ಎಲೆಕೋಸು ಸೇವನೆಯಿಂದ ಹಲವು ಉಪಯೋಗ: ಕ್ಯಾಬೇಜ್ ಸವಿ
ರಕ್ತಸ್ರಾವ ಇತ್ಯಾದಿ ತೊಂದರೆಗಳಿರುವವರಿಗೆ ಇದರ ಸೇವನೆಯಿಂದ ಬಹಳ ಉಪಯೋಗ
Team Udayavani, Oct 26, 2020, 9:00 AM IST
ವಿಟಮಿನ್ “ಸಿ’ ಜೀವಸತ್ವ ಹೊಂದಿರುವ ಎಲೆಕೋಸನ್ನು ಸಣ್ಣಗೆ ಹೆಚ್ಚಿ ಮಿತವಾಗಿ ಬೇಯಿಸಿ ಬಳಸುವುದರಿಂದ ಜೀವಸತ್ವ ನಾಶವಾಗಲಾರದು. ಹೊಟ್ಟೆಹುಣ್ಣು, ಮೂಲವ್ಯಾಧಿ, ವಸಡಿನಿಂದಾಗುವ ರಕ್ತಸ್ರಾವ ಇತ್ಯಾದಿ ತೊಂದರೆಗಳಿರುವವರಿಗೆ ಇದರ ಸೇವನೆಯಿಂದ ಬಹಳ ಉಪಯೋಗ. ಇಲ್ಲಿವೆ ಕೆಲವು ರಿಸಿಪಿ.
ಕ್ಯಾಬೇಜ್ ರೊಟ್ಟಿ
ಬೇಕಾಗುವ ಸಾಮಗ್ರಿ : ಬೆಳ್ತಿಗೆ ಅಕ್ಕಿ- ಎರಡು ಕಪ್, ತೆಂಗಿನ ತುರಿ- ಮುಕ್ಕಾಲು ಕಪ್, ಸಣ್ಣಗೆ ಹೆಚ್ಚಿದ ಕ್ಯಾಬೇಜ್- ಒಂದು ಕಪ್, ಹೆಚ್ಚಿದ ಕರಿಬೇವು – ಹತ್ತು ಚಮಚ, ಹೆಚ್ಚಿದ ನೀರುಳ್ಳಿ- ಅರ್ಧ ಕಪ್, ಹುಣಸೆಹುಳಿ- ಒಂದು ಚಮಚ, ಹಸಿಮೆಣಸು- ಎರಡು, ಶುಂಠಿತರಿ- ಒಂದು ಚಮಚ, ಉಪ್ಪು$ರುಚಿಗೆ ಬೇಕಷ್ಟು.
ಮಸಾಲೆಗೆ: ಧನಿಯಾ- ಎರಡು ಚಮಚ, ಉದ್ದಿನಬೇಳೆ- ಎರಡು ಚಮಚ, ಇಂಗಿನ ಪುಡಿ- ಒಂದು ಚಮಚ, ಜೀರಿಗೆ- ಕಾಲು ಚಮಚ, ಅರಸಿನ- ಕಾಲು ಚಮಚ, ಕೆಂಪುಮೆಣಸು- ಆರು.
ತಯಾರಿಸುವ ವಿಧಾನ: ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಮೇಲೆ ತಿಳಿಸಿದ ಮಸಾಲೆಗಳನ್ನು ಘಂ ಎಂದು ಹುರಿದು, ಉಪ್ಪು-ಹುಳಿಯ ಜೊತೆ ಕಾಯಿತುರಿಗೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ನೆನೆಸಿದ ಅಕ್ಕಿ ಸೇರಿಸಿ ಬಾಂಬೆ ರವೆಯ ಹದಕ್ಕೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ನೀರುಳ್ಳಿ, ಹಸಿಮೆಣಸು, ಕರಿಬೇವು, ಶುಂಠಿತರಿ, ಕ್ಯಾಬೇಜ್ ಹಾಗೂ ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ$ ದಪ್ಪವಿರಲಿ. ಕಾದ ಕಾವಲಿಗೆಯಲ್ಲಿ ದೋಸೆ ಹಾಕಿ ತುಪ್ಪಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ಕಾಯಿ ಚಟ್ನಿ ಅಥವಾ ಬೆಣ್ಣೆ ಜೊತೆ ಸವಿಯಬಹುದು. ದೋಸೆ ಹಿಟ್ಟಿಗೆ ಸಿಹಿ ಬೇಕಿದ್ದವರು ಸ್ವಲ್ಪ ಬೆಲ್ಲ ಮಿಶ್ರಮಾಡಬಹುದು.
