200 ಕೋಟಿ ವರ್ಷಗಳಷ್ಟು ಪುರಾತನ ಅಂತರ್ಜಲ ಪತ್ತೆ!
Team Udayavani, Jun 7, 2021, 7:05 AM IST
ಒಟ್ಟಾವಾ: ಕೆನಡಾದ ಪ್ರಾಚೀನ ಕೊಳವೊಂದರ ಗರ್ಭದಲ್ಲಿ ಚಿಮ್ಮಿರುವ ನೀರಿನ ಸೆಲೆಯೇ ಭೂಮಿಯ ಅತ್ಯಂತ ಪುರಾತನ ಜಲಧಾರೆ ಎಂಬ ಅಂಶವೊಂದು ಈಗ ಬಹಿರಂಗವಾಗಿದೆ. 2016ರಲ್ಲಿ ನಡೆದ ಅಧ್ಯಯನವೇ ಇದಕ್ಕೆ ಸಾಕ್ಷಿ. ಇಲ್ಲಿ ಸಿಕ್ಕಿರುವ ನೀರು ಬರೋಬ್ಬರಿ 200 ಕೋಟಿ ವರ್ಷಗಳಷ್ಟು ಹಳೆಯದು ಎಂದು ಸಂಶೋಧಕರು ಹೇಳಿದ್ದಾರೆ.
2013ರಲ್ಲಿ ಕೆನಡಾದ ಒಂಟಾರಿಯೋದಲ್ಲಿರುವ ಕಿಡ್ ಎಂಬ ಗಣಿಯೊಳಗಿದ್ದ ರಹಸ್ಯ ಸುರಂಗದೊಳಕ್ಕೆ ವಿಜ್ಞಾನಿಗಳು ಸುಮಾರು 2.4 ಕಿ.ಮೀ. ನಷ್ಟು ಅಗೆದಾಗ, ಅಲ್ಲಿ ನೀರು ಸಿಕ್ಕಿತ್ತು. ಆ ನೀರು 150 ಕೋಟಿ ವರ್ಷಗಳಷ್ಟು ಪುರಾತನವಾದದ್ದು ಎಂಬುದು ತಿಳಿದು ಬಂದಿತ್ತು. ಆದರೆ, ಇದಾದ 3 ವರ್ಷಗಳ ಬಳಿಕ ಅಂದರೆ 2016ರಲ್ಲಿ ಇನ್ನಷ್ಟು ಆಳಕ್ಕೆ ಅಗೆದಾಗ (3.1 ಕಿ.ಮೀ.) ಅಲ್ಲಿ 2 ಶತಕೋಟಿ ವರ್ಷಗಳಷ್ಟು ಹಿಂದಿನದ್ದು ಎನ್ನಲಾದ ಅಂತರ್ಜಲ ಪತ್ತೆಯಾಗಿದೆ ಎಂದು ಟೊರೊಂಟೋ ವಿವಿಯ ಭೂರಸಾಯನ ವಿಜ್ಞಾನಿ ಬರ್ಬಾ ರಾ ಶೆವುìಡ್ ಲೊಲ್ಲಾರ್ ಹೇಳಿದ್ದಾರೆ.
ಹರಿವು ನಿಮಿಷಕ್ಕೆ 2 ಲೀಟರ್: ಮೇಲ್ಮೆ„ ಅಥವಾ ನೆಲದ ಮೇಲೆ ಹರಿಯುವ ನೀರಿಗೆ ಹೋಲಿಸಿದರೆ ಅಂತರ್ಜಲದ ಹರಿವು ಅತ್ಯಂತ ನಿಧಾನವಾಗಿ ಅಂದರೆ ವರ್ಷಕ್ಕೆ 1 ಮೀಟರ್ ನಷ್ಟು ಮಾತ್ರವೇ ಇರುತ್ತದೆ. ಆದರೆ, ಇಲ್ಲಿ ಬೋರ್‌ವೆಲ್ ಕೊರೆದಾಗ, ನೀರಿನ ಹರಿವು ನಿಮಿಷಕ್ಕೆ 2 ಲೀಟರ್ ನಷ್ಟಿತ್ತು. ಈ ಪ್ರಾಚೀನ ಅಂತರ್ಜಲದಲ್ಲಿ ಹೀಲಿಯಂ, ನಿಯಾನ್, ಆರ್ಗನ್, ಕ್ಸೆನಾನ್ ಮತ್ತಿತರ ಅನಿಲಗಳು ಕರಗಿರುವುದು ನೋಡಿದರೆ, ಈ ನೀರು ಬರೋಬ್ಬರಿ 200 ಕೋಟಿ ವರ್ಷಗಳಷ್ಟು ಹಿಂದಿನದು ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ ಸಂಶೋಧಕರು.
ಈ ಸಂಶೋಧನ ವರದಿಯನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 2016ರ ಡಿಸೆಂಬರ್ ನಲ್ಲಿ ನಡೆದ ಅಮೆರಿಕನ್ ಜಿಯೋಫಿಸಿಕಲ್ ಯೂನಿಯನ್ ಎಂಬ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.