By Polls: ವಿಧಾನ ಪರಿಷತ್‌ ಉಪಚುನಾವಣೆ: ಅಂತಿಮ ಕಣದಲ್ಲಿ ನಾಲ್ವರು ಅಭ್ಯರ್ಥಿಗಳು

ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರಕ್ಕೆ ಅ.21ರಂದು ಮತದಾನ, ಬಿರುಸು ಪಡೆಯಲಿದೆ ರಾಜಕೀಯ ಚಟುವಟಿಕೆ

Team Udayavani, Oct 7, 2024, 6:06 PM IST

BJP–Cong-sdpi

ಮಂಗಳೂರು: ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆಯುವ ಉಪಚುನಾವಣೆಗೆ ನಾಲ್ಕು ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮುಹಮ್ಮದ್ ರಿಯಾಝ್ (ಪಕ್ಷೇತರ) ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.

ಚುನಾವಣಾ ಕಣದಲ್ಲಿ ಅಂತಿಮವಾಗಿ ಕಿಶೋರ್ ಬಿ.ಆರ್ (ಬಿಜೆಪಿ), ರಾಜು ಪೂಜಾರಿ (ಕಾಂಗ್ರೆಸ್), ಅನ್ವರ್ ಸಾದತ್ ಎಸ್. (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ದಿನಕರ ಉಳ್ಳಾಲ್ (ಪಕ್ಷೇತರ) ಇದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ (ಅ.7) ಕೊನೆಯ ದಿನವಾಗಿತ್ತು. ಉಪ ಚುನಾವಣೆಯು ಅ. 21ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ: 
ದಕ್ಷಿಣ ಕನ್ನಡ ಸ್ಥಳೀಯಾಡಳಿತ ಪ್ರಾಧಿಕಾರ ಕ್ಷೇತ್ರದ ವ್ಯಾಪ್ತಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದೆ. ಹೀಗಾಗಿ ಈ ಉಪ ಚುನಾವಣೆಯಲ್ಲಿ ಎರಡು ಜಿಲ್ಲೆಗಳ ಸ್ಥಳೀಯಾಡಳಿತಗಳ ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು 392 ಮತಗಟ್ಟೆಗಳಿದ್ದು, 6,037 ಮಂದಿ ಮತದಾರರಿದ್ದಾರೆ. ದಕ್ಷಿಣ ಕನ್ನಡದಲ್ಲಿ 234 ಮತಗಟ್ಟೆ, 3,551 ಮತದಾರರು, ಉಡುಪಿಯಲ್ಲಿ 158 ಮತಗಟ್ಟೆ, 2,486 ಮತದಾರರಿದ್ದಾರೆ.

ಈ ಉಪ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಗ್ರಾಮ ಪಂಚಾಯ್ತಿ, ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು ಸೇರಿ 234 ಸ್ಥಳೀಯ ಸಂಸ್ಥೆಗಳಲ್ಲಿ 3,580 ಮಂದಿ ಇದ್ದಾರೆ. ಅವರಲ್ಲಿ 3,551 ಮಂದಿ ಪ್ರಸ್ತುತ ಸದಸ್ಯರಿದ್ದಾರೆ. 29 ಸ್ಥಾನಗಳು ಖಾಲಿ ಇವೆ. ಉಡುಪಿಯಲ್ಲಿ ಗ್ರಾಮ ಪಂಚಾಯ್ತಿ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್‌ ಸದಸ್ಯರು ಸೇರಿ 158 ಸ್ಥಳೀಯ ಸಂಸ್ಥೆಗಳಲ್ಲಿ 2,490 ಮಂದಿಯಲ್ಲಿ ಪ್ರಸ್ತುತ 2,486 ಮಂದಿ ಇದ್ದಾರೆ. 4 ಸ್ಥಾನಗಳು ಖಾಲಿ ಇವೆ.

ಈ ಕ್ಷೇತ್ರವು ದ್ವಿಸದಸ್ಯ ಕ್ಷೇತ್ರವಾಗಿದ್ದು, 2021ರಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಗೆಲುವು ಸಾಧಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆಲುವು ಸಾಧಿಸಿದ ಕಾರಣ ಈಗ ಉಪಚುನಾವಣೆ ನಡೆಯುತ್ತಿದೆ.

