ಬ್ರಹ್ಮಾವರ ಹೊಳೆ ದುರಂತ: ಇನ್ನೊಂದು ಶವ ಪತ್ತೆ, ಹೂಡೆಯಲ್ಲಿ ನಾಲ್ವರ ಅಂತ್ಯಕ್ರಿಯೆ
Team Udayavani, Apr 25, 2023, 7:00 AM IST
ಮಲ್ಪೆ/ಬ್ರಹ್ಮಾವರ: ಬ್ರಹ್ಮಾವರ ಹಾರಾಡಿ ಗ್ರಾಮದ ಕಿಣಿಯಾರಕುದ್ರು ಎಂಬಲ್ಲಿ ಎ. 23ರಂದು ಸಂಜೆ ಹೊಳೆಯಿಂದ ಮಳಿ (ಕಪ್ಪೆಚಿಪ್ಪು) ಹೆಕ್ಕಲು ಹೋಗಿ ಸಂಭವಿಸಿದ ದುರಂತದಲ್ಲಿ ನೀರು ಪಾಲಾಗಿದ್ದ ಮತ್ತೋರ್ವನ ಮೃತದೇಹ ಸೋಮವಾರ ಮುಂಜಾನೆ 5 ಗಂಟೆಗೆ ಪತ್ತೆಯಾಗಿದೆ.
ಮುಹಮ್ಮದ್ ಸುಫಾನ್ (20) ಹಾಗೂ ಅವರ ಸಂಬಂಧಿ ಹೂಡೆಯ ಮುಹಮ್ಮದ್ ಫಾರೂಕ್ ಅವರ ಪುತ್ರ ಮುಹಮ್ಮದ್ ಫೈಜಾನ್(18), ಹೂಡೆಯ ಗೌಸ್‌ಅವರ ಪುತ್ರ ಮುಹಮ್ಮದ್ ಇಬಾದ್(25) ಮೃತದೇಹಗಳು ರವಿವಾರ ರಾತ್ರಿ ಪತ್ತೆಯಾಗಿದ್ದವು. ಶೃಂಗೇರಿಯ ಅಡ್ಡಗದ್ದೆಯ ಯಾಸೀನ್ ಅವರ ಪುತ್ರ ಮುಹಮ್ಮದ್ ಫರ್ಹಾನ್ (16) ದೇಹ ಬೆಳಗ್ಗೆ ಪತ್ತೆಯಾಗಿದೆ.
ಮಳಿ ಹೆಕ್ಕುತ್ತಿದ್ದಾಗ ಮುಳುಗಿದರು
ಸಂಬಂಧಿಕರಾದ ಇವರೆಲ್ಲ ತೀರ್ಥಹಳ್ಳಿಯ ಸಾಹಿಲ್ ಖಾದರ್, ಕೊಪ್ಪದ ಮಾಹೀಮ್, ಅಡ್ಡಗದ್ದೆಯ ಶಾಹಿಲ್ ಅವರಂದಿಗೆ ದೋಣಿ ವಿಹಾರಕ್ಕೆಂದು ಕುಕ್ಕುಡೆ ಕುದ್ರುವಿಗೆ ಹೂಡೆಯಿಂದ ತೆರಳಿದ್ದರು. ಅಲ್ಲಿ ಹೊಳೆಯಿಂದ ಮಳಿ (ಕಪ್ಪೆ ಚಿಪ್ಪು) ಹೆಕ್ಕಲು ಕಿಣಿಯಾರ ಕುದ್ರು ಎಂಬಲ್ಲಿಗೆ ಹೋಗಿದ್ದು, ಕುದ್ರು ದಡದಲ್ಲಿ ದೋಣಿಯನ್ನು ನಿಲ್ಲಿಸಿದ್ದರು. ದೋಣಿಯನ್ನು ಕಟ್ಟಿ ಎಲ್ಲರೂ ದೋಣಿಯಿಂದ ಇಳಿದು ಮಳಿಯನ್ನು ಹೆಕ್ಕುತ್ತ ಹೊಳೆಯ ನೀರಿನಲ್ಲಿ ಮುಂದೆ ಮುಂದೆ ಹೋದರೆಂದು ತಿಳಿದುಬಂದಿದೆ.
