪ್ರಚಾರ ನಡೆಸಲು ಯೋಜನೆ ಹಾಕಿಕೊಂಡಿದೆ. 200 ಒಬಿಸಿ ರ್ಯಾಲಿ, ಎಸ್ಸಿ ಸಮ್ಮೇಳನಗಳನ್ನು ನಡೆಸುವುದಾಗಿ ಪಕ್ಷ ಹೇಳಿಕೊಂಡಿದೆ. ಹಾಗೆಯೇ ಅಲ್ಪಸಂಖ್ಯಾತರ ಮತ ಸೆಳೆಯುವುದಕ್ಕಾಗಿ ವಿಶೇಷ ತಂಡ ರಚಿಸಲು ಮುಂದಾಗಿದೆ.
ಬಿಜೆಪಿ ಪ್ರತಿ ಎರಡು ಕ್ಷೇತ್ರಕ್ಕೆ ಒಂದರಂತೆ ಒಟ್ಟು 202 ರ್ಯಾಲಿಗಳನ್ನು ನಡೆಸಲಿದೆ. ಒಬಿಸಿ ಸಮುದಾಯಗಳಿಗಾಗಿಯೇ ಈ ರ್ಯಾಲಿ ನಡೆಸಲಾಗುವುದು. ಒಬಿಸಿಯ ಉಪ ಜಾತಿಗಳಿಗಾಗಿ 20 ಸಾಮಾಜಿಕ ಸಮ್ಮೇಳನ ನಡೆಸಲಾಗುವುದು. ಎಸ್ಸಿ ಮೋರ್ಚಾದವರು 75 ಜಿಲ್ಲೆಗಳಲ್ಲಿ ಅನುಸೂಚಿತ ಜಾತಿ ಸಮ್ಮೇಳನ ನಡೆಸಲಿದ್ದಾರೆ. ಅಲ್ಪಸಂಖ್ಯಾತ ಮೋರ್ಚಾವು ಮುಸ್ಲಿಂ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ 21 ಸದಸ್ಯರ ವಿಶೇಷ ತಂಡ ರಚಿಸುತ್ತಿದ್ದು, ಮತ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ಯುಎಇಗಿಂತ ಮುನ್ನ ಭಾರತದಲ್ಲಿ ಹೈಪರ್ಲೂಪ್? ಸುಲ್ತಾನ್ ಅಹ್ಮದ್ ಸುಳಿವು
“ಕೈ’ ಕೊಟ್ಟ ಶಾಸಕ?
ಇನ್ನೊಂದೆಡೆ, ಗೋವಾದ ಮಾಜಿ ಸಿಎಂ ಲುಯಿಜಿನ್ಹೊ ಅವರು ಕಾಂಗ್ರೆಸ್ ತ್ಯಜಿಸಿ ಟಿಎಂಸಿ ಸೇರಿದ ಬೆನ್ನಲ್ಲೇ ಮತ್ತೊಬ್ಬ ಶಾಸಕ ಅಲೆಕ್ಸೊ ಲಾರೆಂಕೊ ಪಕ್ಷ ತ್ಯಜಿಸಿ ಎಎಪಿ ಸೇರಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡತೊಡಗಿದೆ. ಒಂದು ವೇಳೆ ಹಾಗಾದರೆ ಗೋವಾದಲ್ಲಿ ಕಾಂಗ್ರೆಸ್ ಸ್ಥಾನ 3ಕ್ಕೆ ಕುಸಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.