![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 23, 2020, 9:46 PM IST
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಕೇವಲ ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗಿದ್ದಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ ವಿಚಾರ. ಬಿಜೆಪಿಯವರಿಗೆ ಕಾಂಗ್ರೆಸ್ ಮಾತ್ರ ಕಾಣುತ್ತಿದ್ದು, ಎಲ್ಲ ವಿಚಾರದಲ್ಲೂ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿಎಎ ವಿರೋಧ ಪ್ರತಿಭಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಕಾರಣ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಎಎ ಕುರಿತ ವಿಚಾರವನ್ನು ಕಾಂಗ್ರೆಸ್ ಜನರಿಗೆ ಬಿಟ್ಟಿದೆ. ಇದನ್ನು ವಿರೋಧಿಸುತ್ತಿರುವವರು ತಮ್ಮದೇ ಆದ ರೀತಿಯಲ್ಲಿ ವಿರೋಧ ಮಾಡುತ್ತಿ¨ªಾರೆ. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಬೇರೆ ಬೇರೆ ರಾಷ್ಟ್ರಗಳೂ ಇದನ್ನು ಗಮನಿಸುತ್ತಿವೆ. ಈ ಕಾಯ್ದೆಯ ಜಾರಿ ಬಳಿಕ ಆರ್ಥಿಕ ಕಡಿತಕ್ಕೆ ಅನೇಕ ರಾಷ್ಟ್ರಗಳಲ್ಲಿ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರ ಸರಕಾರಕ್ಕೆ ಗೊತ್ತಾಗಿದೆ ಎಂದರು.
ಸಿಎಎ ಜಾರಿ ಅನಂತರ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ನಮ್ಮ ವಿದ್ಯಾವಂತ ಯುವ ಸಮೂಹ ಅಮೆರಿಕ, ಯುರೋಪ್‌ನಂಥ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ¨ªಾರೆ. ಅವರು ಆ ದೇಶದಲ್ಲಿ ಅಲ್ಪಸಂಖ್ಯಾಕರು. ಭಾರತದಲ್ಲಿ ಈ ಕಾಯ್ದೆ ಜಾರಿ ನಂತರ ಅವರನ್ನು ಬೇರೆ ರೀತಿಯಲ್ಲಿ ಕಾಣುತ್ತಿ¨ªಾರೆ ಎಂದು ಹೇಳಿದರು.
ದೇಶ ಮೊದಲು, ರಾಜಕೀಯ ಆಮೇಲೆ
ಅಮೂಲ್ಯಾ ಲಿಯೋನಾ ಪ್ರಕರಣದಲ್ಲಿ ಆಕೆಯ ಪರವಾಗಿ ನಿಲ್ಲುವ ಪ್ರಶ್ನೆಯೇ ಇಲ್ಲ. ರಾಜಕಾರಣವನ್ನು ಒಂದು ಇತಿಮಿತಿಯಲ್ಲಿ ಮಾಡಬೇಕು. ದೇಶದ ವಿಚಾರ ಬಂದಾಗ ನಾವು ದೇಶಕ್ಕೆ ಆದ್ಯತೆ ನೀಡಬೇಕು. ನಮ್ಮ ದೇಶಕ್ಕೆ ಅಪಮಾನ ಮಾಡಿ ಬೇರೆ ದೇಶಕ್ಕೆ ಜೈಕಾರ ಹಾಕುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಕೂಡ ಅದಕ್ಕೆ ಪೋÅತ್ಸಾಹ ನೀಡುವುದಿಲ್ಲ ಎಂದು ಹೇಳಿದರು.
ಆದರೆ ಆ ಹೆಣ್ಣು ಮಗಳು ಏನು ಹೇಳಲು ಹೋರಟಿದ್ದಳು ಎಂಬುದನ್ನೂ ಕೂಡ ತಿಳಿದುಕೊಳ್ಳಬೇಕು. ಆಕೆ ಈ ಹಿಂದೆ ಒಂದು ಸಿದ್ಧಾಂತದ ವಿಚಾರವಾಗಿ ಮಾತನಾಡಿರುವುದನ್ನು ನೋಡಿದ್ದೇನೆ. ಹೀಗಾಗಿ ಆಕೆ ಏನು ಹೇಳಲು ಹೊರಟಿದ್ದಳು ಎಂಬುದು ನಮಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಆತುರಪಡುವುದು ಬೇಡ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.