ಇಂದು ಉಪ ಚುನಾವಣೆ: ಸರಕಾರದ ಉಳಿವು ಮತದಾರನ ತೀರ್ಪಿನ ಮೇಲೆ ನಿರ್ಧಾರ
Team Udayavani, Dec 5, 2019, 6:48 AM IST
ಚುನಾವಣೆಗೆ ಅಂತಿಮ ಹಂತದ ಸಿದ್ಧತೆ.
ಬೆಂಗಳೂರು: ರಾಜ್ಯ ರಾಜಕಾರಣದ ಧ್ರುವೀಕರಣ ನಿರೀಕ್ಷೆ, ಅನರ್ಹಗೊಂಡವರ ಭವಿಷ್ಯ, ಮೂರೂ ಪಕ್ಷಗಳ ನಾಯಕರ ನಾಯಕತ್ವದ ಪರೀಕ್ಷೆ , ಬಿಜೆಪಿ ಸರಕಾರದ ಅಳಿವು-ಉಳಿವು…. ಈ ನಾಲ್ಕೂ ಪ್ರಶ್ನೆಗಳಿಗೆ ಉತ್ತರ ನೀಡುವ ಉಪ ಚುನಾವಣೆಯ ಮತದಾನ ಗುರುವಾರ ನಡೆಯಲಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನಕ್ಕೆ ರೂವಾರಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಹೊರ ನಡೆದಿದ್ದ ರಮೇಶ್ ಜಾರಕಿಹೊಳಿ, ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್, ಡಾ| ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ ಸಹಿತ 13 ಮಂದಿ ಅನರ್ಹ ಶಾಸಕರ ರಾಜಕೀಯ ಭವಿಷ್ಯವೇ ಈ ಚುನಾವಣೆ ಮೇಲೆ
ನಿಂತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ರಾಜಕೀಯ ಪ್ರಸ್ತುತತೆಯನ್ನೂ ಈ ಉಪ ಚುನಾವಣೆ ನಿರ್ಧರಿಸಲಿದೆ. ಬಿಜೆಪಿ ಪಾಲಿಗಂತೂ “ದಕ್ಷಿಣದ ಹೆಬ್ಟಾಗಿಲು’ ಕರ್ನಾಟಕವನ್ನು ಮತ್ತೆ ಉಳಿಸಿಕೊಳ್ಳಲೇಬೇಕಾದ ಅಗ್ನಿ ಪರೀಕ್ಷೆ ಈ ಉಪಚುನಾವಣೆ.
ಮೂರೂ ಪಕ್ಷಗಳ ನಾಯಕರು ತಮ್ಮೆಲ್ಲ ಶಕ್ತಿ-ಸಾಮರ್ಥ್ಯ, ಶ್ರಮ ಹಾಕಿ ಅಭ್ಯರ್ಥಿಗಳ ಪರ ಪ್ರಚಾರ ಮುಗಿಸಿದ್ದಾರೆ. ಜಾತಿವಾರು ಲೆಕ್ಕಾಚಾರದೊಂದಿಗೆ, ಜನರ ಆಕ್ರೋಶ, ಅಭಿವೃದ್ಧಿ, ಮರು ಮೈತ್ರಿ ವಿಚಾರಗಳ ಪ್ರಸ್ತಾವಗಳ ಹಿನ್ನೆಲೆಯಲ್ಲಿ ತಮ್ಮದೇ ಆದ ಲೆಕ್ಕಾಚಾರ ಹಾಕಿಕೊಂಡು ಮತದಾರನ ತೀರ್ಪಿನತ್ತ ನೋಡುತ್ತಿದ್ದಾರೆ.
10ರಲ್ಲಿ ಗೆಲ್ಲುತ್ತೇವೆ: ಬಿಜೆಪಿ
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿರು ವುದರಿಂದ ಲಾಭವಾಗಲಿದೆ. ಅನರ್ಹಗೊಂಡವರ ವೈಯಕ್ತಿಕ ವರ್ಚಸ್ಸು ಹಾಗೂ ಪ್ರಭಾವ, ಸಮು ದಾಯದ ಮತಗಳ ಜತೆಗೆ ಸಾಂಪ್ರದಾಯಿಕ ಬಿಜೆಪಿ ಮತಗಳು ಬೀಳಲಿವೆ ಎಂಬ ನಂಬಿಕೆ ಬಿಜೆಪಿಯದು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಅಭಿವೃದ್ಧಿ ಮಂತ್ರ ಜಪಿಸಿರುವ ಬಿಜೆಪಿ ಕನಿಷ್ಠ 10 ಸ್ಥಾನ ಗೆಲ್ಲುವ ಭರವಸೆ ಇದೆ. ಆಂತರಿಕವಾಗಿ ಎಂಟು ಗೆದ್ದರೂ ಸರಕಾರ ಸುರಕ್ಷಿತ ಎಂಬ ಮನಃಸ್ಥಿತಿಯಲ್ಲಿದೆ. ಆದರೆ 8 ಸ್ಥಾನ ಗೆದ್ದರೆ ಸರಕಾರವೇನೋ ಉಳಿದುಕೊಳ್ಳಬಹುದು. ಉಳಿದವರು ಸೋತರೆ ಅವರ ಭವಿಷ್ಯ ಚಿಂತಾಜನಕವಾಗಲಿದೆ.
ಕೈ ಹಿಡಿದೀತೇ ಒಳಒಪ್ಪಂದ?
ಅನರ್ಹಗೊಂಡವರ ಬಗ್ಗೆ ಮತದಾರರಲ್ಲಿ ಆಕ್ರೋಶ ಇರುವುದರಿಂದ ಮತ್ತು ಬಿಜೆಪಿಗೆ ಕೆಲವು ಕಡೆ ಬಂಡಾಯ ಎದುರಾಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬಹುದು. ಜೆಡಿಎಸ್ ಜತೆಗಿನ ಕೆಲವು ಕ್ಷೇತ್ರಗಳ ಒಳ ಒಪ್ಪಂದ ಕೈ ಹಿಡಿಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದಾಗಿದೆ.
ಜೆಡಿಎಸ್‌ಗೆ ಕಿಂಗ್ ಮೇಕರ್ ಕನಸು
ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯ ದಲ್ಲಿ ಧ್ರುವೀಕರಣಕ್ಕೆ ಕಾರಣವಾಗಲಿದೆ ಎಂದು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವ ಜೆಡಿಎಸ್ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ.ಕಾಂಗ್ರೆಸ್ ಹಾಗೂ ಜೆಡಿಎಸ್ ಹತ್ತು ಕ್ಷೇತ್ರ ಗೆದ್ದರೆ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದರೆ ಬಿಜೆಪಿ ಸರಕಾರ ಪತನವಾಗಲಿದೆ. ಆಗ ಜೆಡಿಎಸ್‌ಗೆ ಕಿಂಗ್ ಮೇಕರ್ ಆಗುವ ಅವಕಾಶ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.