By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
ಕ್ಷೇತ್ರ ಸಮೀಕ್ಷೆ-ಚನ್ನಪಟ್ಟಣ: ಒಕ್ಕಲಿಗರ, ದಲಿತ ಮತ ಸೆಳೆಯಲು ಕಾಂಗ್ರೆಸ್, ಮೈತ್ರಿ ಪಕ್ಷಗಳ ಕಸರತ್ತು
Team Udayavani, Nov 10, 2024, 7:35 AM IST
ರಾಮನಗರ: ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ಉಪಚುನಾವಣ ಮತಸಮರ ಕ್ಲೈಮಾಕ್ಸ್ ಹಂತಕ್ಕೆ ತಲುಪಿದೆ. ಚನ್ನಪಟ್ಟಣ ಕ್ಷೇತ್ರ ಗೆಲ್ಲಲು ಎನ್‌ಡಿಎ ಮತ್ತು ಕಾಂಗ್ರೆಸ್ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದು, ವಿಜಯಮಾಲೆಗಾಗಿ ಒಂದೆಡೆ ಸೈನಿಕ ಮತ್ತೂಂದೆಡೆ ಜಾಗ್ವಾರ್ ಕೊನೇ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.
ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಸಿಎಂ, ರಾಜ್ಯ ಸಚಿವರು, ಶಾಸಕರ ಹಿಂಡು ಚನ್ನಪಟ್ಟಣ ಪ್ರಚಾರ ಕಣದಲ್ಲಿ ಧೂಳೆಬ್ಬಿಸಿದ್ದಾರೆ. ಉಭಯ ಪಕ್ಷಗಳ ನಡುವಿನ ವಾಕ್ಸಮರ ತಾರಕ್ಕೇರಿದ್ದು, ಒಕ್ಕಲಿಗರ ಕೋಟೆ ಎನಿಸಿರುವ ಚನ್ನಪಟ್ಟಣ ಗೆಲ್ಲುವುದು ಎಚ್‌ಡಿಕೆ ಮತ್ತು ಡಿಕೆಶಿಗೆ ಪ್ರತಿಷ್ಠೆಯ ಸಂಗತಿಯಾಗಿದೆ. ಚನ್ನಪಟ್ಟಣವನ್ನು ಗೆದ್ದು ಜಿಲ್ಲೆಯಲ್ಲಿ ಜೆಡಿಎಸ್ ಇಲ್ಲವಾಗಿಸಬೇಕು.
ಎಚ್‌ಡಿಕೆ ಕುಟುಂಬ ಜಿಲ್ಲೆಯಲ್ಲಿ ಖಾಲಿಯಾಗಬೇಕು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾದರೆ, ಕ್ಷೇತ್ರವನ್ನು ಉಳಿಸಿಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಗಟ್ಟಿಗೊಳಿಸಬೇಕು. ಡಿಕೆಶಿ ಸಹೋದರರಿಗೆ ತಿರುಗೇಟು ನೀಡಬೇಕೆಂಬುದು ಜೆಡಿಎಸ್ ಎಣಿಕೆಯಾಗಿದೆ. ಚನ್ನಪಟ್ಟಣದ ಇತಿಹಾಸದಲ್ಲಿ ಇದೇ ಮೊದಲು ಎನ್ನಿಸುವಂತೆ 31ಅಭ್ಯರ್ಥಿಗಳು ಕಣದಲ್ಲಿದ್ದು, 2 ಬ್ಯಾಲೆಟ್ ಬಾಕ್ಸ್‌ಗಳನ್ನು ಬಳಸಲಾಗುತ್ತಿದೆ.
2 ಬಾರಿ ಸೋತಿರುವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ನಿಂದ, ನಿಖಿಲ್‌ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದು, ಇವರೊಂದಿಗೆ 30 ಅಭ್ಯರ್ಥಿಗಳು ಮತಯಾಚನೆ ನಡೆಸುತ್ತಿದ್ದಾರೆ. ಈ ಚುನಾವಣೆ ನಿಖಿಲ್ ಕುಮಾರಸ್ವಾಮಿ ಚುನಾವಣ ರಾಜಕೀಯದ ಪ್ರವೇಶಕ್ಕೆ ವೇದಿಕೆಯಾದರೆ, ಯೋಗೇಶ್ವರ್ ಅವರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಎರಡೂ ಪಕ್ಷದವರ ನಡುವೆ ಪೈಪೋಟಿ ಹೆಚ್ಚಿದೆ.
ಕಣ್ಣೀರು ಮತ್ತು ನೀರು
ಈ ಬಾರಿಯ ಚುನಾವಣೆಯಲ್ಲಿ ಕಣ್ಣೀರು, ನೀರಾವರಿ, ಸ್ಥಳೀಯ ಮತ್ತು ಹೊರಗಿನವರು, ಸ್ಮಾರ್ಟ್‌ಕಾರ್ಡ್, ಅಭಿವೃದ್ಧಿ ಕೆಲಸಗಳು ಚರ್ಚೆಗೆ ಬಂದಿರುವ ಪ್ರಮುಖ ಸಂಗತಿಗಳು. ಚನ್ನಪಟ್ಟಣದಲ್ಲಿ ನೀರಾವರಿ ಯೋಜನೆ ಸಾಕಾರಗೊಂಡಿರುವುದು ರಾಜ್ಯದ ಮನೆಮಾತಾಗಿದೆ. ಇದರ ಕ್ರೆಡಿಟ್‌ಗೆ ಪಕ್ಷಗಳ ನಡುವೆ ಜಟಾಪಟಿ ನಡೆದಿದೆ.
