ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
ಟೆಂಡರ್ ಪ್ರಕ್ರಿಯೆಯೂ ಶೀಘ್ರ ಆರಂಭ ಸಾಧ್ಯತೆ
Team Udayavani, Dec 24, 2024, 7:30 AM IST
ಹೊಸದಿಲ್ಲಿ: ಮುಂಬಯಿ-ಅಹ್ಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್ ಅನ್ವಯ ಭಾರತ ಮತ್ತು ಜಪಾನ್ ಈಗ ಬುಲೆಟ್ ರೈಲಿನ ವಿನ್ಯಾಸವನ್ನು ಅಂತಿಮಗೊಳಿಸುವತ್ತ ಹೆಜ್ಜೆಯಿಟ್ಟಿವೆ. ಸದ್ಯದಲ್ಲೇ ವಿನ್ಯಾಸಕ್ಕೆ ಒಪ್ಪಿಗೆ ದೊರೆಯಲಿದ್ದು, ಬೆನ್ನಲ್ಲೇ ಟೆಂಡರ್ ಕರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತದಲ್ಲಿ ಸಂಚರಿಸಬೇಕೆಂದರೆ ಬುಲೆಟ್ ರೈಲಿನಲ್ಲಿ ಹಲವು ಸೂಕ್ತ ಬದಲಾವಣೆ ತರಬೇಕಾಗುತ್ತದೆ. ಲಗೇಜ್ ಹೊರುವ ಸಾಮರ್ಥ್ಯವನ್ನು ಹೆಚ್ಚಿಸುವಂತೆ, 50 ಡಿ.ಸೆ.ಗಿಂತ ಅಧಿಕ ತಾಪಮಾನದಲ್ಲೂ ಸಂಚರಿಸುವಂತೆ ರೈಲುಗಳನ್ನು ಮರುವಿನ್ಯಾಸಗೊಳಿಸ ಬೇಕಾಗುತ್ತದೆ.
ಭಾರತದಲ್ಲಿ ಧೂಳು ಅತಿಯಾಗಿರುವ ಕಾರಣ, ಆ ಬಗ್ಗೆಯೂ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಆಸನ ವ್ಯವಸ್ಥೆಯನ್ನೂ ಮೂಲ ವಿನ್ಯಾಸದಲ್ಲಿರುವುದಕ್ಕಿಂತ ಭಿನ್ನವಾಗಿ ವಿನ್ಯಾಸಗೊಳಿಸಲಾ ಗುತ್ತಿದೆ. ಪ್ರತೀ ಬೋಗಿಯಲ್ಲೂ ಕಡಿಮೆ ಆಸನವಿರುವಂತೆ ನೋಡಿಕೊಳ್ಳಲಾಗುತ್ತದೆ.
ಒಂದು ಹಂತದಲ್ಲಿ ಜಪಾನ್‌ನ ಶಿಂಕಾನ್‌ಸೆನ್ ಸಂಸ್ಥೆ ಬುಲೆಟ್ ಟ್ರೈನ್ ಭಾರತಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲು ಒಪ್ಪಿಕೊಂಡಿಲ್ಲ. ಹೀಗಾಗಿ, ದೇಶಿ ತಂತ್ರಜ್ಞಾನ ಬಳಕೆ ಮಾಡಿ ದೇಶದಲ್ಲೇ ಬುಲೆಟ್ ಟ್ರೈನ್ ಕೋಚ್‌ಗಳನ್ನು ನಿರ್ಮಿಸಲೂ ಚಿಂತನೆ ನಡೆಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್ ಬೆಳೆಯಲು ಪ್ಲಾನ್!
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.