ಸರಗಳ್ಳನಿಗೆ ಒದೆಕೊಟ್ಟು ಅಜ್ಜಿಯ ಜೀವ ಮತ್ತು ಚಿನ್ನದ ಸರ ಕಾಪಾಡಿದ ದಿಟ್ಟ ಬಾಲಕಿ!
Team Udayavani, Mar 9, 2023, 6:46 PM IST
ಮುಂಬೈ: ತನ್ನ ಅಜ್ಜಿ ಮೇಲೆ ಆಕ್ರಮಣ ನಡೆಸಿ, ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ಸ್ಕೂಟಿ ಸವಾರನನ್ನು ಎದುರಿಸಿ, ಅಜ್ಜಿಯ ಸರವನ್ನು ರಕ್ಷಿಸಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ:ಕಲಿತ ಸರಕಾರಿ ಶಾಲೆಗೆ 6 ಲಕ್ಷ ರೂ.ಗಳ ಕಲಿಕಾ ಸಾಮಾಗ್ರಿ,ಬೆಂಚ್ ವಿತರಿಸಿದ ಹಳೆ ವಿದ್ಯಾರ್ಥಿ
ಇತ್ತೀಚೆಗೆ ರಾತ್ರಿ 8.30ರ ಹೊತ್ತಿಗೆಗೆ ಲತಾ ಘಾಗ್ ಎಂಬ 60 ವರ್ಷದ ಅಜ್ಜಿಯೊಬ್ಬರು ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ಪುಣೆಯ ಶಿವಾಜಿನಗರದ ಮಾಡೆಲ್ ಕಾಲೋನಿಯಲ್ಲಿರುವ ಮನೆಗೆ ಹೋಗಲು ಫುಟ್ ಬಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಸ್ಕೂಟಿಯಲ್ಲಿ ಬಂದ ಕಳ್ಳ ವಿಳಾಸ ಕೇಳುವ ನೆಪದಲ್ಲಿ ಅಜ್ಜಿಯ ಕೊರಳಲ್ಲಿದ್ದ ಚಿನ್ನದ ಸರಕ್ಕೆ ಕೈಹಾಕಿದ್ದ, ಅಜ್ಜಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ದಿಢೀರ್ ಆಗಿ ಮೊಮ್ಮಗಳು ಕೈಯಲ್ಲಿದ್ದ ವಸ್ತುವಿನಿಂದ ಕಳ್ಳನ ಮುಖಕ್ಕೆ ಹೊಡೆದು ಬಿಟ್ಟಿದ್ದಳು. ನಂತರ ಅಜ್ಜಿ ಕೂಡಾ ಬಲವಾಗಿ ಕೈಯಲ್ಲಿದ್ದ ಚೀಲದಿಂದ ಹೊಡೆದಾಗ ಕಳ್ಳ ಸ್ಥಳದಿಂದ ಪರಾರಿಯಾಗಿದ್ದ.
10 ವರ್ಷದ ಮೊಮ್ಮಗಳು ರುತ್ವಿ ಘಾಗ್ ಅಜ್ಜಿಯ ಜೀವ ಮತ್ತು ಸರವನ್ನು ಕಾಪಾಡಿದ್ದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಣ್ಣ-ಪುಟ್ಟ ಗಾಯಗೊಂಡಿದ್ದ ಅಜ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೊಮ್ಮಕ್ಕಳೊಂದಿಗೆ ಮನೆ ಸೇರಿಕೊಂಡಿದ್ದಾರೆಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.