![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Apr 27, 2024, 2:46 PM IST
ಶಾರ್ಲೆಟ್: ಅಮೆರಿಕದ ನ್ಯಾಶನಲ್ ಕಾಲೇಜಿಯಟ್ ಬಾಕ್ಸಿಂಗ್ ಟೂರ್ನ್ಮೆಂಟ್‌ಕಳೆದ ವರ್ಷದ ಚಾಂಪಿಯನ್, 20 ವರ್ಷದ ಅವನೀಶ್ ಬೆಂಕಿ ಇದೇ ಎಪ್ರಿಲ್ 11- 13ರ ವರೆಗೆ ಶಾರ್ಲೆಟ್ ನಾರ್ಥ್ ಕ್ಯಾರೋಲಿನದಲ್ಲಿ ನಡೆದ ಅಮೆರಿಕದ ನ್ಯಾಶನಲ್ ಕಾಲೇಜಿಯಟ್ ಬಾಕ್ಸಿಂಗ್ ಟೂರ್ನ್ಮೆಂಟ್‌ನಲ್ಲಿ 119 ಪೌಂಡ್ ವಿಭಾಗದಲ್ಲಿ ಸತತವಾಗಿ 2ನೇ ಬಾರಿ ಈ ವರ್ಷವೂ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಅವನೀಶ್ ಬೆಂಕಿ ಫೈನಲ್ ಪಂದ್ಯದಲ್ಲಿ ಯುನಿವರ್ಸಿಟಿ ಆಫ್ ಕನ್ನೆಕ್ಟಿಕಟ್‌ನ ಬಾಕ್ಸರ್ ಹೆಡನ್ ಈಸ್ಟಮನ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದು ವಿಜಯೋತ್ಸವ ಆಚರಿಸಿದರು. ಇದಕ್ಕೂ ಮೊದಲು ಅವನೀಶ್ ಸೆಮಿಫೈನಲ್‌ನಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದ ಸಂತಾಕ್ಲೇರ ಯುನಿವರ್ಸಿಟಿಯ ಇತನ್ ಚುಂಗ್ ಅವರನ್ನು ಸೋಲಿಸಿದ್ದರು.
ಅವನೀಶ್ ಬೆಂಕಿ ಕರ್ನಾಟಕ ಮೂಲದ ಅಪ್ಪಟ ಕನ್ನಡ ಪ್ರೇಮಿ ಬೆಂಕಿ ಬಸಣ್ಣ ಮತ್ತು ಉಮಾ ಅವರ ಪುತ್ರನಾಗಿದ್ದಾರೆ.
20 ವರ್ಷದ ಅವನೀಶ್ ಬೆಂಕಿ ವಿಶ್ವವಿಖ್ಯಾತ ಪ್ರತಿಷ್ಠಿತ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ಅಕಾಡೆಮಿ ವೆಸ್ಟ್ ಪಾಯಿಂಟ್ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ.
ಅವನೀಶ್ ತನ್ನ ಕಾಲೇಜು ಜೀವನದ ಎರಡು ವರ್ಷಗಳಲ್ಲಿ ತನ್ನ ತೂಕದ ಕೆಟಗರಿಯಲ್ಲಿ ಅಮೆರಿಕದ ನ್ಯಾಷನಲ್ ಕಾಲೇಜಿಯೇಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಸತತವಾಗಿ ಎರಡನೇ ಬಾರಿಯೂ ಚಿನ್ನದ ಪದಕ ಗೆಲ್ಲುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.
ಈ ಹಿಂದೆ 2013ರಲ್ಲಿ 9 ವರ್ಷದ ಪ್ರಾಯದಲ್ಲಿ ತೈ ಕ್ವಾನ್ ಡೊನಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದ ಅವನೀಶ್ ಬೆಂಕಿ ಫ್ಲೋರಿಡಾ ರಾಜ್ಯದ ಪೋರ್ಟ್ ಲಾರ್ಡ್‌ಡೇಲ್‌ನಲ್ಲಿ ನಡೆದ ಅಮೆರಿಕದ ನ್ಯಾಶನಲ್ ಲೆವೆಲ್ ತೈ ಕ್ವಾನ್ ಡೊನಲ್ಲಿ ಚಿನ್ನದ ಪದಕ ಪಡೆದಿದ್ದನು. ಹಾಗೆಯೇ ಟೆನ್ನಿಸ್‌ನಲ್ಲಿ ಸಹಿತ ಒಳ್ಳೆಯ ಆಟಗಾರನಾಗಿರುವ ಅವನೇಶ್ ನ್ಯೂಯಾರ್ಕ್ ರಾಜ್ಯಮಟ್ಟದ ಟೆನಿಸ್ ಟೂರ್ನ್ಮೆಂಟ್‌ನಲ್ಲಿ ತನ್ನ ನಿಷ್ಕಯುನ ಹೈಸ್ಕೂಲ್‌ನ ಕ್ಯಾಪ್ಟನ್ ಆಗಿ ಪ್ರತಿನಿಧಿಸಿದ್ದನು.
ಅವನೀಶ್ ಒಳ್ಳೆಯ ಓಟಗಾರ ( sಟrಜಿnಠಿಛಿr) ಆಗಿದ್ದು, 400 ಮೀಟರ್, 800 ಮೀಟರ್, ಕ್ರಾಸ್ ಕಂಟ್ರಿ ರನ್ನಿಂಗ್, ರಿಲೇ ರೇಸ್, ಹಾಫ್ ಮ್ಯಾರಥಾನ್, ಮುಂತಾದ ಸ್ಪರ್ಧೆಗಳಲ್ಲಿ ತನ್ನ ಹೈಸ್ಕೂಲ್ ಪರವಾಗಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾನೆ.
ಅವನೀಶ್ ಬೆಂಕಿ ನಾವು ವಿಶ್ವ ಕನ್ನಡಿಗರು (ನಾವಿಕ) ಸಂಸ್ಥೆಯ ಯೂಥ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಕೋವಿಡ್ ಮಹಾಮಾರಿಯ ಸಮಯದಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ದೇಣಿಗೆ ನೀಡುವ ಜ್ಞಾನ ದೀವಿಗೆ ಕಾರ್ಯಕ್ರಮದಲ್ಲಿ ತುಂಬಾ ಸಕ್ರಿಯವಾಗಿ ಭಾಗವಹಿಸಿದ್ದಾನೆ. ಹಾಗೆಯೇ ಆಲ್ಬನಿ ಕನ್ನಡ ಸಂಘದ ಹಲವಾರು ಕಾರ್ಯಕ್ರಮಗಳಲ್ಲಿ ಮೊದಲಿನಿಂದಲೂ ಭಾಗವಹಿಸಿದ್ದಾನೆ.
You seem to have an Ad Blocker on.
To continue reading, please turn it off or whitelist Udayavani.