Byndoor: ಐತಿಹಾಸಿಕ ಪ್ರಸಿದ್ಧಿಯ ತಗ್ಗರ್ಸೆ ಕಂಬಳ್ಳೋತ್ಸವ

Team Udayavani, Dec 6, 2024, 7:05 AM IST

Byndoor: ಐತಿಹಾಸಿಕ ಪ್ರಸಿದ್ಧಿಯ ತಗ್ಗರ್ಸೆ ಕಂಬಳ್ಳೋತ್ಸವ

ಬೈಂದೂರು: ಕುಂದಾಪುರ ತಾಲೂಕಿನ ವಂಡಾರು ಹೊರತು ಪಡಿಸಿದರೆ ಬೈಂದೂರು ಭಾಗದ ಅತಿ ದೊಡ್ಡ ಕಂಬಳ ಎಂದು ಗುರುತಿ ಸಿಕೊಂಡಿರುವ ತಗ್ಗರ್ಸೆ ಕಂಬಳ್ಳೋತ್ಸವ ಡಿ. 6ರಂದು ನಡೆಯಲಿದೆ.

ನೂರಾರು ವರ್ಷಗಳ ಇತಿಹಾಸವಿರುವ ತಗ್ಗರ್ಸೆ ಕಂಠದಮನೆ ಟಿ.ನಾರಾಯಣ ಹೆಗ್ಡೆಯವರ ಮನೆಯ ಕಂಬಳವು ಸಾಂಪ್ರದಾಯಿಕ ರೀತಿಯಲ್ಲೇ ನಡೆಯಲಿದೆ.

ಸುಮಾರು 5.16 ಎಕ್ರೆ ವಿಸ್ತಿರ್ಣದ ವಿಶಾಲವಾದ ಕಂಬಳಗದ್ದೆಯಿದ್ದು, ಒಂದೇ ದಿನದಲ್ಲಿ ನಾಟಿ ಮಾಡಬೇಕು. ಈ ಗದ್ದೆ ಮೊದಲ ನಾಟಿಯಿಂದ ಸೇರಿ ಪ್ರತಿ ಹಂತದಲ್ಲಿ ಕೊರಗ ಸಮುದಾಯದವರಿಗೆ ವಿಶೇಷ ಪ್ರಾಧಾನ್ಯವಿದೆ. ಕಂಬಳದ ದಿನ ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಗದ್ದೆಯ ಸುತ್ತ ಇರುವ ಪರಿವಾರ ದೇವರಿಗೆ ಪೂಜೆ ನೀಡಲಾಗುತ್ತದೆ. ಕಂಬಳಗದ್ದೆ ತೋರಣ ಸಿದ್ಧಪಡಿಸಿದ ಬಳಿಕ ನಿಗದಿತ ಮುಹೂರ್ತದಲ್ಲಿ ಧ್ವಜ ನೆಡಲಾಗುತ್ತದೆ.

ಕಂಬಳದಲ್ಲಿ ಈ ಭಾಗದ ಮನೆತನಗಳಾದ ಯಡ್ತರೆ ಮನೆ, ಕಳವಾಡಿಮನೆ, ಮಧ್ದೋಡಿ ಮನೆಯವರಿಗೆ ಮೊದಲ ಪ್ರಾಶಸ್ತ್ಯ. ಒಟ್ಟು 60ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸುತ್ತವೆ. ಈಗಿನ ಟಿ. ನಾರಾಯಣ ಹೆಗ್ಡೆ ಮನೆಯವರು 65 ವರ್ಷಗಳಿಂದ ಕಂಬಳವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಆಕರ್ಷಕ ಕಂಬಳ್ಳೋತ್ಸವ
ಇಲ್ಲಿನ ಕಂಬಳಗದ್ದೆ ಅತ್ಯಂತ ವಿಶಾಲವಾದ ಆಯತಾಕಾರದಿಂದ ಕೂಡಿದೆ. ಈಗೀಗ ಕೋಣಗಳಿಗಿ ಬಹು ಮಾನಗಳಿದ್ದರೂ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಕೈಬಿಡುವುದಿಲ್ಲ. ಸೂತಕ, ಮೈಲಿಗೆಯಾದವರು ಗದ್ದೆಗೆ ಇಳಿಯುವಂತಿಲ್ಲ. ಕೊಲ್ಲೂರು ರಸ್ತೆಯಿಂದ ಉತ್ಸವದ ದಿನ ಕೋಣಗಳು ಮೆರವಣಿಗೆಯಲ್ಲಿ ಸಾಗುತ್ತವೆ. ಮಾತ್ರವಲ್ಲದೆ ಬೈಂದೂರು ಭಾಗದ ಹಬ್ಬದಂತೆ ಈ ಉತ್ಸವವನ್ನು ಆಚರಿಸಲಾಗುತ್ತದೆ.

