ಸಾವೊ ಪೌಲೊ : ಕೋವಿಡ್ ವಿರುದ್ಧದ ಹೋರಾಟಕ್ಕೆ ಅಧ್ಯಕ್ಷನೇ ಅಡ್ಡಿ
Team Udayavani, May 20, 2020, 12:00 PM IST
ಸಾವೊ ಪೌಲೊ : ಬ್ರೆಜಿಲ್ ನ ಅತಿ ದೊಡ್ಡ ನಗರವಾಗಿರುವ ಸಾವೊ ಪೌಲೊದಲ್ಲಿ ಕೋವಿಡ್‌ನಿಂದಾಗಿ ಸಾರ್ವಜನಿಕ ಆರೋಗ್ಯ ಸೇವಾ ವಲಯ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ ಹಾಗೂ ಕೋವಿಡ್ ಮರಣ ಪ್ರಮಾಣ ಏರುಗತಿಯಲ್ಲಿದೆ. ಆದರೆ ಇದರ ಹೊರತಾಗಿಯೂ ದೇಶದ ಅಧ್ಯಕ್ಷ ಜೈರ್ ಬೊಲ್ಸನಾರೊ ಉಡಾಫೆಯ ಪರಮಾವಧಿಯನ್ನು ಪ್ರದರ್ಶಿಸುತ್ತಿದ್ದಾರೆ.
ಲಾಕ್‌ಡೌನ್ ತೆರವುಗೊಳಿಸಬೇಕೆಂದು ಆಗ್ರಹಿಸಿ ಅಲ್ಲಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೊಲ್ಸನಾರೊ ಬೆಂಬಲಿಸುತ್ತಿರುವುದು ಮಾತ್ರವಲ್ಲದೆ ಕೆಲವು ಪ್ರತಿಭಟನೆಗಳಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಸ್ವತಃ ಭಾಗವಹಿಸುತ್ತಿದ್ದಾರೆ.
ರಾಜ್ಯಗಳ ಮೇಯರ್‌ಗಳು ಕೋವಿಡ್ ಪ್ರಸರಣವನ್ನು ನಿಯಂತ್ರಿಸಲು ಶಕ್ತಿಮೀರಿ ಹೆಣಗಾಡುತ್ತಿರುವಾಗಲೇ ದೇಶದ ಅಧ್ಯಕ್ಷ ತೀರಾ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ. ಸಾವೊ ಪೌಲೊದಲ್ಲಿ ಕೋವಿಡ್ ಹಾವಳಿ ಕೈಮೀರುತ್ತಿದೆ.
ಮೇಯರ್ ಬ್ರೂನೊ ಕೊವಸ್ ಲಾಕ್‌ಡೌನ್ ನಿಯಮಗಳನ್ನು ಪಾಲಿಸುವಂತೆ ಜನರನ್ನು ಆಗ್ರಹಿಸುತ್ತಿದ್ದಾರೆ. ಆದರೆ ಬೊಲ್ಸನಾರೊ ಪ್ರತಿಭಟನೆಗಳಲ್ಲಿ ಭಾಗವಹಿಸಿ ಪುಶ್‌ಅಪ್ ತೆಗೆಯುವಂಥ ಜನಪ್ರಿಯತೆಯ ಗಿಮಿಕ್‌ಗಳನ್ನು ಮಾಡುತ್ತಿದ್ದಾರೆ.
ಜನಪ್ರಿಯತೆಗಾಗಿ ಹಪಾಹಪಿಸುತ್ತಿರುವ ಬೊಲ್ಸನಾರೊ ಆರಂಭದಿಂದಲೇ ಕೋವಿಡ್ ಕುರಿತಾಗಿ ನಿರ್ಲಕ್ಷ್ಯದ ಧೋರಣೆ ತಾಳಿದ್ದರು. ಇದರಿಂದಾಗಿಯೇ ವೈರಸ್ ಬ್ರಜಿಲ್‌ನಲ್ಲಿ ಅತ್ಯಧಿಕ ಹಾನಿಯುಂಟು ಮಾಡಿದೆ. ಪ್ರತಿಭಟನೆ ರ್ಯಾಲಿಗಳಲ್ಲಿ ಬೊಲ್ಸನಾರೊ ಭಾಗವಹಿಸುತ್ತಿರುವುದು ಈಗ ನಿತ್ಯದ ಸುದ್ದಿಯಾಗಿದೆ.