ಈ ವೇಳೆ ಫಾರನ್ ಜತೆಯಲ್ಲಿ ಸುಫಾನ್, ಇಬಾದ್, ಫೈಜಾನ್ ಆಳದಲ್ಲಿ ಮುಳುಗಿದರು. ಉಳಿದ ಮೂವರು ಮುಳುಗಿದವರನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ವಿಷಯ ತಿಳಿದ ಸ್ಥಳೀಯರು ಹುಡುಕಾಟ ನಡೆಸಿದಾಗ ರಾತ್ರಿ ಮೃತದೇಹಗಳು ಪತ್ತೆಯಾದವು.
ಆದರೆ ಫಾರನ್ ನೀರಿನಲ್ಲಿ ಕಾಣೆಯಾಗಿದ್ದನು. ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಹುಡುಕಾಟ ನಡೆಸಿದಾಗ ಅದೇ ಸ್ಥಳದಲ್ಲಿ ಫರ್ಹಾನ್ ಮೃತದೇಹ ಪತ್ತೆಯಾಗಿದೆ.
ರಮ್ಜಾನ್ ಹಬ್ಬಕ್ಕಾಗಿ ಬಂದಿದ್ದರು
ರಮ್ಜಾನ್ ಹಬ್ಬದ ಹಿನ್ನೆಲೆಯಲ್ಲಿ ಇವರೆಲ್ಲ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡಿದ್ದರು.
ಹೂಡೆ ಯಲ್ಲಿ ಟೈಲರ್ ವೃತ್ತಿ ನಡೆಸುತ್ತಿರುವ ಫಾರೂಕ್ ಅವರ ಪುತ್ರ ಫೈಜಾನ್ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಮೊನ್ನೆಯಷ್ಟೇ ಬಂದ ಫಲಿತಾಂಶದಲ್ಲಿ ಉತ್ತೀರ್ಣನಾಗಿದ್ದನು. ವ್ಯವಹಾರ ನಡೆಸುತ್ತಿದ್ದ ಗೌಸ್ ಅವರ ಪುತ್ರ ಇಬಾದ್ ಸೇಲ್ಸ್‌ಮನ್ ಕೆಲಸ ಮಾಡುತ್ತಿದ್ದರೆ. ಶೃಂಗೇರಿಯ ಅಡ್ಡಗದ್ದೆಯ ಯಾಸೀನ್ ಅವರ ಪುತ್ರ ಸುಫಾನ್ ದ್ವಿತೀಯ ಪದವಿ ಕಲಿಯುತ್ತಿದ್ದರೆ, ಆತನ ತಮ್ಮ ಫರ್ಹಾನ್ ಎಸೆಸೆಲ್ಸಿ ವಿದ್ಯಾರ್ಥಿ. ಸಂಜೆ ಮೃತ ನಾಲ್ವರ ಅಂತ್ಯಕ್ರಿಯೆಯನ್ನು ಹೂಡೆಯ ಖದೀಮ್ ಮಸೀದಿಯಲ್ಲಿ ನೆರವೇರಿಸಲಾಯಿತು.
ಮರಳುಗಾರಿಕೆಯಿಂದ ಹೊಂಡ ನಿರ್ಮಾಣ
ದುರಂತ ಸಂಭವಿಸಿದ ಹೊಳೆಯಲ್ಲಿ ನಿರಂತರ ಮರಳು ಗಾರಿಕೆಯಿಂದ ಹೊಂಡ ನಿರ್ಮಾ ಣವಾಗಿದೆ. ಸಮತಟ್ಟಿಲ್ಲದ ನೀರಿನ ಪ್ರದೇಶದಿಂದ ಯುವಕರು ಇಳಿದ ಪರಿಣಾಮ ಅನಾಹುತ ನಡೆದಿದೆ. ಮಾತ್ರವಲ್ಲದೆ ರವಿವಾರ ಗಾಳಿಯ ವೇಗದಿಂದಾಗಿ ನೀರಿನ ಹರಿಯುವಿಕೆಯೂ ಜಾಸ್ತಿಯಾಗಿತ್ತೆನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.