Border Dispute: ಗಾಲ್ವನ್ ಸೇರಿ 4 ಗಡಿ ಪ್ರದೇಶಗಳಿಂದ ಸೇನೆ ವಾಪಸ್: ಚೀನ ಸರಕಾರ
ಶೇ.75ರಷ್ಟು ಸೇನೆ ನಿರ್ಗಮನ, ಸದ್ಯ ಗಡಿಯಲ್ಲಿ ಶಾಂತ ಸ್ಥಿತಿ ಇದೆ, ದೆಮ್ಚಾಕ್, ದೆಸ್ಪಾಂಗ್ನಲ್ಲಿ ಸೇನೆ ಇನ್ನೂ ಬೀಡು
Team Udayavani, Sep 15, 2024, 1:44 AM IST
ಹೊಸದಿಲ್ಲಿ: ಭಾರತದ ಜತೆಗಿನ ಗಡಿ ಬಿಕ್ಕಟ್ಟು ಶಮನವಾಗಿದೆ ಮತ್ತು ಗಾಲ್ವನ್ ಕಣಿವೆ ಸೇರಿದಂತೆ 3 ಸ್ಥಳಗಳಿಂದ ಶೇ.75ರಷ್ಟು ಸೇನೆಯನ್ನು ಹಿಂಪಡೆ ಯಲಾಗಿದೆ ಎಂದು ಚೀನ ಸರಕಾರ ತಿಳಿಸಿದೆ.
ಜತೆಗೆ ಅಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದೂ ಚೀನ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ. ಆದರೆ ದೆಮ್ಚಾಕ್ ಮತ್ತು ದೆಸ್ಪಾಂಗ್ ಪ್ರದೇಶಗಳಲ್ಲಿ ಇನ್ನೂ ಚೀನ ಸೇನೆ ಇದೆ. ಈ ಪ್ರದೇಶಗಳಿಂದಲೂ ಕೂಡ ಸಂಪೂರ್ಣವಾಗಿ ಚೀನ ಸೇನೆ ಹಿಂದಕ್ಕೆ ಸರಿಯಬೇಕು ಎಂದು ಕೇಂದ್ರ ಸರಕಾರ ಆಗ್ರಹಿಸುತ್ತಾ ಬಂದಿದೆ.
ಗಡಿ ತಂಟೆ ವಿಚಾರವಾಗಿ ಭಾರತ ಮತ್ತು ಚೀನದ ಸೇನಾಧಿಕಾರಿಗಳು ಇದುವರೆಗೆ 30 ಬಾರಿ ಮಾತುಕತೆ ನಡೆಸಿವೆ. ಆದರೆ ದೆಮ್ಚಾಕ್ ಮತ್ತು ದೆಸ್ಪಾಂಗ್ನಿಂದ ಸೇನೆ ವಾಪಸಾತಿ ಸಂಬಂಧ ಯಾವುದೇ ಪ್ರಗತಿ ಆಗಿರಲಿಲ್ಲ. ಸೆ.12ರಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನದ ವಿದೇಶಾಂಗ ಸಚಿವಾಲಯದ ವಾಂಗ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದು, ಈ ನಿಟ್ಟಿನಲ್ಲಿ ಉಂಟಾಗಿರುವ ಪ್ರಗತಿ ಯನ್ನೂ ಪರಿಶೀಲಿಸಿದ್ದಾರೆ. 2020ರ ಜೂ.15 ರಂದು ಗಾಲ್ವನ್ನಲ್ಲಿ 2 ದೇಶಗಳ ನಡುವೆ ಸಂಘರ್ಷ ಉಂಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.