ಜಾನುವಾರುಗಳನ್ನು ಕಂಬಳಗದ್ದೆಗೆ ಸುತ್ತು ಹಾಕಿಸಿ ನೀರಿನ ಪ್ರೋಕ್ಷಣೆ ಮಾಡಲಾಗುತ್ತದೆ.
ಈ ಕಂಬಳವನ್ನು ನಮ್ಮ ಅನಾದಿ ಕಾಲ ದಿಂದಲೂ ಹಿರಿಯರು ನಡೆಸಿ ಕೊಂಡು ಬಂದಿದ್ದು, 65 ವರ್ಷಗಳಿಂದ ನಮ್ಮ ಮುಂದಾಳತ್ವದಲ್ಲಿ ನಡೆಯು ತ್ತಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಕಂಬಳ ನಡೆಯುತ್ತದೆ. ಇದು ಬೈಂದೂರಿನ ಅತಿ ದೊಡ್ಡ ಕಂಬಳ್ಳೋತ್ಸವವಾಗಿದೆ ಎಂದು ಕಂಬಳ ಮನೆಯವರಾದ ಟಿ.ನಾರಾಯಣ ಹೆಗ್ಡೆ ತಗ್ಗರ್ಸೆ ಹೇಳುತ್ತಾರೆ.

ಪುರಾತನ ವಂಡಾರು ಕಂಬಳ
ಕೋಟ: ಅತಿ ಪುರಾತನ ವಂಡಾರು ಸಾಂಪ್ರದಾಯಿಕ ಕಂಬಳವು ಡಿ. 6ರಂದು ನಡೆಯಲಿದೆ. ಇಲ್ಲಿ ಯಾವುದೇ ಸ್ಪರ್ಧೆಯ ರೂಪ ದಲ್ಲಿರದೆ, ಹರಕೆಯೇ ಪ್ರಧಾನವಾಗಿ ಕಂಬಳ ನಡೆದು ಕೊಂಡು ಬಂದಿದೆ. ಪಾಂಡವರು ನಿರ್ಮಿ ಸಿದ್ದು ಎಂದು ನಂಬಲಾಗಿರುವ 10 ಎಕ್ರೆ ವಿಸ್ತೀರ್ಣದ ಗದ್ದೆಯಲ್ಲಿ ಕಂಬಳ ನಡೆಯಲಿದೆ.ವಂಡಾರಿನ ಹೆಗ್ಡೆ ಮನೆತನದವರು ಈ ಕಂಬಳ ನಡೆಸಿಕೊಂಡು ಬರುತ್ತಿದ್ದಾರೆ.

ಕಳೆದ 50 ವರ್ಷಗಳಿಂದಲೂ ಈ ಮನೆತನದ ಪಟ್ಟದ ಹೆಗ್ಡೆಯವರಾದ ಪ್ರವೀಣ್‌ ಹೆಗ್ಡೆ ನೇತೃತ್ವದಲ್ಲಿ ಈ ಕಂಬಳ ನಡೆಯುತ್ತಿದೆ. ಮನೆ ದೇವರು ತುಳಸಿ ಅಮ್ಮ, ನಿಗಳೇಶ್ವರನ ಗುಡಿ ಪೂಜೆ ಸಲ್ಲಿಸಲಾಗುತ್ತದೆ. ಡಿ.7ರಂದು ತುಳಸಿ ಅಮ್ಮನಿಗೆ ಗೆಂಡೋತ್ಸವ ನಡೆಯುತ್ತದೆ.

ಟಾಪ್ ನ್ಯೂಸ್

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

1-bel

Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

1-bel

Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Hiriydaka: ಬೈಕ್‌ ಮರಕ್ಕೆ ಢಿಕ್ಕಿ: ಯುವಕ ಸಾವು

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.