ನಿಕೋಟಿನ್ ಸೋಂಕನ್ನು ತಡೆಯುತ್ತಾ? ಹೀಗೊಂದು ಫ್ರಾನ್ಸ್ ತಜ್ಞರ ಸಂಶೋಧನೆ
Team Udayavani, Apr 25, 2020, 11:45 AM IST
ಮಣಿಪಾಲ: ಸಿಗರೇಟ್‌ನಲ್ಲಿರುವ ನಿಕೋಟಿನ್ ಅಂಶವು ಜನರಲ್ಲಿ ಕೋವಿಡ್ ಸೋಂಕು ಪ್ರತಿರೋಧಕವಾಗಿ ಕೆಲಸ ಮಾಡುತ್ತದೆ ಎಂದು ಫ್ರಾನ್ಸ್‌ನಲ್ಲಿ ನಡೆದ ಸಂಶೋಧನೆ ತಿಳಿಸಿದೆ.
ಈ ಕುರಿತು ಮತ್ತಷ್ಟು ಸಂಶೋಧನೆಗೆ ಪರೀಕ್ಷೆ ನಡೆಸಲು ತಜ್ಞರು ಮುಂದಾಗಿದ್ದಾರೆ. ಪ್ಯಾರಿಸ್‌ನ ಆಸ್ಪತ್ರೆಯೊಂದರಲ್ಲಿ 343 ಕೋವಿಡ್ ಸೋಂಕಿತರು ಮತ್ತು ಇದರ ಆರಂಭಿಕ ಲಕ್ಷಣಗಳುಳ್ಳ ಸುಮಾರು 139 ಮಂದಿಯನ್ನು ಸಂಶೋಧನೆಗೆ ಒಳಪಡಿಸಿದಾಗ ಈ ಅಂಶವು ತಿಳಿದು ಬಂದಿದೆ. ಪ್ಯಾರಿಸ್‌ನ ಜನಸಂಖ್ಯೆಯಲ್ಲಿ ಶೇ.35ರಷ್ಟು ಮಂದಿ ಧೂಮಪಾನಿಗಳಿದ್ದು, ಅದಕ್ಕೆ ಹೋಲಿಸಿದರೆ ಸಂಶೋಧನೆಗೆ ಒಳಗಾಗಿರುವ ರೋಗಿಗಳಲ್ಲಿರುವ ಧೂಮಪಾನಿಗಳ ಸಂಖ್ಯೆ ತುಂಬಾ ಕಡಿಮೆ.
“ಸಂಶೋಧನೆಗೆ ಒಳಗಾಗಿರುವ ಕೋವಿಡ್ ಸೋಂಕಿತರಲ್ಲಿ ಕೇವಲ ಶೇ. 5ರಷ್ಟು ಮಂದಿ ಮಾತ್ರ ಧೂಮಪಾನಿಗಳಿದ್ದಾರೆ’ ಎಂದು ಈ ಅಧ್ಯಯನದಲ್ಲಿ ಭಾಗಿಯಾಗಿರುವ ಇಂಟರ್ನಲ್ ಮೆಡಿಸಿನ್‌ನ ಪ್ರೊಫೆಸರ್ ಝಹೀರ್ ಅಮೋರಾ ಅವರು ತಿಳಿಸಿದ್ದಾರೆ.
ಚೀನದ ಜನಸಂಖ್ಯೆಯ ಶೇ. 26ರಷ್ಟು ಮಂದಿ ಧೂಮಪಾನಿಗಳಾಗಿದ್ದು, ಅಲ್ಲಿನ 1,000 ಕೋವಿಡ್ ಸೋಂಕಿತರಲ್ಲಿರುವ ಧೂಮಪಾನಿಗಳ ಸಂಖ್ಯೆ ಶೇ. 12.6 ಮಾತ್ರ ಆಗಿದೆ ಎಂದು ಕಳೆದ ತಿಂಗಳು ನ್ಯೂ ಇಂಗ್ಲಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನದಲ್ಲಿ ಉಲ್ಲೇಖೀಸಲಾಗಿತ್ತು.
ಕೋವಿಡ್ ವೈರಸ್ ಜೀವಕೋಶಕ್ಕೆ ಪ್ರವೇಶಿಸದಂತೆ ಹಾಗೂ ದೇಹಕ್ಕೆ ಹರಡದಂತೆ ನಿಕೋಟಿನ್ ತಡೆಯುತ್ತದೆ ಎನ್ನುತ್ತಾರೆ ಸಂಶೋಧನೆಯಲ್ಲಿ ಭಾಗಿಯಾದ ಫ್ರಾನ್ಸ್‌ನ ಪಾಸ್ಟರ್‌ನ ಇನ್‌ಸ್ಟಿಟ್ಯೂಷನ್‌ನ ಜೀನ್ ಪೀರ್ರೆ ಚಾಂಗ್ಯೂ.
ಈ ಸಂಶೋಧನೆಗೆ ಆರೋಗ್ಯ ಇಲಾಖೆಯ ಅಂಗೀಕಾರಕ್ಕಾಗಿ ಕಾಯಲಾಗುತ್ತಿದ್ದು, ಬಳಿಕ ಹೆಚ್ಚಿನ ಕ್ಲಿನಿಕಲ್ ಪರೀಕ್ಷೆ ಕೈಗೊಳ್ಳಲು ಸಂಶೋಧಕರು ನಿರ್ಧರಿಸಿದ್ದಾರೆ. ಧೂಮಪಾನ ಮಾಡದವರೂ ಈಗ ಕೋವಿಡ್ ತಡೆಯಲೆಂದು ಧೂಮಪಾನಿಗಳಾಗಬೇಡಿ. ನಿಕೋಟಿನ್‌ನಿಂದ ಅಡ್ಡಪರಿಣಾಮಗಳನ್ನು ಅವಗಣಿಸುವಂತಿಲ್ಲ ಎಂದು ಎಚ್ಚರಿಸಿದ್ದಾರೆ ತಜ್ಞರು.
ಫ್ರಾನ್ಸ್‌ನಲ್ಲಿ ವಾರ್ಷಿಕ ಸುಮಾರು 75 ಸಾವಿರ ಮಂದಿ ತಂಬಾಕು ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುತ್ತಿರುವುದನ್ನು ಮರೆಯುವಂತಿಲ್ಲ. ಫ್ರಾನ್ಸ್‌ನಲ್ಲೂ 1.55 ಲಕ್ಷ ಮಂದಿ ಸೋಂಕಿತರಿದ್ದು, 21,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.