Bollywood: ಹಾಡುಗಳಿಲ್ಲದ ಮೊದಲ ಚಿತ್ರ ಕಾನೂನ್, ಹಾಡಿಲ್ಲದ ಕನ್ನಡದ ಪ್ರಥಮ ಚಿತ್ರ ಯಾವುದು?
Team Udayavani, Apr 22, 2023, 3:58 PM IST
1950-60ರ ದಶಕದಲ್ಲಿ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಸಿನಿಮಾರಂಗದಲ್ಲಿನ ಚಲನಚಿತ್ರಗಳಿಗೆ ಸಂಗೀತವೇ ಜೀವಾಳವಾಗಿತ್ತು. ಶಂಕರ್-ಜೈಕಿಶನ್, ಮದನ್ ಮೋಹನ್, ಓಪಿ ನಯ್ಯರ್ ಅವರಂತಹ ಸಂಗೀತ ಸಂಯೋಜಕರ ಅದ್ಭುತ ಹಾಡುಗಳು ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಅದಕ್ಕೆ ತಕ್ಕಂತೆ ಸಿನಿಮಾ ನಿರ್ದೇಶಕರು ಕೂಡಾ ತಮ್ಮ ಸಿನಿಮಾ ಕಥೆಗಳನ್ನು ರಚಿಸುತ್ತಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ ಚಿತ್ರ ನಿರ್ಮಾಪಕ ಬಿ.ಆರ್.ಚೋಪ್ರಾ ಹಾಡುಗಳಿಲ್ಲದೇ ಸಿನಿಮಾ ನಿರ್ಮಾಣ ಮಾಡುವ ಸಾಹಸಕ್ಕೆ ಕೈಹಾಕಿದ್ದರು.
ಇದನ್ನೂ ಓದಿ:Karnataka Election; ಡಿಕೆ ಶಿವಕುಮಾರ್ ಅವರ ಹೆಲಿಕಾಪ್ಟರ್ ತಪಾಸಣೆ; ಆಕ್ರೋಶ
1960ರ ದಶಕದಲ್ಲಿ ತೆರೆಕಂಡಿದ್ದ “ಕಾನೂನ್” ಹಾಡುಗಳಿಲ್ಲದ ಮೊತ್ತ ಮೊದಲ ಹಿಂದಿ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಅಶೋಕ್ ಕುಮಾರ್, ರಾಜೇಂದ್ರ ಕುಮಾರ್, ನಂದಾ ಅಭಿನಯಿಸಿದ್ದರು. ಬಾಲಿವುಡ್ ನ ಕಾನೂನ್ ಸಿನಿಮಾ ಮರಣದಂಡನೆ ಕಥಾಹಂದರವನ್ನೊಳಗೊಂಡಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬರನ್ನು ವಿಚಾರಣೆಗೊಳಪಡಿಸುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ.
ಕೋರ್ಟ್ ನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಕಾಳಿದಾಸ್ (ಜೀವನ್) ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ತಾನೇ ಈ ತಪ್ಪಿತಸ್ಥ ಎಂದು ತಪ್ಪೊಪ್ಪಿಕೊಳ್ಳುತ್ತಾನೆ. ಆದರೆ ತಾನು ಅದೇ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಈಗಾಗಲೇ ಹತ್ತು ವರ್ಷ ಜೈಲುಶಿಕ್ಷೆ ಅನುಭವಿಸಿದ್ದೇನೆ. ಈ ಕಾನೂನಿನಿಂದ ನನಗೇನು ಸಿಕ್ಕಂತಾಯ್ತು ಎಂದು ಕಾಳಿದಾಸ್ ಜಡ್ಜ್ ಬದ್ರಿ ಪ್ರಸಾದ್ (ಅಶೋಕ್ ಕುಮಾರ್ ) ಅವರನ್ನು ಪ್ರಶ್ನಿಸಿ ಭಾವನಾತ್ಮಕವಾಗಿ ತನ್ನ ನೋವನ್ನು ಹೊರಹಾಕಿ, ಕಟಕಟೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾನೆ.
