ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!
Team Udayavani, Sep 27, 2024, 2:31 PM IST
ಉದಯವಾಣಿ ಸಮಾಚಾರ
ಬೈಲಹೊಂಗಲ: ಮರಕುಂಬಿ ಗ್ರಾಮದ ಸಮೀಪದ ಸರಕಾರಿ ಕಿರಿಯ ಪ್ರಾಥಮಿಕ ತೋಟದ ಶಾಲೆ ಕಟ್ಟಡ ಕಳೆದ ಹಲವಾರು ವರ್ಷಗಳಿಂದ ಅನಾಥವಾಗಿದೆ. ಯಾರೂ ಕೇಳುವವರು ಇಲ್ಲದಂತಾಗಿದೆ. ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯದಿಂದ ಕಟ್ಟಡ ಪಾಳು ಬಿದ್ದಿದೆ.
ಮಕ್ಕಳ ದಾಖಲಾತಿ ಇಲ್ಲವೆಂಬ ಕಾರಣ ಒಡ್ಡಿ ಶಿಕ್ಷಣ ಇಲಾಖೆ ಇಲ್ಲಿ ಕಲಿಯುವ 1ರಿಂದ 5 ನೇ ತರಗತಿ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಮರಕುಂಬಿ ಹಾಗೂ ಹಾರುಗೊಪ್ಪ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಳುಹಿಸಿಕೊಡಲಾಗಿದೆ. ಈಗ ಶಾಲೆ ವಿದ್ಯಾರ್ಥಿಗಳಿಲ್ಲದೇ ಅನಾಥವಾದ್ದ ರಿಂದ ಶಾಲಾ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಕುಡುಕರಿಗೆ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.
ಆಯಾ ಪ್ರದೇಶದಲ್ಲಿ ಲಭ್ಯವಿರುವ ಮಕ್ಕಳ ಸಂಖ್ಯೆ ಕುರಿತು ಅಧ್ಯಯನ ನಡೆಸಿ ನೂತನ ಕಟ್ಟಡಗಳನ್ನು ನಿರ್ಮಿಸಿದರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ಸಿಗಲಿದೆ. ಶಿಕ್ಷಣ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ತೋಟದ ಶಾಲೆ ಪರಿಶೀಲಿಸಿ ಕಟ್ಟಡದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಮರಕುಂಬಿ ಗ್ರಾಮದ ಹಾರುಗೊಪ್ಪ ರಸ್ತೆಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ತೋಟದ ಶಾಲೆ ಕಟ್ಟಡದ ದುಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಮಕ್ಕಳ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡರೆ ಮಾತ್ರ ಮಹತ್ವ ದೊರಕಲಿವೆ. ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆ ಅಧಿಕಾರಿಗಳು ಮುಂದಾಗಬೇಕು.
ಮಕ್ತುಂ ನದಾಫ, ಗ್ರಾಮಸ್ಥರು, ಮರಕುಂಬಿ
ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದ ಮರಕುಂಬಿಯ ಈ ಸರಕಾರಿ ಕಿರಿಯ ಪ್ರಾಥಮಿಕ ತೋಟದ ಶಾಲೆ ಕಳೆದ ಹಲವಾರು ವರ್ಷಗಳಿಂದ ಬಂದ್ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಕಟ್ಟಡ ಸದುಪಯೋಗವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮೋಹನ ದಂಡಿನ, ಕ್ಷೇತ್ರ
ಶಿಕ್ಷಣಾಧಿಕಾರಿಗಳು, ಸವದತ್ತಿ.
■ ಎಂ.ಆರ್.ಬಡೇಘರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Belagavi: ಎಂಇಎಸ್ ಕಾರ್ಯಕರ್ತರ ಪುಂಡಾಟ
Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ
Belagavi; ಎಂಇಎಸ್ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್ ಜಾರಕಿಹೊಳಿ
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.