![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jul 29, 2020, 4:22 PM IST
ಮುಂಬೈ: ಆರ್ ಪಾರ್, ಸಿಐಡಿ, ಕೊಹಿನೂರ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡ ನಾಯಕಿ ನಟಿ ಕುಂಕುಮ್ (86) ಅವರು ಮುಂಬೈನ ಬಾಂದ್ರಾದಲ್ಲಿರುವ ನಿವಾಸದಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ.
ಹಿರಿಯ ಬಾಲಿವುಡ್ ನಟಿ ಕುಂಕುಮ್ ಅವರು 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಇವರು ಅಭಿನಯಿಸಿದ ಜನಪ್ರಿಯ ಹಾಡುಗಳಾದ ಕಭಿ ಆರ್ ಕಭಿ ಪಾರ್ ಮತ್ತು ಮೇರೆ ಮೆಹಬೂಬ್ ಕಯಾಮತ್ ಹೋಗಿ ಇಂದಿಗೂ ಸ್ಮರಣೀಯವಾಗುಳಿದಿದೆ.
ನವೇದ್ ಜಾಫ್ರಿ ಟ್ವಿಟ್ಟರ್‌ನಲ್ಲಿ ಸುದ್ದಿ ಹಂಚಿಕೊಂಡಿದ್ದು, ನಾವು ಮತ್ತೂಂದು ರತ್ನವನ್ನು ಕಳೆದುಕೊಂಡಿದ್ದೇವೆ. ನಾನು ಚಿಕ್ಕವನಾಗಿದ್ದಾಗಿನಿಂದ ನಾನು ಅವರನ್ನು ತಿಳಿದಿದ್ದೇನೆ, ಅವರ ಅದ್ಭುತ ಕಲಾವಿದರು ಮತ್ತು ಅದ್ಭುತ ಮಾನವೀಯ ಗುಣವುಳ್ಳವರಾಗಿದ್ದರು ಎಂದಿದ್ದಾರೆ.
ಮಿಸ್ಟರ್ ಎಕ್ಸ್ ಇನ್ ಬಾಂಬೆ, ಮದರ್ ಇಂಡಿಯಾ, ಸನ್ ಆಫ್ ಇಂಡಿಯಾ, ಕೊಹಿನೂರ್, ಉಜಲಾ, ನಯಾ ದೌರ್, ಶ್ರೀಮಾನ್ ಫುಂಟೂಶ್, ಏಕ್ ಸಪೇರಾ ಏಕ್ ಲುಟೆರಾ, ಗಂಗಾ ಕಿ ಲಹರೇನ್, ರಾಜಾ ಔರ್ ರಂಕ್, ಆಂಖೇನ್, ಲಲ್ಕಾರ್, ಗೀತ್ ಮತ್ತು ಏಕ್ ಕುವರಾ ಏಕ್ ಕುವಾರಿ ಚಲನಚಿತ್ರಗಳು ನಟನೆಯಲ್ಲಿ ಜನಪ್ರಿಯತೆ ತಂದು ಕೊಟ್ಟಿತ್ತು.
ಅಷ್ಟೇ ಅಲ್ಲದೆ 1963ರಲ್ಲಿ ಮೊದಲ ಭೋಜ್‌ಪುರಿ ಚಿತ್ರ ಗಂಗಾ ಮಾಯ್ಯ ತೋಹೆ ಪಿಯಾರಿ ಚಾಧೈಬೊದಲ್ಲಿ ನಟಿಸಿದ್ದರು.
ಕುಂಕುಮ್ ಅವರು ಗುರುದತ್ ಅವರ ಚಲನಚಿತ್ರ ಆರ್ ಪಾರ್‌ಲ್ಲಿ ಕಭಿ ಆರ್ ಕಭಿ ಪಾರ್ ನಂತಹ ಜನಪ್ರಿಯ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಹಿಂದಿ ಚಲನಚಿತ್ರ ಪ್ರದರ್ಶನ ಎಂದು ಹೇಳಲಾಗುತ್ತದೆ. ಗುರುದತ್ ಅವರ ಸಿಐಡಿಯಲ್ಲಿ ಯೆ ಹೈ ಬಾಂಬೆ ಮೇರಿ ಜಾನ್ ಹಾಡಿನಲ್ಲಿಯೂ ಅವಳು ಕಾಣಿಸಿಕೊಂಡಿದ್ದಳು. ಮಧುಬನ್ ಮೇ ರಾಧಿಕಾ ನಾಚೆ ರೇ ಮತ್ತೂಂದು ಜನಪ್ರಿಯ ಹಾಡು, ಇದು ಕುಂಕುಮ್ ಅವರನ್ನು ನೃತ್ಯ ಪ್ರತಿಭೆಯಾಗಿ ಗುರುತಿಸುವಂತೆ ಮಾಡಿತ್ತು.
ನಟಿಯ ಅಂತಿಮ ಕ್ರಿಯಾ ವಿಧಿಗಳನ್ನು ಮಜಗಾಂವ್ ಶ್ಮಶಾನದಲ್ಲಿ ನಡೆಸಲಾಯಿತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.