ಕಟ್ಲೆಟ್
ಬೇಕಾಗುವ ಸಾಮಗ್ರಿ: ಕ್ಯಾಬೇಜ್ ಚೂರು- ಒಂದು ಕಪ್, ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ – ಒಂದು ಕಪ್, ಶುಂಠಿ ತರಿ- ಮೂರು ಚಮಚ, ಹೆಚ್ಚಿದ ಹಸಿಮೆಣಸು- ನಾಲ್ಕು, ನೀರುಳ್ಳಿ- ಎರಡು, ಕೊತ್ತಂಬರಿಸೊಪ್ಪು- ಆರು ಚಮಚ, ಕಡ್ಲೆಬೇಳೆ – ನಾಲ್ಕು ಚಮಚ, ಕಾರ್ನ್ಫ್ಲೋರ್- ನಾಲ್ಕು ಚಮಚ, ಗರಂಮಸಾಲ- ಎರಡು ಚಮಚ, ರಸ್ಕ್ನ ಪುಡಿ- ಎಂಟು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಚಿಟಿಕಿ ಇಂಗು ಅರಸಿನ ನಂತರ ನೀರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿಸೊಪ್ಪು ಸೇರಿಸಿ ಬಾಡಿಸಿಕೊಳ್ಳಿ. ಮೊದಲೇ ಆವಿಯಲ್ಲಿ ಬೇಯಿಸಿದ ಕ್ಯಾಬೇಜ್‌ನ್ನು ಇದಕ್ಕೆ ಸೇರಿಸಿ ಮಿಶ್ರಮಾಡಿ ಒಲೆಯಿಂದ ಇಳಿಸಿ. ನಂತರ ಇದಕ್ಕೆ ಮ್ಯಾಶ್‌ಮಾಡಿದ ಆಲೂಗಡ್ಡೆ, ಕಾರ್ನ್ಫ್ಲೋರ್ ಗರಂಮಸಾಲ ಮತ್ತು ಬೇಕಷ್ಟು ಉಪ್ಪು$ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ವಡೆಯ ತರ ಕೈಯಲ್ಲಿ ತಟ್ಟಿ ರಸ್ಕ್ನ ಪುಡಿಯಲ್ಲಿ ಮುಳುಗಿಸಿ ಕಾದ ತವಾದಲ್ಲಿ ತುಪ್ಪ ಹಾಕಿ ಎರಡೂ ಬದಿ ಬೇಯಿಸಿ. ಟೊಮೆಟೋ ಸಾಸ್ ಜೊತೆ ಸರ್ವ್ ಮಾಡಬಹುದು.