ಇನ್ನು ಕಣ್ಣೀರು ಕ್ಷೇತ್ರದ ಚುನಾವಣೆ ಯಲ್ಲಿ ಸಾಕಷ್ಟು ಸದ್ದುಮಾಡಿದ್ದು, ನಿಖೀಲ್ ಪ್ರಚಾರದ ವೇಳೆ ಕಣ್ಣೀರು ಹಾಕಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಭಿವೃದ್ಧಿ ಕೆಲಸ ಮಾಡದೆ ಕಣ್ಣಿರು ಹಾಕುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದರೆ, ದೇವೇಗೌಡರು ಮತ್ತು ಕುಮಾರಸ್ವಾಮಿ ಕಟುಕರಿಗೆ ಕಣ್ಣೀರು ಬರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಹಿಂದ ಮತಗಳ ಮೇಲೆ ಎಲ್ಲರ ಕಣ್ಣು
ಉಪಚುನಾವಣೆ ಗೆಲ್ಲಲು ಮುಂದಾಗಿ ರುವ ಪಕ್ಷಗಳು ಜಾತೀಸಮೀಕರಣ ಆರಂಭಿಸಿವೆ. ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿದ್ದರೂ ಅಹಿಂದ ಹಾಗೂ ಇತರ ವರ್ಗಗಳು ಒಕ್ಕಲಿಗರಷ್ಟೇ ಪ್ರಮಾಣದಲ್ಲಿವೆ. ಹೀಗಾಗಿ ಜಾತಿವಾರು ಮತ ಸೆಳೆವ ತಂತ್ರಗಾರಿಕೆ ಶುರುವಾಗಿದೆ. ಜೆಡಿಎಸ್ ಪಾಲಿಗೆ ಒಕ್ಕಲಿಗರು ಓಟ್ ಬ್ಯಾಂಕ್ ಆಗಿದ್ದರೆ, ಕೈ ಪಾಳಯಕ್ಕೆ ಅಹಿಂದ ಮತಗಳು ಓಟ್ ಬ್ಯಾಂಕ್ ಆಗಿದೆ. ಒಕ್ಕಲಿಗರ ಮತಬುಟ್ಟಿಗೆ ಕಾಂಗ್ರೆಸ್ ಕೈ ಹಾಕಿದೆ.
ಅಭ್ಯರ್ಥಿಗಳ ಸಾಮರ್ಥ್ಯ
ನಿಖಿಲ್‌ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ
– ಮಂಡ್ಯ ಲೋಕಸಭೆ, ರಾಮನಗರ ಕ್ಷೇತ್ರ ಚುನಾವಣೆಯಲ್ಲಿ ಸೋತಿರುವ ಅನುಕಂಪ
– ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಎಂಬ ಕ್ರೆಡಿಟ್, ಚನ್ನಪಟ್ಟಣದಲ್ಲಿ ತಂದೆ ಎಚ್‌ಡಿಕೆ ಕೈಗೊಂಡಿರುವ ಅಭಿವೃದ್ಧಿ
– ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಕಾರ್ಯನಿರ್ವಹಣೆ
-ಜೆಡಿಎಸ್-ಬಿಜೆಪಿ ಪ್ರಮುಖರ ಪ್ರಚಾರ
– ಜೆಡಿಎಸ್‌ಗೆ ಒಕ್ಕಲಿಗ ಮತದಾರರ ಒಲವು
ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಅಭ್ಯರ್ಥಿ
– 2 ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತಿರುವ ಅನುಕಂಪ
– 5 ಬಾರಿ ಶಾಸಕರಾಗಿದ್ದಾಗ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು
– ಚನ್ನಪಟ್ಟಣದ ನೀರಾವರಿಗೆ ಯೋಜನೆ ಜಾರಿಗೆ ತಂದಿದ್ದಾರೆ ಎಂಬ ಕ್ರೆಡಿಟ್
– ಕಾಂಗ್ರೆಸ್ ಅಭ್ಯರ್ಥಿಯಾದ ಕಾರಣ ಸಾಂಪ್ರದಾಯಿಕ ಮತಗಳು ಗಟ್ಟಿ
– ಡಿಸಿಎಂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸೇರಿ ಕೈ ನಾಯಕರ ಬೆಂಬಲ
– ಸು.ನಾ.ನಂದಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindi ಹೇರಿದರೆ ಗೋಕಾಕ್ ಮಾದರಿ ಹೋರಾಟ: ಸಾ.ರಾ.ಗೋವಿಂದು
Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?
Distribution: ಕೆಎಸ್ಸಾರ್ಟಿಸಿ ನಿವೃತ್ತ ಸಿಬಂದಿಗೆ 224 ಕೋಟಿ ರೂ. ಪಾವತಿ
C.T.Ravi Case: ನಕ್ಸಲರು ರವಿಗೆ ಗುಂಡು ಹೊಡೆಯಲಿ ಎಂದು ಕರೆದೊಯ್ದರೇ?: ಆರ್.ಅಶೋಕ್
Havyaka Mahasabha: ಡಿ.27ರಿಂದ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.