ತುಂಬಾ ಕುತೂಹಲಕಾರಿ ಕ್ಲೈಮ್ಯಾಕ್ಸ್ ಹೊಂದಿರುವ ಕಾನೂನ್ ಸಿನಿಮಾದಲ್ಲಿ ಯಾವುದೇ ಹಾಡುಗಳಿಲ್ಲ. ಆದರೂ ಈ ಸಿನಿಮಾ ಭರ್ಜರಿ ಯಶಸ್ವಿ ಕಂಡಿತ್ತು. ಜೊತೆಗೆ ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿತ್ತು. ಇಂದಿಗೂ ಕೂಡಾ ನೀವು ಆ ಸಿನಿಮಾವನ್ನು ವೀಕ್ಷಿಸಿದರೆ ಆ ಕಥೆ ಪ್ರಸ್ತುತ ಎನಿಸುತ್ತದೆ. ಗ್ರಹಿಕೆ ಮತ್ತು ಸತ್ಯ ಇದರಲ್ಲಿ ಯಾವುದನ್ನು ಪರಿಗಣಿಸಬೇಕು ಎಂಬ ಒಳನೋಟವನ್ನು ಈ ಚಿತ್ರ ತೆರೆದಿಡುವಲ್ಲಿ ಯಶಸ್ವಿಯಾಗಿದೆ.
ಹೀಗೆ ಬಿಆರ್ ಚೋಪ್ರಾ ಅವರು ಬಾಲಿವುಡ್ ನಲ್ಲಿ ಮೊದಲ ಬಾರಿಗೆ ಹಾಡು ರಹಿತ ಸಿನಿಮಾ ಬಿಡುಗಡೆ ಮಾಡುವ ಮೂಲಕ ಯಶಸ್ಸು ಕಂಡಿದ್ದರು. ಬಿ.ಆರ್.ಚೋಪ್ರಾ ಅವರಿಗಿಂತ ಮೊದಲೇ 1954ರಲ್ಲಿ ತಮಿಳುಚಿತ್ರರಂಗದ ಎಸ್.ಬಾಲಚಂದರ್ ಅವರ “ಅಂಧಾ ನಾಳ್”ಹಾಡುಗಳಿಲ್ಲದ ಪ್ರಥಮ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1973ರಲ್ಲಿ ತೆರೆಕಂಡಿದ್ದ ಸ್ಯಾಂಡಲ್ ವುಡ್ ನ ಎನ್.ಲಕ್ಷ್ಮೀನಾರಾಯಣ್ ಅವರ ನಿರ್ದೇಶನದ ಅಬಚೂರಿನ ಪೋಸ್ಟ್ ಆಫೀಸ್ ಹಾಡುಗಳಿಲ್ಲದ ಸಿನಿಮಾವಾಗಿದೆ. 1984ರಲ್ಲಿ ತೆರೆಕಂಡಿದ್ದ ಶಂಕರ್ ನಾಗ್ ನಿರ್ದೇಶನದ Accident, 1989ರಲ್ಲಿ ಬಿಡುಗಡೆಯಾದ ಸುನೀಲ್ ಕುಮಾರ್ ದೇಸಾಯಿ ಅವರ ತರ್ಕ ಸಿನಿಮಾಗಳಲ್ಲಿ ಹಾಡುಗಳಿಲ್ಲವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೊಂಗಲ್ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್ ಆಗಲಿರುವ ಚಿತ್ರಗಳ ಪಟ್ಟಿ
Jagdeep Singh: ಈ ಸಿಇಒ ಪ್ರತಿದಿನ ಪಡೆಯುವ ಸಂಬಳ 48 ಕೋಟಿ ರೂ!…ಯಾರೀತ ಜಗದೀಪ್ ಸಿಂಗ್?
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.