ಪತಿಯಿಂದಲೇ ಪತ್ನಿಗೆ ಬ್ಲ್ಯಾಕ್ ಮೇಲ್; ನಗ್ನ ಫೋಟೋ ಜಾಲತಾಣದಲ್ಲಿ ಹಾಕುವ ಬೆದರಿಕೆ
ಉದ್ಯಮಿ ಪ್ರಗತ್ ಪುರುಷೋತ್ತಮ್ (32) ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
Team Udayavani, Feb 28, 2022, 12:24 PM IST
ಬೆಂಗಳೂರು: ತವರು ಮನೆಯ ಅರ್ಧ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿ, ವಿಚ್ಛೇದನ ನೀಡಬೇಕು. ಇಲ್ಲವಾದರೆ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಪತಿಯೇ ಪತ್ನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲು ಕೇಂದ್ರ ಸಚಿವರಿಗೆ ಹೊಣೆ; PM ಮೋದಿ ದಿಟ್ಟ ಕ್ರಮ
ಈ ಘಟನೆಯಿಂದ ನೊಂದ ಲಕ್ಕಸಂದ್ರದ 26 ವರ್ಷದ ಸಂತ್ರಸ್ತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಹನುಮಂತನಗರದ ನಿವಾಸಿ, ಉದ್ಯಮಿ ಪ್ರಗತ್ ಪುರುಷೋತ್ತಮ್ (32) ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಆರೋಪಿ ಪ್ರಗತ್ ದೂರು ದಾರ ಮಹಿಳೆಯನ್ನು 2015ರಲ್ಲಿ ಮದುವೆಯಾಗಿದ್ದರು. ವಿವಾಹದ ಸಂದರ್ಭದಲ್ಲಿಯೇ ಅರ್ಧ ಕೆ.ಜಿ. ಬಂಗಾರ, 15 ಕೆ.ಜಿ. ಬೆಳ್ಳಿ ಹಾಗೂ ಇತರೆ ಮೌಲ್ಯ ಯುತ ವಸ್ತುಗಳು ವರದಕ್ಷಿಣೆ ರೂಪದಲ್ಲಿ ಕೊಡಲಾಗಿತ್ತು.ಆರಂಭದಲ್ಲಿ ಚೆನ್ನಾಗಿದ್ದರು. ನಂತರ ಆರೋಪಿ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಈ ವಿಚಾರ ತಿಳಿದ ಆಕೆಯ ಪೋಷಕರು 40 ಲಕ್ಷ ರೂ. ಕೊಟ್ಟಿದ್ದರು.
ಪತ್ನಿಯ ನಗ್ನ ದೃಶ್ಯ ಸೆರೆ: ಆದರೂ ತೃಪ್ತಿಯಾಗದ ಆರೋಪಿ ಮದ್ಯದ ಅಮಲಿನಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿ, ಆಕೆಯ ನಗ್ನ ಫೋಟೋಗಳನ್ನು ತೆಗೆಯುತ್ತಿದ್ದ. ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಬಳಿಕ ತವರು ಮನೆಯ ಆರ್ಧ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿ, ನಂತರ ತನಗೆ ವಿಚ್ಛೇದನ ಕೊಡಬೇಕು. ಇಲ್ಲವಾದರೆ ನಗ್ನ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.