ಬಿಎಸ್‌ವೈರದ್ದು ಉಪ ಚುನಾವಣೆಗಳ ಕಾಲ!
ಆರು ದಶಕಗಳಲ್ಲಿ 109 ಕ್ಷೇತ್ರಗಳಿಗೆ ನಡೆದಿವೆ ಉಪ ಚುನಾವಣೆಗಳು
Team Udayavani, Nov 18, 2019, 6:00 AM IST
ಬೆಂಗಳೂರು: ರಾಜ್ಯದಲ್ಲಿ ಅತೀ ಹೆಚ್ಚು ಬಾರಿ ಉಪ ಚುನಾವಣೆ ನಡೆದದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಲದಲ್ಲಿ ಎಂದರೆ ನಂಬುತ್ತೀರಾ?
ಹೌದು. ಸಿಎಂ ಯಡಿಯೂರಪ್ಪ ಅವರ ಎರಡೂ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಂಡು ನೋಡಿ ದರೆ ಒಟ್ಟಾರೆಯಾಗಿ 30ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಉಪ ಚುನಾವಣೆಗಳು ನಡೆದಿವೆ. 1956ರಿಂದ ಇಲ್ಲಿಯವರೆಗೆ ಒಟ್ಟಾರೆಯಾಗಿ 109 ಕ್ಷೇತ್ರಗಳಲ್ಲಿ ಉಪ ಚುನಾವಣೆಗಳು ನಡೆ ದಿದ್ದು, ರಾಜ್ಯದ ಉಪ ಚುನಾವಣೆ ವಿಚಾರ ದಲ್ಲಿ ಸುದೀರ್ಘ ಇತಿಹಾಸ ಹೊಂದಿದೆ.
ಸದ್ಯ 17 ಶಾಸಕರ ಅನರ್ಹತೆ ಹಿನ್ನೆಲೆಯಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಯಾಗಿದ್ದು, ನಾಮಪತ್ರ ಸಲ್ಲಿಕೆ ಕಾರ್ಯವೂ ಮುಗಿ ಯುವ ಹಂತಕ್ಕೆ ಬಂದಿದೆ. ವಿಶೇಷವೆಂದರೆ ಈಗ ನಡೆಯುತ್ತಿರುವ ಉಪಚುನಾವಣೆಗಳೂ ಬಿಎಸ್‌ವೈ ಕಾಲದಲ್ಲೇ ಎಂಬುದು ವಿಶೇಷ.
2008ರಲ್ಲಿ 20 ಕ್ಷೇತ್ರಗಳ ಉಪ ಚುನಾವಣೆ
ಬಿಎಸ್‌ವೈ ಅವರು ಮೊದಲ ಬಾರಿ ಮುಖ್ಯ ಮಂತ್ರಿ ಯಾಗಿದ್ದಾಗ ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಿತು. ಅಂದರೆ 2008ರಿಂದ 2011ರ ವರೆಗೆ ಶಾಸಕರ ರಾಜೀನಾಮೆಯಿಂದಾಗಿ ಈ ಪ್ರಮಾಣದ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ.
ಉಪ ಚುನಾವಣೆ ಏಕೆ?
ಚುನಾವಣ ಆಯೋಗದ ಅಂಕಿ-ಅಂಶಗಳ ಪ್ರಕಾರ 1956ರಿಂದ ಇಲ್ಲಿಯವರೆಗೆ ಅಂದಾಜು 109 ಉಪ ಚುನಾವಣೆಗಳು ನಡೆದಿವೆ. ಶಾಸಕರ ಅಕಾಲಿಕ ಮರಣ, ಅನಾರೋಗ್ಯ, ವೈಯಕ್ತಿಕ ಕಾರಣ ಗಳಿಗೆ ರಾಜೀನಾಮೆ, ಲೋಕಸಭೆಯಲ್ಲಿ ಗೆದ್ದು, ಶಾಸಕರ ಸ್ಥಾನ ತ್ಯಜಿಸಿರುವುದು ಈವರೆಗಿನ ಉಪ ಚುನಾವಣೆಗಳಿಗೆ ಪ್ರಮುಖ ಕಾರಣ. ಆದರೆ 2008ರ ಬಳಿಕವಷ್ಟೇ ಆಪರೇಷನ್ ಕಮಲ, ಪಕ್ಷಾಂತರ, ಅನರ್ಹತೆ ಕಾರಣಗಳಿಗೆ ಉಪ ಚುನಾವಣೆ ಆರಂಭವಾಗಿದೆ.
