Book Release: ಟಿಪ್ಪು ಅತ್ಯಂತ ಸಂಕೀರ್ಣ ವ್ಯಕ್ತಿ: ವಿದೇಶಾಂಗ ಸಚಿವ ಜೈಶಂಕರ್
ಬ್ರಿಟಿಷರ ವಿರುದ್ಧ ಟಿಪ್ಪುವಿನ ಹೋರಾಟಕ್ಕೆ ಹೆಚ್ಚು ಪ್ರಾಮುಖ್ಯ, ಆತನ ಇತರ ಆಡಳಿತದ ಬಗ್ಗೆ ನಿರ್ಲಕ್ಷ್ಯ
Team Udayavani, Dec 2, 2024, 7:14 AM IST
ಹೊಸದಿಲ್ಲಿ: ಭಾರತ ಇತಿಹಾಸದಲ್ಲಿ ಟಿಪ್ಪು ಸುಲ್ತಾನ್ ಅತ್ಯಂತ ಸಂಕೀರ್ಣ ವ್ಯಕ್ತಿ. ಟಿಪ್ಪು ವಿಷಯದಲ್ಲಿ ಬೇಕಾದ ಸಂಗತಿಗಳನ್ನೆಷ್ಟೇ ಎತ್ತಿಕೊಂಡು ಕಥನ ಕಟ್ಟಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸಕಾರ ವಿಕ್ರಮ್ ಸಂಪತ್ ಅವರ ಟಿಪ್ಪು ಸುಲ್ತಾನ್ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದೆಡೆ ಟಿಪ್ಪು ಸುಲ್ತಾನ್ ದಕ್ಷಿಣ ಭಾಗದಲ್ಲಿ ಬ್ರಿಟಿಷರ್ ವಸಾಹತುಶಾಹಿ ನಿಯಂತ್ರಣಕ್ಕೆ ಪ್ರಯತ್ನಿಸಿದ ಪ್ರಮುಖ ವ್ಯಕ್ತಿ. ಇದು ದಕ್ಷಿಣ ಭಾರತದ ಭವಿಷ್ಯಕ್ಕೆ ಬಂದಾಗ ಅವರ ಸೋಲು ಮತ್ತು ಮರಣವು ಒಂದು ಮಹತ್ವದ ತಿರುವು ಎನ್ನುವುದು ಅಷ್ಟೇ ನಿಜ. ಆದರೆ, ಅವರ ಆಡಳಿತದ ಪ್ರತಿಕೂಲ ಪರಿಣಾಮಗಳನ್ನು ಮೈಸೂರು ಪ್ರಾಂತ ಕಾಣಬೇಕಾಯಿತು. ವಿಶೇಷವಾಗಿ ಮಡಿಕೇರಿ ಮತ್ತು ಮಲಬಾರ್‌ನಲ್ಲಿ ಹೆಚ್ಚು ಕಾಣಬಹುದು. ಆದರೆ ಅದನ್ನು ಇತಿಹಾಸಕಾರರು ನಿರ್ಲಕ್ಷಿಸಿದರು ಎಂದರು.
ಇತಿಹಾಸವು ಸಂಕೀರ್ಣವಾಗಿದ್ದು, ತಮಗೆ ಬೇಕಾದ ಸಂಗತಿಗಳನ್ನು ಮಾತ್ರವೇ ಮುಂದು ಮಾಡುವ ಪ್ರವೃತ್ತಿ ಬೆಳೆದಿದೆ. ಟಿಪ್ಪು ವಿಷಯದಲ್ಲಿ ಆತನ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾತ್ರ ಹೆಚ್ಚು ಪ್ರಚುರಪಡಿಸಲಾಗಿದೆ. ಆದರೆ, ಈಗ ನಾವು ವೋಟ್ ಬ್ಯಾಂಕ್‌ನ ಕೈದಿಗಳಾಗಿ ಉಳಿದಿಲ್ಲ. ಪರ್ಯಾಯ ಆಲೋಚನೆಗಳಿಗೂ ಅವಕಾಶ ನೀಡುತ್ತಿದ್ದೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indore; ಭಿಕ್ಷುಕರ ಬಗ್ಗೆ ಮಾಹಿತಿ ಹಂಚಿಕೊಂಡರೆ ನಾಗರಿಕರಿಗೆ 1,000 ರೂ. ಬಹುಮಾನ!
Anmol Bishnoi; ಅಪರಾಧ ಜಾಲದ ಪ್ರಾಬಲ್ಯ ಸ್ಥಾಪಿಸಲು ಬಾಬಾ ಸಿದ್ದಿಕಿ ಹ*ತ್ಯೆ!
Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
Mahakumbh Mela: ಪ್ರಯಾಗ್ ರಾಜ್ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು ಬೆದರಿಕೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.