ಕ್ಯಾಬೇಜ್ ಪಕೋಡಾ
ಬೇಕಾಗುವ ಸಾಮಗ್ರಿ: ಕ್ಯಾಬೇಜ್ ಚೂರು- ಅರ್ಧ ಕಪ್, ನೀರುಳ್ಳಿ – ಎಂಟು ಚಮಚ, ಕಡ್ಲೆಹಿಟ್ಟು – ಒಂದು ಕಪ್, ಅಕ್ಕಿ ಹಿಟ್ಟು – ಕಾಲು ಕಪ್, ಸಾರಿನ ಪುಡಿ- ಎರಡು ಚಮಚ, ಖಾರಪುಡಿ- ಒಂದು ಚಮಚ, ಇಂಗಿನಪುಡಿ- ಒಂದು ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಎರಡು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಅಕ್ಕಿ ಮತ್ತು ಕಡ್ಲೆಹಿಟ್ಟನ್ನು ಇಂಗು, ಮೆಣಸಿನ ಪುಡಿ, ಖಾರ ಪುಡಿ ಉಪ್ಪು ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಸ್ವಲ್ಪ ನೀರು ಸೇರಿಸಿ ಮಿಶ್ರಮಾಡಿ. ನಂತರ ಇದಕ್ಕೆ ಹೆಚ್ಚಿದ ನೀರುಳ್ಳಿ ಮತ್ತು ಕ್ಯಾಬೇಜ್ ಚೂರುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಕಾದ ಎಣ್ಣೆಗೆ, ಕೈಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟು ಹಾಕಿ ಗರಿಗರಿಯಾಗಿ ಬೇಯಿಸಿದರೆ ಪಕೋಡಾ ಸವಿಯಲು ರೆಡಿ.
ಕ್ಯಾಬೇಜ್ ವಡೆ
ಬೇಕಾಗುವ ಸಾಮಗ್ರಿ: ಸಣ್ಣಗೆ ಹಚ್ಚಿದ ಎಲೆಕೋಸು- ಒಂದು ಕಪ್, ಅಕ್ಕಿ ಹುಡಿ- ಒಂದು ಕಪ್, ಕಡ್ಲೆಬೇಳೆ- ಒಂದು ಕಪ್, ಚಿರೋಟಿ ರವೆ- ಒಂದು ಕಪ್, ತೆಂಗಿನತುರಿ- ಒಂದು ಕಪ್, ಹೆಚ್ಚಿದ ಈರುಳ್ಳಿ – ಅರ್ಧ ಕಪ್, ಹೆಚ್ಚಿದ ಕರಿಬೇವು- ಎಂಟು ಚಮಚ, ಹಸಿಮೆಣಸಿನಕಾಯಿ- ಐದು, ಸಾರಿನಪುಡಿ- ನಾಲ್ಕು ಚಮಚ, ಎಳ್ಳು- ಕಾಲು ಚಮಚ, ಇಂಗಿನಪುಡಿ- ಒಂದು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ನೆನೆಸಿದ ಕಡ್ಲೆಬೇಳೆಯನ್ನು ನುಣ್ಣಗೆ ರುಬ್ಬಿ ಕೊನೆಗೆ ಚಿರೋಟಿರವೆ, ಕಾಯಿತುರಿ ಮತ್ತು ಅಕ್ಕಿಹುಡಿ ಸೇರಿಸಿ ಒಂದು ಸುತ್ತು ತಿರುಗಿಸಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಈರುಳ್ಳಿ, ಕ್ಯಾಬೇಜ್, ಹಸಿಮೆಣಸು ಇವುಗಳನ್ನು ಸೇರಿಸಿ ಮಿಶ್ರಮಾಡಿ. ಕೊನೆಗೆ ಕರಿಬೇವು, ಕೊತ್ತಂಬರಿಸೊಪ್ಪು, ಸಾರಿನಪುಡಿ, ಎಳ್ಳು, ಉಪ್ಪು ಇತ್ಯಾದಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ, ನಾಲ್ಕು ಚಮಚ ಬಿಸಿ ಎಣ್ಣೆ ಸೇರಿಸಿ ಮಿಶ್ರಮಾಡಿ ವಡೆಯ ಹಿಟ್ಟಿನ ಹದಕ್ಕೆ ಕಲಸಿ ಪ್ಲಾಸ್ಟಿಕ್ ಹಾಳೆಗೆ ಎಣ್ಣೆ ಸವರಿ ಬೇಕಾದ ಗಾತ್ರಕ್ಕೆ ತೆಳ್ಳಗೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಘಂ ಎನ್ನುವ ಸುವಾಸನೆಯ ಗರಿಗರಿ ವಡೆ ಸರ್ವ್ ಮಾಡಲು ರೆಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.