ಆರಂಭದಿಂದ ಅಂದರೆ, 1956ರಿಂದ ಪ್ರತಿ ವಿಧಾನ ಸಭಾ ಅವಧಿಯಲ್ಲೂ ಕೆಲವೊಂದು ವರ್ಷಗಳಲ್ಲಿ ಉಪ ಚುನಾವಣೆಗಳು ನಡೆದಿವೆ. ಆದರೆ 1994ರಿಂದ 99ರ ಅವಧಿಯಲ್ಲಿ ಸುಮಾರು ಇಪ್ಪತ್ತು, 2008ರಿಂದ 2011ರ ಅವಧಿಯಲ್ಲಿ 20 ಹಾಗೂ ಈಗ 2019ರಲ್ಲಿ 15 ಉಪ ಚುನಾವಣೆಗಳು ಎದುರಾಗಿದ್ದು ಈವರೆಗಿನ ಅತೀ ಹೆಚ್ಚು ಉಪ ಚುನಾವಣೆಗಳು ಎಂದು ಹೇಳಲಾಗುತ್ತಿದೆ.
ಹೊಸ ಭಾಷ್ಯ ಬರೆದ “ಆಪರೇಷನ್ ಕಮಲ’
ಉಪ ಚುನಾವಣೆ ನಡೆಯುವುದು ಹೊಸದೂ ಅಲ್ಲ, ವಿಶೇಷವೂ ಅಲ್ಲ. ಆದರೆ 2008ರಲ್ಲಿ ಶುರುವಾದ ರಾಜೀನಾಮೆ ಪರ್ವಕ್ಕೆ ಆಪರೇಷನ್ ಕಮಲ ಎಂಬ ಹೆಸರು ದಕ್ಕಿತು. 2008ರ ವಿಧಾನಸಭಾ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗೆದ್ದ ಬಿಜೆಪಿ ಬಹುಮತಕ್ಕೆ ಬೇಕಾದ ಸಂಖ್ಯಾಬಲ ಹೊಂದಿಸಿ ಕೊಳ್ಳಲು ಕಾಂಗ್ರೆಸ್- ಜೆಡಿಎಸ್‌ನಿಂದ ಗೆದ್ದ ಶಾಸಕರಿಂದ ರಾಜೀನಾಮೆ ಕೊಡಿಸಿತು. ಈ ರಾಜೀನಾಮೆ ಪರ್ವ 2011ರ ವರೆಗೂ ನಡೆಯಿತು. ಈ ನಾಲ್ಕು ವರ್ಷಗಳಲ್ಲಿ ಸುಮಾರು 20 ಕ್ಷೇತ್ರಗಳಿಗೆ ಉಪ ಚುನಾವಣೆಗಳು ನಡೆದಿವೆ. ಬಹುತೇಕ ಎಲ್ಲ ಚುನಾವಣೆಗಳು “ಆಪರೇಷನ್ ಕಮಲ’ದಿಂದಾಗಿ ಎದುರಾಗಿದ್ದವು. ಈ ಮಧ್ಯೆ ಇದು ಶಾಸಕರ ಅನರ್ಹತೆ, ಕಾನೂನು ಹೋರಾಟಕ್ಕೂ ಕಾರಣವಾಯಿತು. ಈಗಲೂ ಅಂತಹದೇ ಸ್ಥಿತಿ ಇದೆ.
-ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.