ರೈತರಿಗೆ ಪ್ರಯೋಜನವಾಗದ ರಾಜ್ಯದ ಕೃಷಿ ಮಾರುಕಟ್ಟೆ ಸುಧಾರಣೆಗಳು : ಸಿಎಜಿ ವರದಿ
Team Udayavani, Oct 13, 2019, 11:48 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ರೈತರ ಅಭಿವೃದ್ಧಿಗೆ ಉಪಯುಕ್ತವಾಗಲೆಂದು ಕರ್ನಾಟಕ ಸರಕಾರ ಜಾರಿ ಮಾಡಿದ ಕೃಷಿ ಮಾರುಕಟ್ಟೆ ಸುಧಾರಣೆಗಳು ಗುರಿಯನ್ನು ತಲುಪುವಲ್ಲಿ ಸೀಮಿತ ಯಶಸ್ಸು ಸಾಧಿಸಿದ್ದು, ವ್ಯಾಪಕ ಮಾರುಕಟ್ಟೆ ಅಭಾವ ಮತ್ತು ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಕೊರತೆ ಈ ಫಲಿತಾಂಶಕ್ಕೆ ಕಾರಣ ಎಂದು ಸಿಎಜಿ ವರದಿ ತಿಳಿಸಿದೆ.
ಪ್ರಾರಂಭದ ಹಂತದಲ್ಲಿ ಸುಧಾರಣೆಗಳನ್ನು ಪ್ರಬಲವಾಗಿ ಅನುಷ್ಠಾನಗೊಳಿಸಬೇಕೆಂಬ ದೃಷ್ಟಿಯಿಂದ ಏಕೀಕೃತ ಮಾರುಕಟ್ಟೆ ವೇದಿಕೆಯನ್ನು (ಯುಎಂಪಿ) ಕಲ್ಪಿಸಿಕೊಟ್ಟ ಕರ್ನಾಟಕ ಸರಕಾರ, ಕೃಷಿ ಮಾರುಕಟ್ಟೆಯನ್ನು ಅದರೊಂದಿಗೆ ವಿಲೀನಗೊಳಿಸಿತು. ಆ ಮೂಲಕ ನೇರವಾಗಿ ಕೃಷಿ ಮಾರುಕಟ್ಟೆಯಿಂದ ಸರಕುಗಳನ್ನು ಎಲೆಕ್ಟ್ರಾನಿಕ್ ಮಾರಾಟ ಪದ್ಧತಿಯಲ್ಲಿ ಮಾಡಲು ನಿರ್ಧರಿಸಲಾಗಿತ್ತು. 2014ರಲ್ಲಿ ಕರ್ನಾಟಕ ಸರಕಾರ, ಎನ್.ಸಿ.ಡಿ.ಇ.ಎಕ್ಸ್. ಸ್ಪಾಟ್ ಎಕ್ಸ್‌ಚೇಂಜ್ ಜಂಟಿ ಸಹಭಾಗಿತ್ವದಲ್ಲಿ ಎಸ್‌ಪಿವಿ ಹಾಗೂ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ (ಆರ್.ಎಂ.ಸ್.) ಅನ್ನು ರೈತರ ಅನುಕೂಲಕ್ಕಾಗಿ ಹೊರತಂದಿತ್ತು.
ಆದರೆ ಮಾರ್ಚ್ 2018 ರ ವರ್ಷಾಂತ್ಯಕ್ಕೆ ಕರ್ನಾಟಕದ ಆರ್ಥಿಕ ವಲಯದ ಕಾರ್ಯಕ್ಷಮತೆಯ ಗುಣಮಟ್ಟದ ಕುರಿತು ಸಿಎಜಿ ಸಮೀಕ್ಷೆ ನಡೆಸಿದ್ದು, ಏಕೀಕೃತ ಮಾರುಕಟ್ಟೆಯ ವಾಸ್ತವ ಸ್ಥಿತಿಯನ್ನು ಬಯಲು ಮಾಡಿದೆ. ಯುಎಂಪಿಯನ್ನು ಪ್ರಮುಖ 160 ಮಂಡಿಗಳಲ್ಲಿ ಜಾರಿಗೊಳಿಸಲಾಗಿದ್ದರೂ, 352 ಕಿರು ಮಂಡಿಗಳನ್ನು ಕೈಬಿಡಲಾಗಿದೆ ಎಂದು ಬೊಟ್ಟು ಮಾಡಿದೆ. ಅಲ್ಲದೆ ನಿಗದಿ ಪಡಿಸಿದ ಸರಕುಗಳನ್ನು ಯುಎಂಪಿ ಮೂಲಕ ಮಾರಾಟ ಮಾಡದೇ ಒಂದೆರಡು ಸರಕುಗಳಿಗೆ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವರದಿ ಹೇಳಿದೆ.
ನಿಬಂಧನೆ ಉಲ್ಲಂಘನೆ
ಯುಎಂಪಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ದೊರೆಯುತ್ತಿಲ್ಲ ಎಂಬ ಅಂಶವನ್ನು ವರಿದಿ ಕಂಡುಕೊಂಡಿದ್ದು, ಮಾರುಕಟ್ಟೆ ರೈತರ ಬೆಲೆಗಳಿಗೆ ನಿರ್ದಿಷ್ಟ ಬೆಲೆಯನ್ನು ಒದಗಿಸಿಕೊಡುವುದರಲ್ಲಿ ವಿಫಲವಾಗಿದೆ. 2017-18ರಲ್ಲಿ ಪ್ರಮುಖ 8 ಸರಕುಗಳಿಗಿದ್ದ ದರ ಎಂಎಸ್‌ಪಿ ಬೆಲೆಗಿಂತ ಕಡಿಮೆ ಇದೆ ಎಂದು ಸಿಎಜಿ ವರದಿ ತಿಳಿಸಿದೆ. ಇದಲ್ಲದೆ, ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸಿ 2014-18ರಲ್ಲಿ ಶೇ.3.95 ಕೋಟಿ ವಹಿವಾಟು ಶುಲ್ಕವನ್ನು ಆರ್‌ಇಎಂಎಸ್ ಪಾವತಿಸಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.
ಉದ್ದೇಶಗಳು ಸಾಕಾರಗೊಂಡಿಲ್ಲ
ಕೃಷಿ ಮಂಡಿಗಳಲ್ಲಿ ನಡೆಯುತ್ತಿದ್ದ ಏಕಸ್ವಾಮ್ಯ ಪದ್ಧತಿಯನ್ನು ಕೊನೆಗೊಳಿಸುವುದು ಕೃಷಿ ಮಾರುಕಟ್ಟೆ ಸುಧಾರಣೆಗಳ ಪ್ರಮುಖ ಉದ್ದೇಶವಾಗಿದ್ದು, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ ಎಂಬ ಅಂಶವನ್ನು ಸಿಎಜಿ ಗಮನಿಸಿದೆ. ಸುಧಾರಣೆಯ ಪ್ರಮುಖ ಉದ್ದೇಶವನ್ನು ಅನುಸರಿಸದೇ ಖಾಸಗಿ ಮಾರುಕಟ್ಟೆ ಮಾರಾಟಗಾರರಿಗೆ ಪರವಾನಗಿ ನೀಡಿದ್ದು, ಗೋದಾಮಿನ ಆಧಾರಿತ ಮಾರಾಟದ ಪರಿಕಲ್ಪನೆಯು ಸಹ ಅಪೇಕ್ಷಿತ ಫಲಿತಾಂಶವನ್ನು ನೀಡಿಲ್ಲ ಎಂಬ ಮಾಹಿತಿಯನ್ನು ವರದಿ ಹಂಚಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.