ಉಪ ಚುನಾವಣೆ ಬಳಿಕವೂ ಬಿಎಸ್‌ವೈ
ನಾನು ಕೋಟಾದಡಿ ಡಿಸಿಎಂ ಆಗಿಲ್ಲ : ಡಾ| ಅಶ್ವತ್ಥನಾರಾಯಣ
Team Udayavani, Nov 16, 2019, 6:45 AM IST
ಬೆಂಗಳೂರು: ಉಪ ಚುನಾವಣೆ ಬಳಿಕವೂ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ| ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಡಿಸೆಂಬರ್ ಅನಂತರ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರನ್ನು ಬಿಟ್ಟು ಬೇರೆ ನಾಯಕತ್ವದ ವಿಷಯ ಪಕ್ಷದ ಮಟ್ಟದಲ್ಲಿ ಪ್ರಸ್ತಾಪ ಇಲ್ಲವೇ ಇಲ್ಲ. ಅದೆಲ್ಲ ವದಂತಿಯಷ್ಟೇ ಎಂದರು.
“ಉದಯವಾಣಿ’ ಕಚೇರಿಯಲ್ಲಿ ನಡೆದ “ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಂ ಹುದ್ದೆ ನಿಭಾಯಿಸಲು ಯಡಿಯೂರಪ್ಪ ಅವರಿಗೆ ವಯಸ್ಸಿನ ವಿಷಯ ಅಡ್ಡಿಯಾಗುವುದಿಲ್ಲ. ಯಾಕೆಂದರೆ ವಯಸ್ಸು ಇರುವವರು ಮನೆಯಲ್ಲಿರುವಾಗ ಯಡಿಯೂರಪ್ಪ ರಾಜ್ಯ ತಿರುಗಿ ಪಕ್ಷ ಕಟ್ಟಿದ್ದಾರೆ. ಇತ್ತೀಚೆಗಿನ ಪ್ರವಾಹ ಪರಿಸ್ಥಿತಿ ನಿಭಾಯಿಸಿದ್ದು ಅವರ ಉತ್ಸಾಹ ಹಾಗೂ ಆಡಳಿತ ಕ್ಷಮತೆಗೆ ಸಾಕ್ಷಿ ಎಂದರು.
ಯಡಿಯೂರಪ್ಪ ಅವರು ಪಕ್ಷ ಕಟ್ಟಿದ್ದಾರೆ, ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದ್ದಾರೆ. ಎಲ್ಲರೂ ಅವರ ನಾಯಕತ್ವಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು.
ಉಪ ಚುನಾವಣೆ ಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಮುಂದಿನ ಮೂರೂಕಾಲು ವರ್ಷ ಬಿಜೆಪಿ ಸರಕಾರ ಸುಭದ್ರವಾಗಿ ಮುಂದುವರಿಯಲಿದೆ. ನಮ್ಮನ್ನು ಬೆಂಬಲಿಸುವು ದಾಗಿ ಎಲ್ಲ ಕಡೆಯಿಂದ ಮಾತು ಗಳೂ ಕೇಳಿ ಬರು ತ್ತಿವೆ ಯಲ್ಲವೇ? ನಾವು ರಾಜ್ಯದ ಅಭಿವೃದ್ಧಿ ವಿಚಾರ ದಲ್ಲಿ ಏನು ಅಂದು ಕೊಂಡಿದ್ದೇವೋ ಅದನ್ನು ಸಾಧಿಸುತ್ತೇವೆ. ನಿಶ್ಚಿತ ಗುರಿಯೊಂದಿಗೆ ಮುನ್ನಡೆದಿದ್ದೇವೆ ಎಂದರು.
ಶಿವಾಜಿನಗರ, ರಾಣಿಬೆನ್ನೂರು ಟಿಕೆಟ್ ವಿಚಾರ
ದಲ್ಲಿ ಗೊಂದಲ ಇಲ್ಲ. ಕೆಲವು ಕಾರಣಗಳಿಂದ ರೋಶನ್ ಬೇಗ್‌ಗೆ ಟಿಕೆಟ್ ನೀಡಲು ಸಾಧ್ಯವಾಗಲಿಲ್ಲ. ಶಂಕರ್ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು. ಹೀಗಾಗಿ ಅವರನ್ನು ಪರಿಷತ್ ಸದಸ್ಯರಾಗಿ ಮಾಡಿ ಸಚಿವರಾಗಿಸುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ ಎಂದರು. ಟಿಕೆಟ್ ಹಂಚಿಕೆಯಲ್ಲಿ ಸಮಸ್ಯೆ ಇಲ್ಲ. ಲಕ್ಷ್ಮಣ ಸವದಿ ವಿಚಾರದಲ್ಲೂ ಪಕ್ಷ ಸ್ಪಷ್ಟವಾಗಿದೆ. ಅವರನ್ನು ಮುಂದೆ ಖಂಡಿತವಾಗಿ ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರಕೃತಿ ನಿಯಮ
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ರಚನೆಯಾದದ್ದು ಒಂದು ರೀತಿಯಲ್ಲಿ ಪ್ರಕೃತಿ ನಿಯಮವೇನೋ ಎನಿಸುತ್ತದೆ. ಏಕೆಂದರೆ ರಾಜಕೀಯ ಘಟಾನುಘಟಿಗಳೇ ತಾವಿದ್ದ ಪಕ್ಷಗಳಲ್ಲಿ ಭವಿಷ್ಯ ಇಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ಬರಲು ಒಪ್ಪಿ ಸ್ಥಾನ ತ್ಯಾಗ ಮಾಡಿದರು. ಹೀಗಾಗಿ ಸರಕಾರ ರಚನೆಯಾಯಿತು. ನಮ್ಮನ್ನು ನಂಬಿ ತ್ಯಾಗ ಮಾಡಿದವರಿಗೆ ಬಿಜೆಪಿ ಗೌರವ ನೀಡಲಿದೆ ಎಂದು ತಿಳಿಸಿದರು. ಅನರ್ಹ ಶಾಸಕರ ಪೈಕಿ ಕೆಲವರ ವಿರುದ್ಧ ಬಿಜೆಪಿ ಹೋರಾಟ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿ, ಹಿಂದಿನದು ಈಗ ಮುಗಿದ ಅಧ್ಯಾಯ. ಎಲ್ಲರೂ ಹೊಸ ಅಧ್ಯಾಯ ಪ್ರಾರಂಭಿಸಿದ್ದಾರೆ. ನಮ್ಮ ಜತೆಗಿದ್ದಾರೆ ಎಂದರು.
ಡಿಸಿಎಂ ಹುದ್ದೆ ನನ್ನ ಶ್ರಮಕ್ಕೆ ಸಿಕ್ಕ ಪ್ರತಿಫಲ. ಚುನಾವಣೆಗೆ ಎರಡೂವರೆ ವರ್ಷಗಳ ಮುಂಚೆಯೇ ಸದ್ದಿಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷ ಕಾಲ ಕಾಲಕ್ಕೆ ವಹಿಸಿದ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸಿದ್ದೇನೆ. ಉಪ ಮುಖ್ಯಮಂತ್ರಿ ಹುದ್ದೆಯೂ ನನಗೆ ಪಕ್ಷ ವಹಿಸಿದ ಹೊಣೆಗಾರಿಕೆ.
– ಡಾ| ಸಿ.ಎನ್. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.