ಟಾಪ್ ನ್ಯೂಸ್

kiran rijiju

Congress  ಅಲ್ಪಸಂಖ್ಯಾಕ ಸಚಿವಾಲಯವನ್ನು ಮುಸ್ಲಿಂ ವ್ಯವಹಾರಗಳ ಸಚಿವಾಲಯ ಮಾಡಿತ್ತು..

1-sadsdas

UP; ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋ*ಟ: ಇಬ್ಬರು ಸಾ*ವು, ಇಬ್ಬರು ಗಂಭೀರ

Cast-census-CM

Cast Census: ಜಾತಿಗಣತಿ ವರದಿ ಕುರಿತು ಅ.18ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆವು: ಸಿಎಂ

mutalik (2)

Israel ಮಾದರಿಯಲ್ಲಿ ಹೊರ ಮತ್ತು ಆಂತರಿಕ ಶತ್ರುಗಳ ವಿರುದ್ಧ ಹೋರಾಡಬೇಕು : ಮುತಾಲಿಕ್

1-wqewqewq

BBK11; ನೀನೇನು ದೊಡ್ಡ ಡಾನ್ ಆ..!!;ಕ್ಯಾಪ್ಟನ್ ಹಂಸಾಗೆ ತಲೆನೋವಾದ ಜಗದೀಶ್

1-caa

Chennai air show ಅವಘಡ; ವಿಚಾರ ರಾಜಕೀಯ ಮಾಡಬೇಡಿ: ತಮಿಳುನಾಡು ಸರಕಾರ

manish sisodia

AAP;ಎಂಪಿ ಮೇಲೆ ಇಡಿ ದಾಳಿ: ಸೋಲಿಸಲಾಗದೆ ಮೋದಿ ಈ ರೀತಿ ಮಾಡುತ್ತಿದ್ದಾರೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fraudd

Bramavara: ಟಾಟಾ ಪ್ಲೇ ಅಳವಡಿಕೆ ನೆಪದಲ್ಲಿ ವಂಚನೆ

1

Udupi: ಅಸಹಾಯಕ ಸ್ಥಿತಿಯಲ್ಲಿದ್ದ ಬಾಲಕಿಯ ರಕ್ಷಣೆ

Inauguration of ‘The Ocean Pearl Times Square’ in Udupi on Oct. 09

Ocean Pearl; ಅ.09ರಂದು ಉಡುಪಿಯಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ʼ ಉದ್ಘಾಟನೆ

7(3)

Kaup: ಉಚ್ಚಿಲ ದಸರೆಗೆ ವಸ್ತುಪ್ರದರ್ಶನ ಮೆರುಗು

6(1)

Karkala: ಮಕ್ಕಳ ಕೈಯ್ಯಲ್ಲಿ ಹೂವಿನಕೋಲು!; ನವರಾತ್ರಿ ವಿಶೇಷ ಆಚರಣೆ ಮುಂದುವರಿಸುವ ಮಕ್ಕಳು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

kiran rijiju

Congress  ಅಲ್ಪಸಂಖ್ಯಾಕ ಸಚಿವಾಲಯವನ್ನು ಮುಸ್ಲಿಂ ವ್ಯವಹಾರಗಳ ಸಚಿವಾಲಯ ಮಾಡಿತ್ತು..

fraudd

Bramavara: ಟಾಟಾ ಪ್ಲೇ ಅಳವಡಿಕೆ ನೆಪದಲ್ಲಿ ವಂಚನೆ

1

Udupi: ಅಸಹಾಯಕ ಸ್ಥಿತಿಯಲ್ಲಿದ್ದ ಬಾಲಕಿಯ ರಕ್ಷಣೆ

1-sadsdas

UP; ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋ*ಟ: ಇಬ್ಬರು ಸಾ*ವು, ಇಬ್ಬರು ಗಂಭೀರ

Cast-census-CM

Cast Census: ಜಾತಿಗಣತಿ ವರದಿ ಕುರಿತು ಅ.18ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವೆವು: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.