ಹಲವು ದೇಶಗಳಲ್ಲಿ ಕೋವಿಡ್ ತೀವ್ರತೆ ಇಳಿಮುಖವಾಗುತ್ತಿದ್ದರೆ ಬ್ರಜಿಲ್‌ನಲ್ಲಿನ್ನೂ ಏರುಗತಿಯಲ್ಲಿದೆ. 1.2 ಕೋಟಿ ಜನಸಂಖ್ಯೆಯಿರುವ ಸಾವೊ ಪೌಲೊದಲ್ಲಿ ವೈರಸ್ ಉಂಟು ಮಾಡಿರುವ ಹಾನಿ ಅಷ್ಟಿಷ್ಟಲ್ಲ. ಇಲ್ಲಿನ ಆಸ್ಪತ್ರೆಗಳು ರೋಗಿಗಳ ಒತ್ತಡ ತಾಳಲಾಗದೆ ಕಂಗಾಲಾಗಿವೆ. ಯಾವ ಆಸ್ಪತ್ರೆಯಲ್ಲೂ ಬೆಡ್ ಖಾಲಿ ಇಲ್ಲ. ಲೋಂಬರ್ಡಿ, ಮ್ಯಾಡ್ರಿಡ್ ಮತ್ತು ನ್ಯೂಯಾರ್ಕ್‌ನಂಥ ನಗರಗಳ ಸ್ಥಿತಿ ಸಾವೊ ಪೌಲೊದಲ್ಲೂ ಉಂಟಾಗಿದೆ. ನಗರದಲ್ಲಿ 38,605 ದೃಢೀಕೃತ ಸೋಂಕಿತರಿದ್ದಾರೆ ಮತ್ತು ದೇಶದಲ್ಲೇ ಅಧಿಕ ಮರಣಗಳು ಸಂಭವಿಸಿರುವುದು ಸಾವೊ ಪೌಲೊದಲ್ಲಿ.
ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದಾಗ ಶೇ. 60 ಮಂದಿ ಅದನ್ನು ಪಾಲಿಸಿದ ಪರಿಣಾಮವಾಗಿ ವೈರಸ್ ಹರಡುವ ವೇಗ ಕಡಿಮೆಯಿತ್ತು. ಆದರೆ ಕಳೆದ ಕೆಲ ವಾರಗಳಿಂದ ಲಾಕ್‌ಡೌನ್ ಪಾಲಿಸುವವರ ಪ್ರಮಾಣ ಶೇ.50ರಿಂದಲೂ ಕೆಳಗಿಳಿದಿದೆ ಹಾಗೂ ಇದೇ ವೇಳೆ ವೈರಸ್ ಹರಡುವ ವೇಗವೂ ಹೆಚ್ಚಾಗಿದೆ.
ಪರಿಸ್ಥಿತಿ ಹೀಗಿದ್ದರೂ ಬೊಲ್ಸನಾರೊ ಈಗಲೂ ಕೋವಿಡ್ ಅನ್ನು ಒಂದು ಸಾಮಾನ್ಯ ಜ್ವರ ಎಂದೇ ಕರೆಯುತ್ತಿದ್ದಾರೆ. ಬ್ರಜಿಲ್‌ನಲ್ಲಿ ಕೋವಿಡ್ ಒಂದಿಷ್ಟಾದರೂ ನಿಯಂತ್ರಣದಲ್ಲಿದ್ದರೆ ಅದು ಆಯಾಯ ರಾಜ್ಯಗಳ ಮೇಯರ್‌ಗಳ ಪ್ರಯತ್ನದಿಂದ ಮಾತ್ರ. ಇದಕ್ಕೆ ತದ್ವಿರುದ್ಧವಾಗಿ ಅಧ್ಯಕ್ಷ ಬೊಲ್ಸನಾರೊ ಲಾಕ್‌ಡೌನ್‌ಗಿಂತ ದೇಶದ ಆರ್ಥಿಕತೆ ಮುಖ್ಯ ಎಂದು ಪ್ರತಿಪಾದಿಸುತ್ತಿದ್ದಾರೆ.
ಲಾಕ್‌ಡೌನ್ ವಿರುದ್ಧ ನಡೆಯುತ್ತಿರುವ ರ್ಯಾಲಿಗಳಲ್ಲಿ ಭಾಗವಹಿಸುವ ಮೂಲಕ ಬೊಲ್ಸನಾರೊ ಲಕ್ಷಾಂತರ ಜನರ ಪ್ರಾಣಗಳನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಇಂಥ ರ್ಯಾಲಿಗಳಲ್ಲಿ ಅವರ ಬೆಂಬಲಿಗರು , ಸಮರ್ಥಕರು ಒಟ್ಟುಗೂಡುವುದು ಸಾಮಾನ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.