Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
ಹಿಂದೂಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Team Udayavani, Nov 5, 2024, 11:48 AM IST
ಒಟ್ಟಾವ(ಕೆನಡಾ): ಕೆನಡಾದಲ್ಲಿ ಖಲಿಸ್ತಾನಿ( Khalistani) ಪ್ರತ್ಯೇಕತಾವಾದಿಗಳು ದೇಗುಲದ ಹೊರಗೆ ನೆರೆದಿದ್ದ ಹಿಂದೂಗಳ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ಸಾವಿರಾರು ಮಂದಿ ಹಿಂದೂಗಳು ಬ್ರಾಂಪ್ಟನ್ ಹಿಂದೂ ಸಭಾ ಮಂದಿರದ ಹೊರಭಾಗದಲ್ಲಿ ಸೋಮವಾರ (ನ.04) ಸಂಜೆ ಬೃಹತ್ ಪ್ರತಿಭಟನೆ(Hindus Protest )ನಡೆಸಿರುವುದಾಗಿ ವರದಿ ತಿಳಿಸಿದೆ.
ಯಾವುದೇ ಕಾರಣಕ್ಕೂ ಕೆನಡಾದಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಕೆನಡಾ ರಾಜಕಾರಣಿಗಳು, ಕಾನೂನು ಇಲಾಖೆ ಬೆಂಬಲ ನೀಡಬಾರದೆಂದು ಹಿಂದೂ ಸಂಘಟನೆ ಆಗ್ರಹಿಸಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆನಡಾದಲ್ಲಿರುವ ಹಿಂದೂಗಳ ದೇವಾಲಯವನ್ನು ಗುರಿಯಾಗಿರಿಸಿಕೊಂಡು ಹಲವು ದಾಳಿ ನಡೆಸಲಾಗಿದೆ. ಈ ಹಿಂದೂ ಫೋಬಿಯಾ ದೇಶದಲ್ಲಿ ನಿಲ್ಲಬೇಕು ಎಂದು Coalition Of Hindus of north America (CoHNA) ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ಒತ್ತಾಯಿಸಿದೆ.
ಹಿಂದೂಗಳ ದೇವಸ್ಥಾನದ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ದಾಳಿ ಖಂಡಿಸಿ ಸಾವಿರಾರು ಮಂದಿ ಹಿಂದೂಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆನಡಾದ ಬ್ರಾಂಪ್ಟನ್ ನಲ್ಲಿರುವ ಹಿಂದೂ ದೇವಾಲಯದ ಹೊರಗೆ ಹಿಂದೂಗಳ ಮೇಲೆ ನಡೆದ ಹಲ್ಲೆಯನ್ನು ಭಾರತದ ರಾಜತಾಂತ್ರಿಕರ ಮೇಲೆ ಕೆನಡಾ ಕೈಗೊಂಡ ದ್ವೇಷದ ಕ್ರಮಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಕಠೋರ ಶಬ್ದಗಳಲ್ಲಿ ಖಂಡಿಸಿ, ಇದು ಹೇಡಿತನದ ಕೃತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.