Border-Gavaskar Trophy: ಸ್ಪಿನ್‌ಗೂ ನೆರವು ನೀಡಲಿದೆ ಅಡಿಲೇಡ್ ಪಿಚ್: ಕ್ಯುರೇಟರ್
ಭಾರತೀಯರ ನೆಟ್ ಅಭ್ಯಾಸದ ವೇಳೆ ಪ್ರೇಕ್ಷಕರಿಗೆ ನಿರ್ಬಂಧ
Team Udayavani, Dec 5, 2024, 2:03 AM IST
ಅಡಿಲೇಡ್: ಸಂಪ್ರದಾಯದಂತೆ “ಅಡಿಲೇಡ್ ಓವಲ್’ ಟ್ರ್ಯಾಕ್ ಸ್ಪಿನ್ ಎಸೆತಗಳಿಗೂ ನೆರವು ನೀಡಲಿದೆ ಎಂಬುದಾಗಿ ಕ್ಯುರೇಟರ್ ಡೇಮಿಯನ್ ಹಾಗ್ ಹೇಳಿದ್ದಾರೆ.
“ಸಾಂದ್ರತೆ ಮತ್ತು ತೇವಾಂಶ ನಾವು ಬಯಸಿದ ರೀತಿಯಲ್ಲೇ ಇದೆ. ಆರು ಮಿ.ಮೀ.ನಷ್ಟು ಹುಲ್ಲಿನ ಹೊದಿಕೆ ಇದೆ. ಪಂದ್ಯ ರಾತ್ರಿಯೂ ನಡೆಯುವುದರಿಂದ ಮಂಜಿನ ಪ್ರಭಾವ ಸಹಜ. ಪಿಚ್ ಲಘು ತಿರುವು, ಬೌನ್ಸ್ ಕೂಡ ಪಡೆಯಲಿದೆ. ಶುಕ್ರವಾರ ಬಲವಾದ ಗಾಳಿ ಬೀಸುವ ಸಾಧ್ಯತೆ ಇದ್ದು, ಶನಿವಾರದಿಂದ ಟೆಸ್ಟ್‌ಗೆ ಅನುಕೂಲಕರವಾದ ಸಹಜ ವಾತಾವರಣವನ್ನು ನಿರೀಕ್ಷಿಸಬಹುದು’ ಎಂದು ಹಾಗ್ ಹೇಳಿದರು. ಭಾರತ-ಆಸ್ಟ್ರೇಲಿಯ ನಡುವಿನ ಅಡಿಲೇಡ್ ಟೆಸ್ಟ್ ಶುಕ್ರವಾರ ಆರಂಭವಾಗಲಿದೆ.
ಭಾರತೀಯರ ಅಭ್ಯಾಸದ ವೇಳೆ ಪ್ರೇಕ್ಷಕರಿಗೆ ನಿರ್ಬಂಧ
ಈ ಬಾರಿಯ ಬೋರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತೀಯರ ನೆಟ್ ಅಭ್ಯಾಸದ ವೇಳೆ ಇನ್ನು ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ. ಅಡಿಲೇಡ್ ಟೆಸ್ಟ್‌ಗಾಗಿ ನಡೆಯುತ್ತಿರುವ ಭಾರತೀಯರ ಅಭ್ಯಾಸದ ವೇಳೆ ಮೂರು ಸಾವಿರದಷ್ಟು ಪ್ರೇಕ್ಷಕರು ಮೈದಾನಕ್ಕೆ ಆಗಮಿಸಿದ್ದರು. ಆಸೀಸ್ ಅಭ್ಯಾಸದ ವೇಳೆ ಬರೀ 70 ವೀಕ್ಷಕರಿದ್ದರು.
ಕೆಲವರು ವೀಕ್ಷಕರು ಭಾರತೀಯ ಆಟಗಾರರ ಫಿಟ್‌ನೆಸ್ ಬಗ್ಗೆ ಅಣಕಿಸಿದರೆ, ಕೆಲವರು ಫೇಸ್‌ಬುಕ್ ಲೈವ್ ಮಾಡಿದರು. ಇನ್ನೊಬ್ಬರು ಗುಜರಾತಿಯಲ್ಲಿ “ಹೈ’ ಎನ್ನಲು ಆಟಗಾರರೊಬ್ಬರಿಗೆ ಪದೇಪದೆ ಒತ್ತಾಯಿಸಿದರು. ಆಟಗಾರರ ಅಭ್ಯಾಸಕ್ಕೆ ಇದು ತೊಂದರೆ ನೀಡಿದ್ದರಿಂದ ಬಿಸಿಸಿಐ ಈ ಕ್ರಮಕ್ಕೆ ಮುಂದಾಗಿದೆ. ಅಡಿಲೇಡ್ ಅಭ್ಯಾಸವನ್ನು ಅತೀ ಹತ್ತಿರದಿಂದ ವೀಕ್ಷಿಸಬಹುದಾದ ಕಾರಣ ಆಟಗಾರರಿಗೆ ಸಹಜವಾಗಿಯೇ ಕಿರಿಕಿರಿ ಆಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asia Cup Hockey: ಅರೈಜೀತ್ ಹ್ಯಾಟ್ರಿಕ್; ಪಾಕಿಸ್ಥಾನ ಸೋಲಿಸಿದ ಭಾರತಕ್ಕೆ ಕಿರೀಟ
Asia Cup Cricket: ಅಂಡರ್-19 ಏಷ್ಯಾ ಕಪ್ ಕ್ರಿಕೆಟ್: ಸೆಮಿಫೈನಲ್ ಪ್ರವೇಶಿಸಿದ ಭಾರತ
India-Australia Test: ನನ್ನ ಕ್ರಮಾಂಕ ನನಗೆ ಸೂಚಿಸಲಾಗಿದೆ: ಕೆ.ಎಲ್.ರಾಹುಲ್
One Day Series: ಭಾರತದ ವನಿತೆಯರಿಗೆ ಆಸೀಸ್ ನೆಲದ ಸವಾಲು
Manipal: ಮಾಹೆ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ಟೆನಿಸ್ ಪಂದ್ಯಾವಳಿ ಆಯೋಜನೆ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Brian Thompson: ಹೂಡಿಕೆದಾರರ ಸಭೆಗೂ ಮುನ್ನವೇ ಯುನೈಟೆಡ್ ಹೆಲ್ತ್‌ಕೇರ್ ಸಿಇಒ ಹತ್ಯೆ
Stampede: ಪುಷ್ಪ 2 ಸ್ಕ್ರೀನಿಂಗ್ ವೇಳೆ ಕಾಲ್ತುಳಿತ ತಾಯಿ ಮೃತ್ಯು, ಮಗ ಗಂಭೀರ
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
Toll: ವರ್ಷದಲ್ಲೇ 438 ಕೋ.ರೂ. ಟೋಲ್ ಶುಲ್ಕ ಸಂಗ್ರಹ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.